More

    ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ?

    ನವದೆಹಲಿ: ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ ಆರಂಭಿಕ ಹಂತದಲ್ಲಿ ಯಶಸ್ವಿಯಾಗಿರುವ ಹಲವು ಔಷಧಗಳನ್ನು ಈಗಾಗಲೇ ಭಾರಿ ಪ್ರಮಾಣದಲ್ಲಿ ಉತ್ಪಾದಿಸಿ ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಇದಕ್ಕೆ ಭಾರತವೂ ಹೊರತಲ್ಲ..!

    ಹೌದು… ಭಾರಿ ಭರವಸೆ ಮೂಡಿಸಿರುವ ಆಕ್ಸ್​ಫರ್ಡ್​ ವಿವಿ ಲಸಿಕೆಯು ಒಂದು ಮತ್ತು ಎರಡನೇ ಹಂತದ ಪರೀಕ್ಷೆಯಲ್ಲಿ ಪಾಸಾಗಿದೆ. ಇದೇ ಲಸಿಕೆಯನ್ನು ತುರ್ತು ಬಳಕೆಗಾಗಿ 20- 30 ಲಕ್ಷ ಡೋಸ್​ ಸಿದ್ಧಪಡಿಸಿಕೊಳ್ಳಲಾಗಿದೆ.

    ಇದನ್ನೂ ಓದಿ; ಕರೊನಾ ಲಸಿಕೆ ತಯಾರಿಗೆ ಪೈಪೋಟಿ; ಕ್ಲಿನಿಕಲ್​ ಟ್ರಯಲ್​ಗೆ ಒಪ್ಪಿಕೊಂಡರೆ ಸಿಗುವ ಹಣವೆಷ್ಟು…? 

    ಆಕ್ಸ್​ಫರ್ಡ್​ ವಿವಿ ಜತೆಗೆ ಕೈಜೋಡಿಸಿರುವ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪುಣೆಯ ಸಿರಂ ಇನ್​​ಸ್ಟಿಟ್ಯೂಟ್​ ಆಫ್​ ಇಂಡಿಯಾ ಲಸಿಕೆ ಉತ್ಪಾದಿಸಿದೆ. ಇದರ ಅಧಿಕೃತ ಬಳಕೆಗೂ ಮುನ್ನ ಅಗತ್ಯ ಪರವಾನಗಿ ಪಡೆದು ಭಾರತದಲ್ಲೂ 5,000 ಜನರ ಮೇಲೆ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತದೆ. ಬಳಿಕ ಬಳಕೆಗೆ ಮುಕ್ತಗೊಳಿಸಲಾಗುತ್ತದೆ.

    ಆಕ್ಸ್​ಫರ್ಡ್​ ಲಸಿಕೆಗೆ AZD1222 ಎಂಬ ಸಂಕೇತಾಕ್ಷರ ನೀಡಲಾಗಿದೆ. ಇದನ್ನೂ ಭಾರತದಲ್ಲಿ ಕೋವಿಶೀಲ್ಡ್​ ಹೆಸರಿನಲ್ಲಿ ಪರಿಚಯಿಸಲಾಗುತ್ತದೆ ಅಥವಾ ಬಿಡುಗಡೆ ಮಾಡಲಾಗುತ್ತದೆ. ಡಿಸೆಂಬರ್​ ವೇಳೆಗೆ 10 ಕೋಟಿ ಡೋಸ್​ ಉತ್ಪಾದಿಸುವ ಗುರಿ ಹೊಂದಲಾಗಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟ; ದೆಹಲಿ, ಅಹಮದಾಬಾದ್​, ದೆಹಲಿಯಿಂದ ಬರುತ್ತಿದೆ ಶುಭಸುದ್ದಿ; ಏನದು?

    ಇಷ್ಟಕ್ಕೂ ಭಾರತದಲ್ಲಿ ಇದರ ಬೆಲೆ ಎಷ್ಟಿರಲಿದೆ ಗೊತ್ತಾ..? ಒಂದು ಡೋಸ್​ಗೆ ಅಂದಾಜು 1 ಸಾವಿರ ರೂ. ಅಥವಾ ಅದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಒದಗಿಸಲಾಗುತ್ತದೆ ಎಂದು ಸಂಸ್ಥೆ ಅಧ್ಯಕ್ಷ ಆದಾರ್​ ಪೂನಾವಾಲಾ ಹೇಳಿದ್ದಾರೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬೃಹತ್​ ಪ್ರಮಾಣದಲ್ಲಿ ಜನರನ್ನು ತಲುಪಲಿದೆ ಎಂದು ಅವರು ಮಾಹಿತಿ ನೀಡುತ್ತಾರೆ.

    ಔಷಧ ತಯಾರಿಕಾ ಘಟಕವನ್ನು ಲಸಿಕೆ ತಯಾರಿಕೆಗಾಗಿ ಸುಸ್ಥಿತಿಯಲ್ಲಿಡಲು ಈಗಾಗಲೇ ಉತ್ಪಾದನೆ ನಡೆಸಲಾಗುತ್ತಿದೆ. ಇದರ ಉತ್ಪಾದನೆ ವೆಚ್ಚ ಸದ್ಯಕ್ಕೆ 1,500 ಕೋಟಿಗೂ ಅಧಿಕವಾಗಿದೆ. ಒಂದು ವೇಳೆ ಲಸಿಕೆ ಯಶಸ್ವಿಯಾಗದಿದ್ದಲ್ಲಿ ಈಗಾಗಲೇ ಉತ್ಪಾದಿಸಿರುವ, ಇದಕ್ಕೆ ತೊಡಗಿಸಿರುವ ಮೊತ್ತ ನಷ್ಟವಾಗಲಿದೆ ಎಂದು ಪೂನಾವಾಲಾ ಹೇಳಿದ್ದಾರೆ.

    ಇನ್ನೊಂದು ಮುಖ್ಯ ವಿಷಯವೆಂದರೆ, ಆಫ್ರಿಕಾ ರಾಷ್ಟ್ರಗಳಿಗೆ 2-3 ಡಾಲರ್​ಗೆ ಪೂರೈಸಲಾಗುತ್ತದೆ ಅಂದರೆ 150 ರಿಂದ 250 ರೂ.ಗೆ ಅಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

    ಆಕ್ಸ್​ಫರ್ಡ ವಿವಿ ಕರೊನಾ ಲಸಿಕೆ ಅರ್ಧದಷ್ಟು ಭಾರತಕ್ಕೆ; ಉತ್ಪಾದಕ ಕಂಪನಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts