More

    ಭಾರತೀಯರಿಗೆ ವರ್ಷಾಂತ್ಯಕ್ಕೆ ದೊರೆಯಲಿದೆ ಮೊದಲ ಕರೊನಾ ಲಸಿಕೆ; ಆದರೆ, ಭಾರತದ್ದಲ್ಲ….!

    ನವದೆಹಲಿ: ಭಾರತೀಯರಿಗೆ ವರ್ಷಾಂತ್ಯಕ್ಕೆ ಮೊದಲ ಕರೊನಾ ಲಸಿಕೆ ದೊರೆಯುವ ಎಲ್ಲ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ. ಆದರೆ, ಅದು ಭಾರತದ್ದಲ್ಲ…!

    ಇದಕ್ಕೂ ಕಾರಣವಿದೆ. ಸದ್ಯ ಭಾರತದಲ್ಲಿ ಮೂರು ಲಸಿಕೆಗಳು ವಿವಿಧ ಹಂತದ ಪರೀಕ್ಷೆಯಲ್ಲಿವೆ. ಈ ದೇಶೀಯ ಭಾರತ್​ ಬಯೋಟೆಕ್​ನ ಕೊವಾಕ್ಸಿನ್​ ಲಸಿಕೆ ಮೊದಲ ಹಂತದ ಪರೀಕ್ಷೆ ನಡೆಸುತ್ತಿದ್ದರೆ, ಜೈಡಸ್​ ಕ್ಯಾಡಿಲಾ ಕಂಪನಿಯ ಜೈಕೊವ್​ ಡಿ ಔಷಧವನ್ನೂ ಮಾನವ ಮೇಲೆ ಪ್ರಯೋಗಿಸಲಾಗುತ್ತದೆ.

    ಜಾಗತಿಕವಾಗಿ ಮುಂಚೂಣಿಯಲ್ಲಿರುವ ಆಕ್ಸ್​ಫರ್ಡ್​ ವಿವಿ ಹಾಗೂ ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಈಗಾಗಲೇ ಮೂರನೇ ಹಂತದ ಪರೀಕ್ಷೆ ನಡೆಸುತ್ತಿದೆ. ಬ್ರಿಟನ್​, ಅಮೆರಿಕ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ ಮಾನವರ ಮೇಲೆ ಅಂತಿಮ ಹಂತದ ಪ್ರಯೋಗ ನಡೆದಿದೆ.

    ಇದನ್ನೂ ಓದಿ; ಕಾಂಗ್ರೆಸ್‌ ಮುಖಂಡೆಯ ಪುತ್ರಿಯ ನಿಗೂಢ ಸಾವು: ಅಮ್ಮ-ಮಗಳ ಜಗಳದ ಬೆನ್ನಲ್ಲೇ ಘಟನೆ?

    ಎರಡು ಹಂತದ ಪರೀಕ್ಷೆಗಳಲ್ಲಿ ಈ ಲಸಿಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಎನಿಸಿದೆ. ಜತೆಗೆ, ವೈರಸ್​ ಕಣಗಳನ್ನು ನಾಶಪಡಿಸುವ ಟಿ-ಸೆಲ್​ ಕೂಡ ಇದರಲ್ಲಿ ಅಭಿವೃದ್ಧಿಯಾಗಿದೆ. ಹೀಗಾಗಿ ಈ ಲಸಿಕೆ ಭಾರಿ ಭರವಸೆ ಮೂಡಿಸಿದೆ.

    ಈ ಲಸಿಕೆಯನ್ನು ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಭಾರತದಲ್ಲಿ ಉತ್ಪಾದಿಸುವ ಹಾಗೂ ಮಾರಾಟ ಮಾಡುವ ಹಕ್ಕನ್ನು ಪಡೆದುಕೊಂಡಿದೆ. ಮಾತ್ರವಲ್ಲದೆ, ಬಡ ರಾಷ್ಟ್ರಗಳಿಗೂ ಇಲ್ಲಿಂದಲೇ ಪೂರೈಕೆಯಾಗಲಿದೆ. ಕೋವಿಶೀಲ್ಡ್​​ ಹೆಸರಲ್ಲಿ ಇದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

    ಇದನ್ನೂ ಓದಿ; ಭಾರತದಲ್ಲಿ ಕ್ಯಾನ್ಸರ್‌ ಸ್ಥಿತಿಗತಿಯ ವರದಿ ಬಿಚ್ಚಿಟ್ಟ ಸಂಶೋಧಕರು

    ಮುಂಬೈನ ಕೆಇಎಂ ಹಾಗೂ ನಾಯರ್​ ಆಸ್ಪತ್ರೆಯಲ್ಲಿ ಕೋವಿಶೀಲ್ಡ್​ನ ಎರಡನೇ ಹಂತದ ಪರೀಕ್ಷೆಗೆ ಚಾಲನೆ ನೀಡಲಾಗಿದೆ. ಅಂದಾಜು 1,600 ಜನರಿಗೆ ಈ ಲಸಿಕೆ ನೀಡಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ ವರ್ಷಾಂತ್ಯಕ್ಕೆ ಲಸಿಕೆ ಭಾರತೀಯರಿಗೆ ಲಭ್ಯವಾಗುವುದು ಖಚಿತ. ಈಗಾಗಲೇ ಬ್ರಿಟನ್​ನಲ್ಲಿ ಇದು ಯಶಸ್ವಿಯಾಗಿರುವುದರಿಂದ ಕಾನೂನಾತ್ಮಕ ಕಾರಣಗಳಿಗಾಗಿ ಇದನ್ನು ಪ್ರಯೋಗ ಮಾಡಲಾಗುತ್ತಿದೆ.

    ಇನ್ನೊಂದು ವಿಚಾರವೆಂದರೆ, ಬಿಲ್​ ಹಾಗೂ ಮೆಲಿಂಡಾ ಗೇಟ್ಸ್​ ಪ್ರತಿಷ್ಠಾನ ಸಿರಂ ಇನ್​ಸ್ಟಿಟ್ಯೂಟ್​ಗೆ ಆರ್ಥಿಕ ನೆರವು ನೀಡಿರುವುದರಿಂದ ಈ ಲಸಿಕೆ ಕೇವಲ 225 ರೂ.ಗಳಿಗೆ ಲಭ್ಯವಾಗಲಿದೆ. ಜತೆಗೆ ವರ್ಷಾಂತ್ಯಕ್ಕೆ 40 ಕೋಟಿ ಡೋಸ್​​ ಉತ್ಪಾದನೆ ಗುರಿ ಹೊಂದಲಾಗಿದೆ.

    ಚೀನಾದಲ್ಲಿ ಮಸೀದಿಗಳು ಧ್ವಂಸ; ಅದೇ ಜಾಗದಲ್ಲಿ ಪ್ರವಾಸಿಗರಿಗಾಗಿ ಶೌಚಗೃಹ, ಮದ್ಯದಂಗಡಿ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts