More

    ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಕೋಟಿಗಳ ಲೆಕ್ಕಗಳಲ್ಲಿದೆ…

    ನವದೆಹಲಿ: ಗೆದ್ದವ ಸೋತ… ಸೋತವ ಸತ್ತ…
    ಯಾವುದೇ ತಂಟೆ-ತಕರಾರು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಅದರ ಕುರಿತು ಬರುವ ತೀರ್ಪು ಎಷ್ಟು ವಿಳಂಬವಾಗಿರುತ್ತದೆ ಹಾಗೂ ಕೋರ್ಟ್​ ಕಟ್ಟೆ ಏರಿದವರು ಎಂತಹ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ವಿವರಿಸುವಾಗ ಈ ಮೇಲಿನ ಮಾತನ್ನು ಹೇಳಲಾಗುತ್ತದೆ.

    ಯಾವುದೇ ಒಂದು ಪ್ರಕರಣದ ಇತ್ಯರ್ಥಗೊಳ್ಳಬೇಕಾದರೆ ಮೊದಲು ಸ್ಥಳೀಯ ನ್ಯಾಯಾಲಯದಲ್ಲಿ ಅದರ ವಿಚಾರಣೆ ನಡೆದು ತೀರ್ಪು ಬರುತ್ತದೆ. ತೀರ್ಪು ಪ್ರಶ್ನಿಸಿ ಜಿಲ್ಲಾ ನ್ಯಾಯಾಲಯ, ಹೈಕೋಟ್​, ಸುಪ್ರೀಂ ಕೋರ್ಟ್ ಹೀಗೆ ವಿವಿಧ ಹಂತದ ನ್ಯಾಯಾಲಯಗಳಿಗೆ ಮೊರೆ ಹೋಗಲು ಅವಕಾಶ ಇರುತ್ತದೆ. ಈ ಕಾರಣಕ್ಕಾಗಿ ಒಂದು ಪ್ರಕರಣದಲ್ಲಿ ಅಂತಿಮ ತೀರ್ಪು ಬರಬೇಕಾದರೆ ಹತ್ತಾರು ವರ್ಷಗಳೇ ಬೇಕಾಗುತ್ತದೆ.

    ಹೀಗಾಗಿಯೇ ದೇಶದಲ್ಲಿ ಅಪಾರ ಸಂಖ್ಯೆಯ ಪ್ರಕರಣಗಳು ಬಾಕಿ. ಇವುಗಳ ಸಂಖ್ಯೆ ಎಷ್ಟು ಗೊತ್ತೆ?

    5 ಕೋಟಿಗೂ ಅಧಿಕ. ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಅಂದಾಜು 80,000.

    ಕೇಂದ್ರ ಕಾನೂನು ಸಚಿವರೇ ಈ ಅಂಕಿ-ಅಂಶಗಳನ್ನು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ 80,000 ಸೇರಿದಂತೆ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಐದು ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಅವರು ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

    ಡಿಸೆಂಬರ್ 1 ರವರೆಗೆ ವಿವಿಧ ನ್ಯಾಯಾಲಯಗಳಲ್ಲಿ 5,08,85,856 ಪ್ರಕರಣಗಳು ಬಾಕಿ ಉಳಿದಿವೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 4.46 ಕೋಟಿ ಪ್ರಕರಣಗಳು ದಾಖಲಾಗಿವೆ. 61 ಲಕ್ಷಕ್ಕೂ ಹೆಚ್ಚು ಪ್ರಕರಣಗಳು 25 ಹೈಕೋರ್ಟ್‌ಗಳ ಮಟ್ಟದಲ್ಲಿವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ತಿಳಿಸಿದ್ದಾರೆ.

    ಭಾರತೀಯ ನ್ಯಾಯಾಂಗದಲ್ಲಿ ಒಟ್ಟಾರೆಯಾಗಿ 26,568 ನ್ಯಾಯಾಧೀಶರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್‌ನ ಅನುಮೋದಿತ ಸಂಖ್ಯಾಬಲ 34 ಆಗಿದ್ದರೆ, ಹೈಕೋರ್ಟ್‌ಗಳ ಅನುಮೋದಿತ ಬಲ 1,114 ಆಗಿದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 25,420 ನ್ಯಾಯಾಧೀಶರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ನೆಟ್ಟಿಗರ ಗಮನಸೆಳೆದ ಬುಲ್​ ರೈಡರ್​: ದೆಹಲಿಯ ರಸ್ತೆಗಳಲ್ಲಿಯೇ ಗೂಳಿ ಸವಾರಿ ಮಾಡಿದ್ದೇಕೆ?

    ರೂ. 1500 ಕೋಟಿಯ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣ: ಮತ್ತೊಬ್ಬ ಬಾಲಿವುಡ್​ ನಟನಿಗೆ ಸಮನ್ಸ್​

    ಮತ್ತೆ ದಾಖಲೆ ಮಟ್ಟ ತಲುಪಿದ ಷೇರು ಸೂಚ್ಯಂಕ: ಒಂದೇ ದಿನದಲ್ಲಿ ಶೇ. 5 ಏರಿದ ಷೇರುಗಳು ಯಾವವು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts