More

    ಲಾಕ್​ಡೌನ್​ನಲ್ಲೂ ಕೊಹ್ಲಿ ಗಳಿಸಿದ್ದಾರೆ 3.6 ಕೋಟಿ ರೂ. !

    ಬೆಂಗಳೂರು: ಕರೊನಾ ವೈರಸ್ ಹಾವಳಿಯಿಂದಾಗಿ ಕ್ರೀಡಾ ಜಗತ್ತು ಸ್ತಬ್ಧಗೊಂಡಿರಬಹುದು. ಆದರೆ ಸ್ಟಾರ್ ಕ್ರೀಡಾಪಟುಗಳ ಸಂಪಾದನೆ ಈಗಲೂ ನಿಂತಿಲ್ಲ. ಲಾಕ್​ಡೌನ್ ನಡುವೆಯೂ ಇನ್​ಸ್ಟಾಗ್ರಾಂನ ಪ್ರಾಯೋಜಿತ ಪೋಸ್ಟ್​ಗಳ ಮೂಲಕ ಭರ್ಜರಿ ಹಣ ಸಂಪಾದನೆ ಮಾಡುತ್ತಿರುವ ವಿಶ್ವದ ಅಗ್ರ 10 ಕ್ರೀಡಾಪಟುಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ. ಪ್ರತಿ ಪೋಸ್ಟ್​ಗೆ 1.20 ಕೋಟಿ ರೂ.ನಂತೆ ಲಾಕ್​ಡೌನ್ ಅವಧಿಯಲ್ಲೂ ಒಟ್ಟು 3.62 ಕೋಟಿ ರೂಪಾಯಿ ಸಂಪಾದಿಸಿರುವ ಕೊಹ್ಲಿ 6ನೇ ಸ್ಥಾನ ಅಲಂಕರಿಸಿದ್ದಾರೆ. ಮಾರ್ಚ್ 12ರಿಂದ ಮೇ 14ರ ಲಾಕ್​ಡೌನ್ ಅವಧಿಯಲ್ಲಿ ಕ್ರೀಡಾಪಟುಗಳು ಪ್ರಾಯೋಜಿತ ಪೋಸ್ಟ್ ಗಳ ಮೂಲಕ ಗಳಿಸಿರುವ ಹಣದ ಲೆಕ್ಕಾಚಾರ ಇದಾಗಿದೆ. 59 ದಶಲಕ್ಷ ಹಿಂಬಾಲಕರನ್ನು ಹೊಂದಿರುವ ವಿರಾಟ್ ಕೊಹ್ಲಿ, ಲಾಕ್​ಡೌನ್ ಅವಧಿಯಲ್ಲಿ ಮನೆಯಲ್ಲಿದ್ದೇ 3 ಪ್ರಾಯೋಜಿತ ಪೋಸ್ಟ್​ಗಳನ್ನು ಮಾಡಿ ಆದಾಯ ಗಳಿಸಿದ್ದಾರೆ.

    ಇದನ್ನೂ ಓದಿ: ಮಂಕಿ V/S ಲೆಪರ್ಡ್: ಮಂಗನ ಹಿಡಿತಕ್ಕೆ ಸೋಲಲೇ ಬೇಕಾಯ್ತು ಈ ಚಿರತೆ

    ರೊನಾಲ್ಡೊಗೆ ಅಗ್ರಸ್ಥಾನ: ಪೋರ್ಚುಗಲ್ ಫುಟ್​ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ, ಲಾಕ್​ಡೌನ್ ವೇಳೆ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಅತ್ಯಧಿಕ ಹಣ ಸಂಪಾದನೆ ಮಾಡಿರುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಜುವೆಂಟಸ್ ಆಟಗಾರ ಪ್ರತಿ ಪೋಸ್ಟ್ ಗೆ 4.49 ಕೋಟಿ ರೂ.ನಂತೆ ಒಟ್ಟು 17.97 ಕೋಟಿ ರೂ. ಸಂಪಾದಿಸಿದ್ದಾರೆ. ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ತಂಡದ ತಾರೆ ಲಿಯೋನೆಲ್ ಮೆಸ್ಸಿ ಮತ್ತು ಬ್ರೆಜಿಲ್ ಆಟಗಾರ ನೇಮರ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ 12.41 ಕೋಟಿ ರೂ. ಮತ್ತು ನೇಮರ್ 11.38 ಕೋಟಿ ರೂ. ಗಳಿಸಿದ್ದಾರೆ. ‘ಅಟೇನ್’ ವೆಬ್​ಸೈಟ್ ನಡೆಸಿದ ಅಧ್ಯಾಯನದಿಂದ ಈ ಟಾಪ್ 10 ಪಟ್ಟಿ ಸಿದ್ಧಗೊಂಡಿದೆ. ಅಮೆರಿಕದ ಬಾಸ್ಕೆಟ್​ಬಾಲ್ ಆಟಗಾರ ಶಾಕ್ವೆಲ್ ಓನೀಲ್ (5.57 ಕೋಟಿ ರೂ.) ಮತ್ತು ಇಂಗ್ಲೆಂಡ್​ನ ಮಾಜಿ ಫುಟ್​ಬಾಲ್ ಆಟಗಾರ ಡೇವಿಡ್ ಬೆಕ್​ಹ್ಯಾಂ (3.87 ಕೋಟಿ ರೂ.) ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

    ಮಾರ್ಕೆಟಿಂಗ್ ತಂತ್ರ

    ಸ್ಟಾರ್ ಕ್ರೀಡಾಪಟುಗಳು ಇನ್​ಸ್ಟಾಗ್ರಾಂನಿಂದ ಎಲ್ಲ ವೈಯಕ್ತಿಕ ಪೋಸ್ಟ್​ಗಳಿಗೂ ಹಣ ಸಂಪಾದಿಸುವುದಿಲ್ಲ. ಇದು ಪ್ರಾಯೋಜಿತ ಪೋಸ್ಟ್​ಗಳಿಗೆ ಮಾತ್ರ ಅನ್ವಯಿಸುತ್ತದೆ. ಯಾವ ಉತ್ಪನ್ನ ಅಥವಾ ಬ್ರಾಂಡ್ ಬಗ್ಗೆ ಪೋಸ್ಟ್ ಮಾಡುತ್ತಾರೋ ಆ ಕಂಪನಿಯಿಂದ ಕ್ರೀಡಾಪಟುವಿಗೆ ಹಣ ಸಂದಾಯವಾಗುತ್ತದೆ. ಇದು ಆಧುನಿಕ ಮಾರ್ಕೆಟಿಂಗ್ ತಂತ್ರವಾಗಿದ್ದು, ಇನ್​ಸ್ಟಾಗ್ರಾಂ ಈಗ ವಿವಿಧ ಬ್ರಾಂಡ್​ಗಳ ಪ್ರಚಾರಕ್ಕೂ ಬಳಕೆಯಾಗುತ್ತಿದೆ. ಇದು ಜನಪ್ರಿಯವಾಗುತ್ತಿರುವ ಹೊಸ ರೀತಿಯ ಜಾಹೀರಾತು ಮಾರ್ಗವಾಗಿದೆ.

    ಪ್ರತಿ ಹಿಂಬಾಲಕರಿಗೆ 30 ಪೈಸೆ!

    ಸ್ಟಾರ್ ಕ್ರೀಡಾಪಟುಗಳ ಪ್ರತಿ ಹಿಂಬಾಲಕರಿಗೆ (ಫಾಲೋವರ್ಸ್) 30 ಪೈಸೆಯಂತೆ ಪ್ರಾಯೋಜಕ ಕಂಪನಿ ಹಣ ಪಾವತಿಸುತ್ತದೆ ಎನ್ನಲಾಗಿದೆ. ಇದರಿಂದ 10 ಲಕ್ಷ ಹಿಂಬಾಲಕರಿಗೆ 3 ಲಕ್ಷ ರೂ. ಮೊತ್ತದಂತೆ ಕ್ರೀಡಾಪಟುಗಳು ಪ್ರಾಯೋಜಿತ ಪೋಸ್ಟ್​ಗಳಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ‘ಅಟೇನ್’ ವರದಿ ತಿಳಿಸಿದೆ. ರೊನಾಲ್ಡೊ ಒಟ್ಟಾರೆ 219 ದಶಲಕ್ಷಕ್ಕೂ ಅಧಿಕ ಹಿಂಬಾಲರನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಪ್ರತಿ ಪೋಸ್ಟ್​ಗೆ 4.49 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

    ಲಾಕ್​ಡೌನ್​ನಲ್ಲೂ ಕೊಹ್ಲಿ ಗಳಿಸಿದ್ದಾರೆ 3.6 ಕೋಟಿ ರೂ. !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts