More

    VIDEO| ಗಾರ್ಲಿಕ್​ ಅಂದ್ರೆ ಶುಂಠಿ ಎಂದ ಪಾಕ್​ ಸಚಿವ! ಜಾಲತಾಣದಲ್ಲಿ ನಗೆಪಾಟಲು

    ಇಸ್ಲಮಾಬಾದ್​: ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್​ ಚೌಧರಿ ಸುದ್ದಿಗೋಷ್ಠಿಯೊಂದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಗಳು ಇಳಿದಿರುವ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಗಾರ್ಲಿಕ್​ ಎಂಬ ಬೆಳ್ಳುಳ್ಳಿಯ ಇಂಗ್ಲಿಷ್​ ಹೆಸರಿಗೆ ಹಿಂದಿ ಶಬ್ದ ಹೇಳುವಾಗ ಎಡವಿದ್ದಾರೆ. ‘ಗಾರ್ಲಿಕ್​ ಅಂದ್ರೆ ಶುಂಠಿ’ ಎನ್ನುತ್ತಾ ಮಾತು ಮುಂದುವರಿಸಿರುವ ಅವರ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರಲ್ಲಿ ನಗೆಯುಕ್ಕಿಸಿದೆ.

    ಕೆಲವು ದಿನಗಳ ಹಿಂದೆ ಟಿವಿಯಲ್ಲಿ ಪ್ರಸಾರವಾದ ಅವರ ಮಾತುಗಳ ದೃಶ್ಯವನ್ನು ಪಾಕಿಸ್ತಾನಿ ಪತ್ರಕರ್ತೆ ನೈಲಾ ಇನಾಯತ್​, ಮಂಗಳವಾರ ರಾತ್ರಿ, ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಅದು ಈವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಇನಾಯತ್​ ತಮ್ಮ ಪೋಸ್ಟ್​ಗೆ “ಗಾರ್ಲಿಕ್​ ಈಸ್​ ಅದ್ರಕ್​ ಎಂದು ಇನ್​ಫರ್ಮೇಶನ್​ ಮಿನಿಸ್ಟರ್​ ಫವಾದ್​ ಚೌಧರಿ ಹೇಳಿದ್ದಾರೆ. ನಾವು ಪ್ರತಿದಿನ ಏನಾದರೂ ಹೊಸದನ್ನು ಕಲಿಯುತ್ತೇವೆ” ಎಂದು ಹಾಸ್ಯ ಮಾಡಿದ್ದಾರೆ.

    ಈ ವಿಡಿಯೋ ತುಣುಕಲ್ಲಿ ಫವಾದ್​​ ಚೌಧರಿ, ಹಿಂದಿಯಲ್ಲಿ ಈರುಳ್ಳಿಗೆ ಪ್ಯಾಸ್​ ಎಂದು ಸರಿಯಾಗೇ ಹೇಳುತ್ತಾರೆ. ಆದರೆ ಗಾರ್ಲಿಕ್​ ಅರ್ಥಾತ್​ ಬೆಳ್ಳುಳ್ಳಿಗೆ ಸರಿಯಾದ ಹಿಂದಿ ಶಬ್ದಕ್ಕೆ ತಡಕಾಡುತ್ತಾರೆ. ಅಲ್ಲಿದ್ದ ಜನರು ಲೆಹಸುನ್​ ಎಂದು ಹೇಳಿಕೊಟ್ಟರೂ, ಗಾರ್ಲಿಕ್​​ ಈಸ್ ಅದ್ರಕ್​..ಅದ್ರಕ್​ ಎಂದು ಶುಂಠಿಯ ಹಿಂದಿ ಹೆಸರನ್ನು ಬಳಸುತ್ತಾರೆ. ವಿಡಿಯೋ ನೋಡಿ ನೆಟ್ಟಿಗರು ನಗಾಡುತ್ತಿದ್ದು, ಸಾವಿರಾರು ಲೈಕುಗಳು-ರೀಟ್ವೀಟ್​ಗಳು ಕಂಡುಬಂದಿವೆ. (ಏಜೆನ್ಸೀಸ್)

    ಕತ್ರೀನಾ – ವಿಕಿ ಕೌಶಲ್ ಮದುವೆಗೆ ‘ನೋ ಫೋನ್​’​ ನಿಯಮ?!

    ಬಿಜೆಪಿ ಸಂಸದ ಗೌತಮ್​ ಗಂಭೀರ್​ಗೆ ಜೀವ ಬೆದರಿಕೆ; ಭದ್ರತೆ ಹೆಚ್ಚಿಸಿದ ದೆಹಲಿ ಪೊಲೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts