More

    ಟಿ20 ವಿಶ್ವಕಪ್: ಸೆಮಿಫೈನಲ್ ಪ್ರವೇಶಿಸಿದ ಪಾಕಿಸ್ತಾನ ತಂಡ

    ಅಬುಧಾಬಿ: ಸತತ 4ನೇ ಜಯ ದಾಖಲಿಸಿದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತು. ಶೇಖ್‌ಜಯೇದ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ 45 ರನ್‌ಗಳಿಂದ ನಮೀಬಿಯ ತಂಡವನ್ನು ಮಣಿಸಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ, ಆರಂಭಿಕರಾದ ಮೊಹಮದ್ ರಿಜ್ವಾನ್ (79*ರನ್, 50 ಎಸೆತ, 8 ಬೌಂಡರಿ, 4 ಸಿಕ್ಸರ್) ಹಾಗೂ ಬಾಬರ್ ಅಜಮ್ (70ರನ್, 49 ಎಸೆತ, 7 ಬೌಂಡರಿ) ಜೋಡಿ ಮೊದಲ ವಿಕೆಟ್‌ಗೆ ಪೇರಿಸಿದ 113 ರನ್ ಜತೆಯಾಟದ ಫಲವಾಗಿ 2 ವಿಕೆಟ್‌ಗೆ 189 ರನ್ ಪೇರಿಸಿತು. ಬಳಿಕ ಈ ಬೃಹತ್ ಮೊತ್ತ ಬೆನ್ನಟ್ಟಿದ ನಮೀಬಿಯ ತಂಡ 5 ವಿಕೆಟ್‌ಗೆ 144 ರನ್‌ಗಳಿಸಿತು.

    ಪಾಕಿಸ್ತಾನ: 2 ವಿಕೆಟ್‌ಗೆ 189 (ಮೊಹಮದ್ ರಿಜ್ವಾನ್ 79*, ಬಾಬರ್ ಅಜಮ್ 70, ಮೊಹಮದ್ ಹಫೀಜ್ 32*, ಡೇವಿಡ್ ವೈಸ್ 30ಕ್ಕೆ 1). ನಮೀಬಿಯ: 5 ವಿಕೆಟ್‌ಗೆ 144 (ಡೇವಿಡ್ ವೈಸ್ 43*, ಇಮಾದ್ ವಾಸೀಮ್ 13ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts