More

    ಪಾಕ್​ ಯುವತಿಯ ಮರ್ಯಾದೆ ಹತ್ಯೆ: ಇಟಲಿ ಕೋರ್ಟ್​ನಲ್ಲಿ ಪಾಲಕರಿಗೆ ಜೀವಾವಧಿ ಶಿಕ್ಷೆ

    ರೋಮ್: ನಿಶ್ಚಯಿಸಿದ ಮದುವೆಯನ್ನು ನಿರಾಕರಿಸಿದ್ದಕ್ಕಾಗಿ 18 ವರ್ಷದ ಮಗಳನ್ನು ಕೊಂದ ಪಾಕಿಸ್ತಾನಿ ದಂಪತಿಗೆ ಇಟಲಿಯ ರೆಗಿಯೊ ಎಮಿಲಿಯಾ ನ್ಯಾಯಾಲಯವು ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಮರ್ಯಾದಾ ಹತ್ಯೆ ಪ್ರಕರಣ ಇದಾಗಿದ್ದು, ಯಾವ ರೀತಿಯ ತೀರ್ಪು ಬರಬಹುದೆಂದು ಕುತೂಹಲ ಮೂಡಿಸಿತ್ತು.

    ಇದನ್ನೂ ಓದಿ: ಚಹಾ ಕೊಡಲು ತಡ ಮಾಡಿದ ಪತ್ನಿ; ಸಿಟ್ಟಿನಿಂದ ಆಕೆಯ ಶಿರಚ್ಛೇದ ಮಾಡಿದ
    ಇಟಲಿಯಲ್ಲಿ ವಾಸವಿದ್ದ ಸಮನ್ ಅಬ್ಬಾಸ್(18) ಇಟಲಿಯ ಯುವಕನೊಂದಿಗೆ ಡೇಟಿಂಗ್ ನಲ್ಲಿದ್ದಳು. ಅವನನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಬೊಲೊಗ್ನಾದಲ್ಲಿ ಬೀದಿಯಲ್ಲಿ ಇಬ್ಬರೂ ಚುಂಬಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದನ್ನು ಪಾಕಿಸ್ತಾನದಲ್ಲಿದ್ದ ಆಕೆಯ ಪಾಲಕರು ಗಮನಿಸಿದ್ದರು. ಅಷ್ಟೇ ಅಲ್ಲ ತಮ್ಮ ಸಂಪ್ರದಾಯ, ಇಸ್ಲಾಂ ಆಚರಣೆಗಳಿಂದ ದೂರವಾಗಿ ಪಾಶ್ಚಿಮಾತ್ಯ ಸಮಸ್ಕೃತಿ ರೂಢಿಸಿಕೊಂಡಿದ್ದಕ್ಕೆ ಕುಪಿತರಾಗಿದ್ದರು.

    ಬಳಿಕ ಮಗಳಿಗೆ ಬುದ್ಧಿವಾದ ಹೇಳಿದ್ದರೂ ಆಕೆ ಬದಲಾಗಿರಲಿಲ್ಲ. ಮಗಳಿಗೆ ನಿಖಾ(ಮದುವೆ) ಮಾಡಿದರೆ ಸರಿಹೋಗಬಹುದೆಂದಿ ತೀರ್ಮಾನಿಸಿ ಕಡೆಗೆ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗಲು ತಿಳಿಸುತ್ತಾರೆ. ಆದರೆ ಆಕೆ ನಿರಾಕರಿಸುತ್ತಾಳೆ. ಇದರಿಂದ ಮತ್ತಷ್ಟು ಉಗ್ರರೂಪ ತಾಳಿದ ಆಕೆಯ ಪಾಲಕರು ಮಗಳನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ತೀರ್ಮಾನಿಸಿದ್ದರು. ಇದರ ಸುಳಿವು ಅರಿತ ಆಕೆ ಮತ್ತು ಆಕೆಯ ಪ್ರಿಯಕರ ಪ್ರಾಣ ಭಯವಿದೆ ಎಂದು ಪೊಲೀಸರಿಗೆ ತಿಳಿಸಿದ್ದರು.

    ಇದೆಲ್ಲ ನಡೆದ ಬಳಿಕ ಸಮನ್ ಅಬ್ಬಾಸ್ ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಇಟಾಲಿಯನ್ ತನಿಖಾಧಿಕಾರಿಳು 2022ರ ನವೆಂಬರ್​ನಲ್ಲಿ ಉತ್ತರ ಇಟಲಿಯಲ್ಲಿ ಆಕೆಯ ತಂದೆ ಕೆಲಸ ಮಾಡುತ್ತಿದ್ದ ತೋಟದಲ್ಲಿನ ಪಾಳುಬಿದ್ದ ಮನೆಯಲ್ಲಿ ಮಣ್ಣು ಅಗೆದು ಆಕೆಯ ಮೃತದೇಹವನ್ನು ವಶಪಡಿಸಿಕೊಂಡಿದ್ದರು.

    ಶವಪರೀಕ್ಷೆಯಲ್ಲಿ ಯುವತಿಯ ಕುತ್ತಿಗೆಯ ಮೂಳೆ ಮುರಿದಿದ್ದು, ಬಹುಶಃ ಕತ್ತು ಹಿಸುಕಿದ್ದರಿಂದ ಸಾವು ಸಂಭವಿಸಿರಬಹುದು ಎಂದು ತಿಳಿದುಬಂದಿತು. ಆಗಸ್ಟ್‌ನಲ್ಲಿ ಪಾಕಿಸ್ತಾನದಿಂದ ಹಸ್ತಾಂತರಿಸಲ್ಪಟ್ಟ ಆಕೆಯ ತಂದೆ ಅಬ್ಬಾಸ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನ ಪತ್ನಿ ಶಾಹೀನ್ ಗೈರುಹಾಜರಿಯಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ನಿಶ್ಚಯಿಸಿದ ಮದುವೆ ನಿರಾಕರಿಸಿ, ಪಾಶ್ಚಾತ್ಯ ಸಂಸ್ಕೃತಿ ಅನುಸರಿಸಿದ್ದಕ್ಕೆ ಹತ್ಯೆ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದ. ಜತೆಗೆ ಆಕೆಯ ಚಿಕ್ಕಪ್ಪ ಸಹ ಕೊಲೆಗೆ ಸಹಕರಿಸಿದ್ದಾಗಿ ಪ್ರಾಸಿಕ್ಯೂಷನ್​ ರುಜುವಾತು ಪಡಿಸಿತು. ನ್ಯಾಯಾಲಯವು ಪಾಲಕರೇ ಮರ್ಯಾದೆಗಾಗಿ ಹತ್ಯೆ ಮಾಡಿರುವುದಾಗಿ ತೀರ್ಪು ನೀಡಿತು.

    ಮೃತಳ ತಂದೆ ಶಬ್ಬರ್ ಅಬ್ಬಾಸ್ ಮತ್ತು ತಾಯಿ ನಾಜಿಯಾ ಶಾಹೀನ್ ಗೆ ಜೀವಾವಧಿ ಶಿಕ್ಷೆ, ಆಕೆಯ ಚಿಕ್ಕಪ್ಪ ಡ್ಯಾನಿಶ್ ಹಸೇನ್​ಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇಬ್ಬರು ಸೋದರ ಸಂಬಂಧಿಗಳು ತಪ್ಪಿತಸ್ಥರಲ್ಲ ಎಂದು ಸಾಬೀತಾಯಿತು ಮತ್ತು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
    ಡಲಾಯಿತು.

    ಕೊರಿಯಾ ಯುವತಿಗೆ ಕಿರುಕುಳ: ಪುಣೆಯ ವ್ಯಕ್ತಿ ಅರೆಸ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts