More

    ಈಡೇರುತ್ತಾ ಲಿಯಾಂಡರ್ ಪೇಸ್ ಗ್ರಾಂಡ್ ಸ್ಲಾಂ ಶತಕದ ಕನಸು?

    ನವದೆಹಲಿ: ಭಾರತದ ದಿಗ್ಗಜ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈ ವರ್ಷದ ಎಲ್ಲ ಗ್ರಾಂಡ್ ಸ್ಲಾಂ ಟೂರ್ನಿಗಳಲ್ಲಿ ಆಡುವ ಮೂಲಕ ಶತಕ ಪೂರೈಸುವ ಹಂಬಲದಲ್ಲಿದ್ದರು. ಆದರೆ ಕರೊನಾ ಹಾವಳಿಯಿಂದಾಗಿ ಈಗಾಗಲೆ ಈ ವರ್ಷದ 1 ಗ್ರಾಂಡ್ ಸ್ಲಾಂ ರದ್ದುಗೊಂಡಿದ್ದರೆ, ಮತ್ತೆರಡು ಗ್ರಾಂಡ್ ಸ್ಲಾಂ ಅನುಮಾನದಲ್ಲಿದೆ. 100 ಗ್ರಾಂಡ್ ಸ್ಲಾಂಗಳಲ್ಲಿ ಆಡಿದ ಸಾಧನೆ ಮಾಡಲು ಇನ್ನೂ 3 ಟೂರ್ನಿಗಳಲ್ಲಿ ಆಡಬೇಕಾಗಿರುವ ಪೇಸ್, ಈ ವರ್ಷವೇ ನಿವೃತ್ತಿ ಹೇಳದೆ ಮುಂದಿನ ವರ್ಷವೂ ಮುಂದುವರಿಯುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಏಷ್ಯಾಡ್ ಪದಕ ವಿಜೇತೆ ಈಗ ಕರೊನಾ ವಾರಿಯರ್!

    ‘ಕೊನೆಯ ಒಂದು ಗರ್ಜನೆ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷವೇ ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಆಡಿ ವರ್ಷಾಂತ್ಯದಲ್ಲಿ ನಿವೃತ್ತಿ ಹೇಳುವ ಯೋಜನೆ 46 ವರ್ಷದ ಪೇಸ್ ಅವರದಾಗಿತ್ತು. ಆದರೆ ಟೋಕಿಯೊ ಗೇಮ್ಸ್ ಕೂಡ ಮುಂದೂಡಿಕೆಯಾಗಿರುವುದರಿಂದ ದಾಖಲೆಯ 8ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದ ಸಾಧನೆಗಾಗಿ ಅವರು ಇನ್ನೊಂದು ವರ್ಷ ಕಾಯಬೇಕಾಗಿದೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲೂ ಕೊಹ್ಲಿ ಗಳಿಸಿದ್ದಾರೆ 3.6 ಕೋಟಿ ರೂ. !

    ‘ಒಲಿಂಪಿಕ್ಸ್ ಇನ್ನೂ ಬಹುದೂರವಿದೆ. ಜುಲೈ ಅಥವಾ ಆಗಸ್ಟ್‌ನಲ್ಲಿ ಕ್ರೀಡೆ ಆರಂಭಗೊಳ್ಳುತ್ತದೆ ಎಂದು ನಂಬುವುದು ಕಷ್ಟ. ಅಕ್ಟೋಬರ್ ಅಥವಾ ನವೆಂಬರ್‌ವರೆಗೂ ಕಾಯಬೇಕಾಗಬಹುದು. ಆದರೆ ನನ್ನ ತಂಡ ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಮರುಪರಿಶೀಲನೆಗೆ ಸಜ್ಜಾಗಿದೆ. 2021ರಲ್ಲೂ ಆಡಬೇಕೇ, ಬೇಡವೇ ಎಂಬ ಬಗ್ಗೆ ನಾವು ಅವಲೋಕಿಸಲಿದ್ದೇವೆ’ ಎಂದು ಪೇಸ್ ಹೇಳಿದ್ದಾರೆ.

    ಇದನ್ನೂ ಓದಿ: ತಮಾಷೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಯುವರಾಜ್ ಕ್ಷಮೆಯಾಚನೆ

    ‘ನಾನು ಇದುವರೆಗೆ 97 ಗ್ರಾಂಡ್ ಸ್ಲಾಂ ಆಡಿದ್ದೇನೆ. ಇನ್ನು 3 ಆಡಿದರೆ ನೂರಾಗುತ್ತದೆ. ಈ ಅಂಕಿ-ಅಂಶ ನನಗೆ ಮತ್ತೆ ಆಡಲು ಸ್ಫೂರ್ತಿ ತುಂಬುತ್ತಿದೆ. ಇನ್ನು ನಾನು 8ನೇ ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದರೆ, ಟೆನಿಸ್ ಆಟಗಾರನೊಬ್ಬ ಅತ್ಯಧಿಕ ಒಲಿಂಪಿಕ್ಸ್‌ನಲ್ಲಿ ಆಡಿದ ದಾಖಲೆ ಭಾರತದ್ದಾಗುತ್ತದೆ. ಒಂದು ವೇಳೆ ಈ ಸಾಧನೆಗಳು ನನ್ನಿಂದ ಸಾಧ್ಯವಾಗದಿದ್ದರೂ, ನಾನು ವೃತ್ತಿಜೀವನದಲ್ಲಿ ಇದುವರೆಗೆ ಮಾಡಿರುವ ಸಾಧನೆಗಳ ಬಗ್ಗೆ ಸಂತೃಪ್ತಿ ಹೊಂದಿದ್ದೇನೆ’ ಎಂದು 18 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಪೇಸ್, ಟೇಬಲ್ ಟೆನಿಸ್ ಆಟಗಾರ ಮುದಿತ್ ಡ್ಯಾನಿ ಜತೆಗಿನ ಚಾಟ್ ಶೋನಲ್ಲಿ ತಿಳಿಸಿದ್ದಾರೆ.

    ಅರ್ಜುನ ಪ್ರಶಸ್ತಿ ರೇಸ್‌ನಲ್ಲಿ ರಾಜ್ಯದ ಮೂವರು ಮಹಿಳೆಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts