ಇಸ್ಲಾಮಾಬಾದ್: ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ಗೆ ಸೇರಿದ ಪ್ರಯಾಣಿಕ ವಿಮಾನವೊಂದು ಶುಕ್ರವಾರ ಜಿನ್ಹಾ ಇಂಟರ್ನ್ಯಾಷನಲ್ ಏರ್ಪೋರ್ಟ್ ಸಮೀಪ ಪತನವಾಗಿದೆ. ವಿಮಾನ ಲಾಹೋರ್ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ವಿಮಾನದಲ್ಲಿ 107 ಪ್ರಯಾಣಿಕರಿದ್ದರು ಎಂಬ ಪ್ರಾಥಮಿಕ ಮಾಹಿತಿಯನ್ನು ಪಾಕ್ ಮಾಧ್ಯಮಗಳು ಬಿತ್ತರಿಸಿವೆ.
ಇದನ್ನೂ ಓದಿ: VIDEO| ಕೆನಡಾ ಮೂಲದ ಕನ್ನಡಿಗನಿಂದ ಕರೊನಾಗೆ ಔಷಧಿ: ವಿಶ್ವದ ಗಮನ ಸೆಳೆದ ಸಂಶೋಧನೆ!
ಏರ್ಬಸ್ ನಿರ್ಮಿತ ಎ320 ಮಾದರಿಯ ವಿಮಾನ ಇದಾಗಿದ್ದು, ಏರ್ಪೋರ್ಟ್ನಲ್ಲಿ ಇಳಿಯುವ ಮುನ್ನ ಪತನವಾಗಿದೆ. ವಿಮಾನದಲ್ಲಿ 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದೆ. ವಿಮಾನ ಮಾಡೆಲ್ ಕಾಲನಿ ಸಮೀಪದ ವಸತಿ ಪ್ರದೇಶದಲ್ಲಿ ಪತನವಾಗಿದ್ದು ಸಾವು-ನೋವು, ನಾಶ ನಷ್ಟದ ಅಂದಾಜು ಇನ್ನಷ್ಟೇ ಲಭಿಸಬೇಕಾಗಿದೆ.
ಇದನ್ನೂ ಓದಿ: ಐಸಿಎಸ್ಇ ಮತ್ತು ಐಎಸ್ಸಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ವಿಮಾನ ಬಿದ್ದ ಕೂಡಲೇ ಸ್ಥಳದಲ್ಲಿ ಭೀಕರ ಸದ್ದು ಮತ್ತು ಧೂಳು ಎದ್ದಿದ್ದು, ಬಳಿಕ ಹೊಗೆ ಆವರಿಸಿಕೊಂಡಿದೆ. ಹೀಗಾಗಿ ವಿಮಾನದಲ್ಲಿದ್ದವರ ಸ್ಥಿತಿಗತಿ ಮತ್ತು ಪತನ ಸ್ಥಳದಲ್ಲಿ ಯಾರಾದರೂ ಇದ್ದಿದ್ದರೆ ಅವರ ಸ್ಥಿತಿಗತಿ ಏನು ಎಂಬುದು ಇನ್ನೂ ಗೊತ್ತಿಲ್ಲ. ಪರಿಹಾರ ಕಾರ್ಯ ಪ್ರಗತಿಯಲ್ಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
https://www.facebook.com/VVani4U/videos/183434036244775/