More

    10 ವರ್ಷಗಳ ಬಳಿಕ ಪಾಕ್​ ತಂಡಕ್ಕೆ ವಾಪಸಾದ ಫವಾದ್​ ಅಲಂ..!

    ಸೌಥಾಂಪ್ಟನ್​: ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಫವಾದ್​ ಅಲಂ ಬರೋಬ್ಬರಿ 10 ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದಾರೆ. ಗುರುವಾರ ಸೌಥಾಂಪ್ಟನ್​ನಲ್ಲಿ ಆರಂಭಗೊಂಡ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಪಾಕಿಸ್ತಾನ ತಂಡ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಅಜರ್​ ಅಲಿ ಸಾರಥ್ಯದ ಬಳಗಕ್ಕೆ ಕಡೆಗೂ ವಾಪಸಾದವರು ಫವಾದ್​ ಅಲಂ. 2009ರ ನವೆಂಬರ್​ನಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡದ ಪರ ಆಡಿದ್ದ ಫವಾದ್​, ಅಂತಿಮವಾಗಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದರು. ಈ ನಡುವೆ ಪಾಕಿಸ್ತಾನ ಬರೋಬ್ಬರಿ 88 ಟೆಸ್ಟ್​ ಪಂದ್ಯಗಳನ್ನಾಡಿತ್ತು.

    ಇದನ್ನೂ ಓದಿ: ವಿಶ್ವ ಎಡಚರ ದಿನಕ್ಕೆ ಯುವಿ, ರೈನಾ ಸಂಭ್ರಮಿಸಿದ್ದು ಹೇಗೆ ಗೊತ್ತೆ..?

    2009ರಲ್ಲಿ ನ್ಯೂಜಿಲೆಂಡ್​ ಎದುರು ಕಡೆ ಬಾರಿಗೆ ಪಾಕ್​ ಪರ ಆಡಿದ್ದ ಫವಾದ್​, ಫಾರ್ಮ್ ಕಳೆದುಕೊಂಡ ಬಳಿಕ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಆದರೆ, ರಾಷ್ಟ್ರೀಯ ತಂಡಕ್ಕೆ ವಾಪಸ್​ ಆಗಲು 10 ವರ್ಷಗಳೇ ಬೇಕಾಯಿತು. ಇದರಲ್ಲೂ ಫವಾದ್​ ದಾಖಲೆ ನಿಮಿರ್ಸಿದ್ದಾರೆ. ಅತಿಹೆಚ್ಚು ಟೆಸ್ಟ್​ ಪಂದ್ಯಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ವಾಪಸಾದ ವಿಶ್ವದ 7ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಗ್ಯಾರೆಥ್​ ಬ್ಯಾಟಿ 142 ಟೆಸ್ಟ್​ ಪಂದ್ಯಗಳ ಬಳಿಕ ತಂಡಕ್ಕೆ ವಾಪಸಾಗಿದ್ದರು. ಪಾಕ್​ ಯೂನಿಸ್​ ಅಹಮದ್​, 104 ಪಂದ್ಯಗಳ ರಾಷ್ಟ್ರೀಯ ತಂಡಕ್ಕೆ ವಾಪಸಾಗಿದ್ದರು.
    ಎರಡು ಪಂದ್ಯಗಳ ನಡುವೆ ಹೆಚ್ಚು ಟೆಸ್ಟ್​ ತಪ್ಪಿಸಿಕೊಂಡಿರುವ ಆಟಗಾರರು
    ಪಂದ್ಯ, ಆಟಗಾರ, ದೇಶ
    142, ಗ್ಯಾರೆಥ್​ ಬ್ಯಾಟಿ, ಇಂಗ್ಲೆಂಡ್​
    114, ಮಾಟಿರ್ನ್​ ಬಿಕ್​ನೆಲ್​, ಇಂಗ್ಲೆಂಡ್​
    109, ಫ್ಲಾಯ್ಡ್ ರೀಫೆರ್​, ವೆಸ್ಟ್​ ಇಂಡೀಸ್​
    104, ಯೂನಿಸ್​ ಅಹಮದ್​, ಪಾಕಿಸ್ತಾನ
    103, ಡೆರೆಕ್​ ಶಾಚ್ಕೆಲ್ಟನ್​, ಇಂಗ್ಲೆಂಡ್​,
    96, ವೆಸ್​ ಜಾಕ್ಸನ್​, ಇಂಗ್ಲೆಂಡ್​
    88, ಫವಾದ್​ ಅಲಂ, ಪಾಕಿಸ್ತಾನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts