More

    ಈ ಬಾರಿ ಪ್ಯಾನ್​ ವರ್ಲ್ಡ್​​ ಚಿತ್ರ ಮಾಡುವುದಕ್ಕೆ ಹೊರಟಿದ್ದಾರಂತೆ ರಾಜಮೌಳಿ …

    ಹೈದರಾಬಾದ್​​: ಪ್ಯಾನ್​ ಇಂಡಿಯಾ ಚಿತ್ರಗಳ ಪರಂಪರೆ ನಮ್ಮಲ್ಲಿ ಹೊಸದಲ್ಲದಿದ್ದರೂ, ಅದನ್ನು ದೊಡ್ಡ ಮಟ್ಟದಲ್ಲಿ ಪರಿಚಯಿಸಿದವರು ನಿರ್ದೇಶಕ ಎಸ್​.ಎಸ್​. ರಾಜಮೌಳಿ, ತಮ್ಮ ‘ಬಾಹುಬಲಿ’ ಚಿತ್ರದ ಮೂಲಕ ಪ್ಯಾನ್​ ಇಂಡಿಯಾ ಟ್ರೆಂಡ್​ ಹುಟ್ಟುಹಾಕಿದರು.

    ಇದನ್ನೂ ಓದಿ: ಸಾಮರಸ್ಯ, ಸಹಬಾಳ್ವೆ ಮತ್ತು ವಾಟ್ಸಪ್​ ಸಂದೇಶ … ಇದು ‘ಕುದ್ರು’

    ಈಗಾಗಲೇ ‘ಬಾಹುಬಲಿ’ ಮತ್ತು ‘RRR’ ಎಂಬ ಪ್ಯಾನ್​ ಇಂಡಿಯಾ ಚಿತ್ರಗಳನ್ನು ಮಾಡಿರುವ ರಾಜಮೌಳಿ, ಈ ಬಾರಿ ಪ್ಯಾನ್​ ವರ್ಲ್ಡ್​ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದು, ತಮ್ಮ ಹೊಸ ಚಿತ್ರವನ್ನು ಬರೀ ಭಾರತೀಯ ಭಾಷೆಗಳಷ್ಟೇ ಅಲ್ಲ, ಅಂತಾರಾಷ್ಟ್ರೀಯ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವುದಕ್ಕೆ ಹೆಜ್ಜೆ ಇಟ್ಟಿದ್ದಾರಂತೆ. ಈ ಚಿತ್ರವು ಭಾರತದ ಮೊಟ್ಟ ಮೊದಲ ಪ್ಯಾನ್​ ವರ್ಲ್ಡ್​​ ಚಿತ್ರ ಎಂದು ಹೇಳಲಾಗುತ್ತಿದೆ.

    ಹೌದು, ಮಹೇಶ್​ ಬಾಬು ಅಭಿನಯದಲ್ಲಿ ರಾಜಮೌಳಿ ಒಂದು ಸಾಹಸಮಯ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ಹಲವು ದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಚಿತ್ರದಲ್ಲಿ, ಹಾಲಿವುಡ್​ನ ನಟರು ಸಹ ನಟಿಸುವ ಸಾಧ್ಯತೆ ಇದೆ. ಈ ಚಿತ್ರವನ್ನು ಪ್ಯಾನ್​ ಇಂಡಿಯಾ ಬಟ್ಟು, ಪ್ಯಾನ್​ ವರ್ಲ್ಡ್​​ ಚಿತ್ರವನ್ನಾಗಿ ಮಾಡುವ ಬಯಕೆ ರಾಜಮೌಳಿ ಅವರದ್ದು.

    ಇದನ್ನೂ ಓದಿ: ಸಚಿವ ಸುಧಾಕರ್ ಬಿಡುಗಡೆ ಮಾಡಿದರು ‘ತನುಜಾ’ ಚಿತ್ರದ ಟ್ರೈಲರ್​ …

    ಅದಕ್ಕೆ ಕಾರಣವೂ ಇದೆ. ರಾಜಮೌಳಿ ಅವರ ಇತ್ತೀಚಿನ ಚಿತ್ರಗಳಿಗೆ ಬೇರೆ ದೇಶಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅವರಿಗೆ ದೇಶ-ವಿದೇಶಗಳಲ್ಲಿ ಅಭಿಮಾನಿಗಳು ಹುಟ್ಟುಕೊಂಡಿದ್ದಾರೆ. ‘ಬಾಹುಬಲಿ’ ಚಿತ್ರವು ರಷ್ಯನ್​ ಭಾಷೆಗೆ ಡಬ್​ ಆಗಿದ್ದು, ‘RRR’ ಚಿತ್ರವು ಜಪಾನ್​ನಲ್ಲಿ ಬಿಡಗುಡೆಯಾಗಿದ್ದು, ರಾಜಮೌಳಿಗೆ ಉತ್ಸಾಹ ತುಂಬಿದೆ. ಅದೇ ಕಾರಣಕ್ಕೆ ಅವರು ತಮ್ಮ ಮುಂದಿನ ಚಿತ್ರವನ್ನು ಪ್ಯಾನ್​ ವರ್ಲ್ಡ್​​ ಚಿತ್ರವನ್ನಾಗಿ ಮಾಡುವುದಕ್ಕೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಸ್ವರಾ​ಗೆ ಮಾತೇ ಮುಳುವಾಯಿತಾ? ನಿಲುವೇ ಶತ್ರುವಾಯಿತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts