More

    ತಮಾಷೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಯುವರಾಜ್ ಕ್ಷಮೆಯಾಚನೆ

    ನವದೆಹಲಿ: ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ವೇಳೆ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಕಾಲೆಳೆಯಲು ಹೋಗಿ ಎಡವಟ್ಟು ಮಾಡಿಕೊಂಡಿದ್ದ ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಈಗ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ತಮಾಷೆಗಾಗಿ ಬಳಸಿದ ಪದ ಪ್ರಯೋಗದಿಂದಾಗಿ ಜಾತಿ ನಿಂದನೆ ಆರೋಪ ಎದುರಿಸಿದ್ದ ಯುವರಾಜ್, ಸಾರ್ವಜನಿಕ ಭಾವನೆಗಳಿಗೆ ನಾನು ಉದ್ದೇಶಪೂರ್ವಕವಾಗಿ ನೋವುಂಟು ಮಾಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: 1983ರ ವಿಶ್ವಕಪ್ ವಿಜೇತರ ವಾಟ್ಸ್‌ಆ್ಯಪ್ ಗ್ರೂಪ್ ಹೆಸರೇನು ಗೊತ್ತೇ?

    ರೋಹಿತ್ ಶರ್ಮ ಜತೆಗಿನ ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯ ನಡುವೆ, ಟಿಕ್‌ಟಾಕ್ ವಿಡಿಯೋಗಳ ಬಗ್ಗೆ ತಮಾಷೆ ಮಾಡುತ್ತ ಚಾಹಲ್‌ರನ್ನು ‘ಭಂಗಿ’ ಎಂದು ಕರೆದಿದ್ದಾರೆ. ಇದು ಜಾತಿ ನಿಂದನೆ ಎಂದು ಆರೋಪಿಸಿ ಯುವಿ ವಿರುದ್ಧ ಹರಿಯಾಣದ ಹಿಸಾರ್‌ನಲ್ಲಿ ಪೊಲೀಸ್ ಕೇಸ್ ಕೂಡ ದಾಖಲಾಗಿತ್ತು. ಅಲ್ಲದೆ ಮಾಜಿ ಕ್ರಿಕೆಟಿಗನನ್ನು ಬಂಧಿಸಬೇಕು ಎಂದು ಒತ್ತಾಯಿಸಲಾಗಿತ್ತು.

    ಇದನ್ನೂ ಓದಿ: 1983ರ ವಿಶ್ವಕಪ್ ತಾರೆಯರ ಪಾತ್ರದಲ್ಲಿ ಪುತ್ರರದ್ದೇ ನಟನೆ!

    ‘ನಾನು ಉದ್ದೇಶಪೂರ್ವಕವಲ್ಲದೆ ಆಡಿದ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೆ ಜವಾಬ್ದಾರಿಯುತ ಭಾರತೀಯನಾಗಿ ನಾನು ಆ ಮಾತಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಎಂದೂ ಜಾತಿ, ಮತ, ವರ್ಣ ಮತ್ತು ಲಿಂಗ ಆಧಾರದ ಅಸಮಾನತೆ ಮೇಲೆ ನಂಬಿಕೆ ಇಟ್ಟಿಲ್ಲ. ಜನರ ಒಳಿತಿಗಾಗಿಯೇ ನನ್ನ ಜೀವನದ ಸಮಯ ನೀಡಿರುವೆ ಮತ್ತು ಅದನ್ನು ಮುಂದುವರಿಸುವೆ. ಗೌರವಾನ್ವಿತ ಬದುಕಿನ ಮೇಲೆ ನಂಬಿಕೆ ಇದೆ ಮತ್ತು ಯಾವುದೇ ವಿನಾಯಿತಿ ಇಲ್ಲದೆ ಪ್ರತಿ ವ್ಯಕ್ತಿಯನ್ನೂ ಗೌರವಿಸುತ್ತೇನೆ’ ಎಂದು ಯುವಿ ಟ್ವಿಟರ್‌ನಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ಪ್ಲೇಬಾಯ್ ರೂಪದರ್ಶಿ ಈಗ ಫುಟ್‌ಬಾಲ್ ಕ್ಲಬ್ ಒಡತಿ!

    ಯುವಿ-ರೋಹಿತ್ ಮಾತುಕತೆ 2 ತಿಂಗಳ ಹಿಂದೆಯೇ ನಡೆದಿದ್ದರೂ, ಅದರ ಸಣ್ಣ ವಿಡಿಯೋ ತುಣುಕು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅಭಿಮಾನಿಗಳು, ‘ಯುವರಾಜ್ ಸಿಂಗ್ ಮಾಫಿ ಮಾಂಗೋ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಅಭಿಯಾನ ಆರಂಭಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts