More

    ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಮುಳುವಾಗುತ್ತಾ ‘ನಯಾ ಪಾಕಿಸ್ತಾನ್​’ ನಕ್ಷೆ?

    ಇಸ್ಲಾಮಾಬಾದ್​: ನೆರೆಯ ನೇಪಾಳ ಮಾಡಿದ ಕೃತ್ಯವನ್ನೇ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಮಾಡಿದ್ದಾರೆ. ನಯಾ ಪಾಕಿಸ್ತಾನ್​ ಹೆಸರಿನಲ್ಲಿ ಭಾರತದ ಅಧೀನದಲ್ಲಿರುವ ಭೂಭಾಗವನ್ನು ಒಳಗೊಂಡಂತೆ ಹೊಸ ನಕ್ಷೆ ಬಿಡುಗಡೆಗೊಳಿಸಿದ್ದಾರೆ. ಇದು ಪಾಕ್​ ಪರಿತಪಿಸಲೇಬೇಕಾದ ಕೃತ್ಯ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

    ಪಾಕಿಸ್ತಾನದಿಂದ ಇಂಥ ಕೃತ್ಯ ಇದೇ ಮೊದಲೇನಲ್ಲ, 1947-48ರಲ್ಲಿ ಮಹಮ್ಮದ್​ ಅಲಿ ಜಿನ್ನಾ ಆಡಳಿತಾವಧಿಯಲ್ಲೂ ಬಿಡುಗಡೆಯಾಗಿದ್ದವು. ಸದ್ಯ ಇಮ್ರಾನ್​ ಖಾನ್​ ಬಿಡುಗಡೆ ಮಾಡಿರುವ ಹೊಸ ನಕ್ಷೆ ಸಂಪೂರ್ಣ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನದ ಪ್ರದೇಶ ಎಂದು ತೋರಿಸಲಾಗಿದೆ. ಮಾತ್ರವಲ್ಲದೇ, ಗುಜರಾತ್​​ನ ಜುನಾಘಡ್​ ಭಾಗವನ್ನು ಪಾಕ್​ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

    ಇದನ್ನೂ ಓದಿ; ಪಾಕಿಸ್ತಾನದಿಂದ ನಮಗೆ ಮುಕ್ತಿ ಬೇಕು; ಪಾಕ್​ ಆಕ್ರಮಿತ ನೆಲದಲ್ಲಿ ಮೊಳಗಿದೆ ಬಂಡಾಯದ ಕಹಳೆ 

    ರಾಜಕೀಯ ಉದ್ದೇಶಗಳೊಂದಿಗೆ ಜನರನ್ನು ಮರಳು ಮಾಡಲು ಇದನ್ನು ಬಿಡುಗಡೆ ಮಾಡಲಾಗಿದ್ದರೂ, ಇದರಿಂದಾಗುವ ಪರಿಣಾಮಗಳಿಗೆ ಪಾಕ್​ ಬೆಲೆ ತೆರಲೇಬೇಕಾಗುತ್ತದೆ. ಜಮ್ಮು ಕಾಶ್ಮೀರಕ್ಕೆ ಸ್ವಾಯತ್ತೆ ಬೇಕು ಎಂದು ಹೋರಾಡುತ್ತಿರುವ ಪ್ರತ್ಯೇಕತಾವಾದಿಗಳ ಶವ ಪೆಟ್ಟಿಗೆ ಮೇಲೆ ಕೊನೆಯ ಮೊಳೆ ಹೊಡೆದಂತಾಗಿದೆ. ಏಕೆಂದರೆ, ಈ ನಕ್ಷೆ ಪ್ರಕಾರ ಜಮ್ಮು ಕಾಶ್ಮೀರ ಸಂಪೂರ್ಣವಾಗಿ ಅವರದ್ದು…! ಇದಲ್ಲದೇ, ಗಿಲ್ಗಿಟ್​- ಬಾಲ್ಟಿಸ್ತಾನ್​ ಪರ್ವತ ಪ್ರದೇಶದಲ್ಲಿ ಪ್ರತ್ಯೇಕ ಆಡಳಿತ ಹೊಂದಬೇಕೆಂಬ ಸ್ಥಳೀಯರ ಕನಸು ನುಚ್ಚುನೂರಾಗಿದೆ…!

    ಇದಷ್ಟೇ ಅಲ್ಲ, ಗಡಿ ವಿಚಾರದಲ್ಲಿ ಯಾವುದೇ ವಿಚಾರವನ್ನು ದ್ವಿಪಕ್ಷೀಯ ಮಾತುಕತೆ ಬಗೆಹರಿಸಿಕೊಳ್ಳುವ 1972 ಹಾಗೂ 1999ರ ಒಪ್ಪಂದವನ್ನು ಪಾಕ್​ ನಿರಾಕರಿಸಿದಂತಾಗಿದೆ. ಉಳಿದ ದ್ವಿಪಕ್ಷೀಯ ಒಪ್ಪಂದಗಳು ಕೂಡ ಇದೇ ಹಾದಿ ಹಿಡಿಯಲಿವೆ. ಉದಾಹರಣೆಗೆ ಇಂಡಸ್​, ಝೀಲಂ, ಚೇನಾಬ್​ ನದಿ ನೀರು ಬಳಸಿಕೊಳ್ಳುವ ಪಾಕ್​ ಅವಕಾಶ ಹಾಗೂ ಬಿಯಾಸ್, ರಾವಿ, ಸತ್ಲೇಜ್​ ನದಿ ನೀರು ಬಳಸುವ ಹಕ್ಕು ಭಾರತಕ್ಕೆ ನೀಡುವ 1960ರ ಇಂಡಸ್​ ಜಲ ಒಪ್ಪಂದವೂ ಮುರಿದು ಬಿದ್ದಂತಾಗಲಿದೆ.
    ಇದರಿಂದ ಅರ್ಥವಾಗುವ ಇನ್ನೊಂದು ಅಂಶವೆಂದರೆ, ನಕ್ಷೆಯಲ್ಲಿ ಚೀನಾ ತಂಟೆಗೆ ಪಾಕಿಸ್ತಾನ ಹೋಗಿಯೇ ಇಲ್ಲ. ನಯಾ ಪಾಕಿಸ್ತಾನ್​ ನಕ್ಷೆಯನ್ನು ರಾಜಕೀಯ ಅಸಂಬದ್ಧತೆ ಎಂದು ಭಾರತ ವ್ಯಾಖ್ಯಾನಿಸಿದೆ.

    ಇದನ್ನೂ ಓದಿ; ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಈ ಸುಂದರಿಯನ್ನು ಮಂಚಕ್ಕೆ ಕರೆದಿದ್ದರಂತೆ…! 

    ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪರವಾಗಿ ಬೆಂಬಲ ಗಿಟ್ಟಿಸಲು ವಿಫಲವಾದ ಪಾಕಿಸ್ತಾನ ಈ ಕೃತ್ಯಕ್ಕೆ ಕೈ ಹಾಕಿದೆ ಎಂದೇ ವಿಶ್ಲೇಷಿಸಲಾಗಿದೆ.

    ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್​ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ; ಒಂದೇ ಕುಟುಂಬದ 13 ಜನ ಪಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts