More

    ಈ ತರಹದ್ದೊಂದು ಚಿತ್ರ ಯಾರೂ ಮಾಡಿರಲಿಲ್ಲ; ‘ಪದವಿ ಪೂರ್ವ’ ಚಿತ್ರಕ್ಕೆ ಸರ್ಟಿಫಿಕೇಟ್​ ಕೊಟ್ಟ ಜಗ್ಗೇಶ್​

    ಬೆಂಗಳೂರು: ‘ವಿದ್ಯೆ, ಗುಣ, ವಿನಯ ಮತ್ತು ಹಣ ಇದ್ದರೆ ಜೀವನ ಅದ್ಭುತವಾಗಿರುತ್ತದೆ. ಆ ವಿಷಯದ ಬಗ್ಗೆ ಇಲ್ಲಿ ಹೇಳಲಾಗಿದೆ. ಈ ತರಹ ಯಾರೂ ಮಾಡಿರಲಿಲ್ಲ …’

    ಇದನ್ನೂ ಓದಿ: ಸ್ವರಾ​ಗೆ ಮಾತೇ ಮುಳುವಾಯಿತಾ? ನಿಲುವೇ ಶತ್ರುವಾಯಿತಾ?

    ಜಗ್ಗೇಶ್​ ಹೀಗೆ ಹೇಳಿದ್ದು ‘ಪದವಿ ಪೂರ್ವ’ ಚಿತ್ರದ ಬಗ್ಗೆ. ಯೋಗರಾಜ್ ಸಿನಿಮಾಸ್ ಹಾಗು ರವಿ ಶಾಮನೂರ್ ಫಿಲಂಸ್‌ ಜಂಟಿಯಾಗಿ ನಿರ್ಮಿಸಿ ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿರುವ ‘ಪದವಿ ಪೂರ್ವ’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಇದೇ ಡಿಸೆಂಬರ್ 30 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಟೀಸರ್​ನ್ನು ಇತ್ತೀಚೆಗೆ ಜಗ್ಗೇಶ್ ಬಿಡುಗಡೆ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಯಾವ ವಿಷಯವನ್ನೂ ಗಂಭೀರವಾಗಿ ಹೇಳಿದರೆ ಜನ ಸ್ವೀಕರಿಸುವುದಿಲ್ಲ. ತಮಾಷೆಯಾಗಿ ಹೇಳಿದರೆ ಜನ ತಿರುಗಿ ನೋಡುತ್ತಾರೆ. ‘ಪದವಿ ಪೂರ್ವ’ ಚಿತ್ರ ಅಂತಹ ಒಂದು ಕೆಲಸ ಮಾಡುತ್ತದೆ. ಆಗಿನ ಕಾಲ ಸರಿ ಇತ್ತು, ಈಗ ಸರಿ ಇಲ್ಲ ಎನ್ನುವುದೆಲ್ಲ ಸುಳ್ಳು. ಎಲ್ಲ ಕಾಲವೂ ಒಂದೇ ತರಹ ಇರುತ್ತದೆ. ಕಾರಣ, ಟೀನೇಜ್​ ದಿನಗಳಲ್ಲಿ ಎಲ್ಲರಿಗೂ ಒಂದು ವ್ಯಾಮೋಹ ಇರುತ್ತದೆ. ಕೆಲವರು ಒಂದು ಪುಸ್ತಕ ಇಟ್ಟುಕೊಂಡು ಕಾಲೇಜಿಗೆ ಹೋಗುವುದನ್ನು ನೋಡಿದ್ದೇನೆ. ಅವರು ಏನು ಓದುತ್ತಾರೋ? ಏನು ಮಾಡುತ್ತಾರೋ? ಗೊತ್ತಾಗುವುದಿಲ್ಲ. ಅವರ ಡ್ರೆಸ್ಸು, ಸ್ಟೈಲು ಎಲ್ಲವೂ ವಿಚಿತ್ರವಾಗಿರುತ್ತದೆ. ಈ ಟೀನೇಜ್​ನಲ್ಲಿ ಕೆಟ್ಟು ಹೋಗುವವರೇ ಹೆಚ್ಚು. ಈ ವಯಸ್ಸಿನಲ್ಲಿ ಸ್ವಲ್ಪ ಮಾರ್ಗದರ್ಶನ ಕೊಡುವ ಗುರು ಬೇಕು. ಯಾರು ಆ ವಯಸ್ಸಿನಲ್ಲಿ ಒಬ್ಬ ಒಳ್ಳೆಯ ಗುರು ಪಡೆಯುತ್ತಾರೋ, ಅವನಿಗಿಂತ ಅದೃಷ್ಟವಂತ ಇನ್ನೊಬ್ಬನಿಲ್ಲ. ಯಾರು ಪಡೆಯುವುದಿಲ್ಲವೋ, ಅವನು ಪಶ್ಚಾತ್ತಾಪ ಪಡುತ್ತಾನೆ. ವಿದ್ಯೆ, ಗುಣ, ವಿನಯ ಮತ್ತು ಹಣ ಇದ್ದರೆ ಜೀವನ ಅದ್ಭುತವಾಗಿರುತ್ತದೆ. ಆ ವಿಷಯದ ಬಗ್ಗೆ ಈ ಚಿತ್ರದಲ್ಲಿ ಹೇಳಲಾಗಿದೆ. ಈ ತರಹದ್ದೊಂದು ಪ್ರಯತ್ನ ಹಿಂದೆ ಆಗಿರಲಿಲ್ಲ’ ಎನ್ನುತ್ತಾರೆ ಜಗ್ಗೇಶ್​.

    ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಶರತ್ ಲೋಹಿತಾಶ್ವ, ರಂಗಾಯಣ ರಘು, ನಟರಾಜ್ ನಟಿಸಿದ್ದು ಯೋಗರಾಜ್ ಭಟ್, ಅದಿತಿ ಪ್ರಭುದೇವ, ದಿವ್ಯ ಉರುಡುಗ, ಪ್ರಭು ಮುಂದ್ಕೂರು, ಶ್ರೀಮಹದೇವ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಈ ಬಾರಿ ಪ್ಯಾನ್​ ವರ್ಲ್ಡ್​​ ಚಿತ್ರ ಮಾಡುವುದಕ್ಕೆ ಹೊರಟಿದ್ದಾರಂತೆ ರಾಜಮೌಳಿ …

    ಹರಿಪ್ರಸಾದ್​ ಜಯಣ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಪದವಿ ಪೂರ್ವ’ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ.

    ಡಿ.9ಕ್ಕೆ ಪುನೀತ್​ ರಾಜಕುಮಾರ್ ಅಭಿನಯದ ‘ಸಿವಿಲ್​ ಇಂಜಿನಿಯರ್’ ಬಿಡುಗಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts