More

    ಪಂಜಾಬಿಗರಿಗಾಗಿ ಹೃದಯ ಮಿಡಿಯುತ್ತೆ! ರೈತರ ಹೋರಾಟದ ಬಗ್ಗೆ ಮಾತನಾಡಿದ ಪಾಕ್​ ಸಚಿವ

    ಇಸ್ಲಾಮಾಬಾದ್: ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಭಾರತ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಚರ್ಚೆ ಆರಂಭವಾಗಿದೆ. ಇದೀಗ ಪಾಕಿಸ್ತಾನವೂ ನಮ್ಮ ದೇಶದ ರೈತರ ಬಗ್ಗೆ ಮಾತನಾಡಲು ಆರಂಭಿಸಿದೆ. ಭಾರತದಲ್ಲಿ ಈ ರೀತಿ ನಡೆಯುತ್ತಿರುವುದರಿಂದಾಗಿ ಪೂರ್ತಿ ವಿಶ್ವದಲ್ಲಿರುವ ಪಂಜಾಬಿಗರು ನೋವಿನಲ್ಲಿದ್ದಾರೆ ಎಂದು ಪಾಕಿಸ್ತಾನಿ ಸಚಿವರೊಬ್ಬರು ಹೇಳಿದ್ದಾರೆ.

    ಪಾಕ್​ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಭಾರತದ ರೈತ ಹೋರಾಟದ ಬಗ್ಗೆ ಎರಡನೇ ಬಾರಿ ಟ್ವೀಟ್​ ಮಾಡಿದ್ದಾರೆ. ‘ಭಾರತದಲ್ಲಿ ನಡೆಯುತ್ತಿರುವ ಘಟನೆಯಿಂದ ವಿಶ್ವದ ಪಂಜಾಬಿಗರು ನೋವಿನಲ್ಲಿದ್ದಾರೆ. ಮಹಾರಾಜ ರಂಜಿತ್​ ಸಿಂಗ್​ ಮರಣದ ನಂತರ ಪಂಜಾಬಿಗರನ್ನು ಒಂದು ರೀತಿಯಲ್ಲಿ ಮುತ್ತಿಗೆ ಹಾಕಿ ನೋಡಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದ ಪಂಜಾಬಿಗಳು ಈಗ ತಮ್ಮ ಅಜ್ಞಾನಕ್ಕೆ ಬಲಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಕಿಡಿಗೇಡಿಗಳಿಂದ ದಾಳಿಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಎದುರಾಯ್ತು ಮತ್ತೊಂದು ಸಮಸ್ಯೆ!

    ಬಿಜೆಪಿ ಸರ್ಕಾರ ಪಂಜಾಬಿ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ನಮ್ಮ ದೇಶದ ಗಡಿಯುದ್ದಕ್ಕೂ ವಾಸಿಸುವ ಪಂಜಾಬಿ ರೈತರಿಗಾಗಿ ನನ್ನ ಹೃದಯ ಮಿಡಿಯುತ್ತದೆ ಎಂದು ಅವರು ಹೇಳಿದ್ದಾರೆ.

    ಫವಾದ್​ ಅವರ ಈ ಟ್ವೀಟ್​ ಅನೇಕರ ಆಕ್ರೋಶಕ್ಕೂ ಕಾರಣವಾಗಿದೆ. ಪಾಕಿಸ್ತಾನದ ಭಾಗದಲ್ಲಿರುವ ಪಂಜಾಬಿಗರ ಪರಿಸ್ಥಿತಿ ಹೇಗಿದೆ? ಅವರಿಗೆ ಸರಿಯಾದ ನ್ಯಾಯ ಸಿಗುತ್ತಿದೆಯೇ? ಕಬ್ಬಿನ ವಿಚಾರದಲ್ಲಿ ನೂರಾರು ಪಂಜಾಬಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲವೇ ಎಂದು ಭಾರತೀಯರು ಪ್ರಶ್ನಿಸಲಾರಂಭಿಸಿದ್ದಾರೆ.

    ಇದನ್ನೂ ಓದಿ: ‘ಸಂಜನಾಗೆ ಬಲವಂತವಾಗಿ ಮತಾಂತರ ಮಾಡಿಸಲಾಗಿತ್ತು!’ ದಾಖಲಾಯ್ತು ಹೊಸ ದೂರು

    ಇದಕ್ಕೂ ಮೊದಲು ಡಿಸೆಂಬರ್ 7 ರಂದು ಫವಾದ್ ಹುಸೇನ್ ಅವರು ಭಾರತದ ರೈತರ ಸಾಧನೆ ಬಗ್ಗೆ ಟ್ವೀಟ್ ಮಾಡಿದ್ದರು. ಎಲ್ಲಿಯಾದರೂ ಅನ್ಯಾಯ ಸಂಭವಿಸಿದಲ್ಲಿ ಅದು ವಿಶ್ವದ ನ್ಯಾಯಕ್ಕೆ ಧಕ್ಕೆ ತರುತ್ತದೆ ಎಂದು ಹುಸೇನ್ ಹೇಳಿದ್ದರು. ಪಂಜಾಬಿ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಮಾತನಾಡಬೇಕು. ಮೋದಿಯ ನೀತಿಗಳು ಇಡೀ ಪ್ರದೇಶವನ್ನು ಬೆದರಿಸುತ್ತಿವೆ ಎಂದು ಭಾರತ ಸರ್ಕಾರದ ಮೇಲೆ ಆರೋಪ ಮಾಡಿದ್ದರು. (ಏಜೆನ್ಸೀಸ್​)

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts