More

    ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!

    ನವದೆಹಲಿ: ಹೊಸ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ದಿನವೂ ಹೊಸ ದಾಖಲೆಗಳನ್ನೇ ಸೃಷ್ಟಿಸುತ್ತಿದೆ. ಇದರ ನಡುವೆಯೂ ಕೆಲ ಆಶಾದಾಯಕ ಬೆಳವಣಿಗೆಗಳಿಗೂ ಸಾಕ್ಷಿಯಾಗುತ್ತಿದೆ.

    ಭಾರತದ ಟೆಸ್ಟ್​, ಟ್ರ್ಯಾಕ್​, ಟ್ರೀಟ್​ ಸೂತ್ರ ಹೊಸ ಉನ್ನತಿಗೆ ಕಾರಣವಾಗಿದೆ. ಒಂದೇ ದಿನ 8,68,679 ಟೆಸ್ಟ್​ಗಳನ್ನು ಮಾಡಲಾಗಿದೆ. ಇದು ಈವರೆಗಿನ ಅತಿ ಹೆಚ್ಚು ಪ್ರಮಾಣವಾಗಿದೆ. ಈ ಮೂಲಕ ಇಲ್ಲಿವರೆಗೆ 2.85 ಕೋಟಿ ಕರೊನಾ ತಪಾಸಣೆಗಳನ್ನು ನಡೆಸಿದಂತಾಗಿದೆ.

    ಇದನ್ನೂ ಓದಿ; ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

    ಶುಕ್ರವಾರ ಒಂದೇ ದಿನ 57,381 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಕೋವಿಡ್​ನಿಂದ ಗುಣವಾದವರ ಸಂಖ್ಯೆ 18 ಲಕ್ಷ ದಾಟಿದಂತಾಗಿದೆ. ಚೇತರಿಕೆ ಪ್ರಮಾಣ ಶೇ.71.61ಕ್ಕೆ ಏರಿದೆ. 10 ರಾಜ್ಯಗಳಲ್ಲಿ ಈ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಇನ್ನುಳಿದ ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ದೆಹಲಿಯಲ್ಲಿ ಚೇತರಿಕೆ ಪ್ರಮಾಣ ಶೇ.89.87 ಆಗಿದ್ದು, ಇಡೀ ದೇಶದಲ್ಲಿಯೇ ಅತ್ಯಧಿಕವಾಗಿದ್ದು, ಮೊದಲ ಸ್ಥಾನದಲ್ಲಿದೆ. 1.50 ಲಕ್ಷ ಪ್ರಕರಣಗಳು ವರದಿಯಾಗಿರುವ ದೆಹಲಿಯಲ್ಲೀಗ ಕೇವಲ 11, 163 ಸಕ್ರಿಯ ಪ್ರಕರಣಗಳಿವೆ.

    ಇದನ್ನೂ ಓದಿ; ಪ್ರಧಾನಿ ಮೋದಿ ಹೇಳಿದ ಮೂರು ದೇಶೀಯ ಕರೊನಾ ಲಸಿಕೆಗಳಾವವು? ಇಲ್ಲಿದೆ ಮಾಹಿತಿ? 

    ತಮಿಳುನಾಡಿನಲ್ಲಿ ಶೇ.81.62, ಗುಜರಾತ್​ ಶೇ.77.53, ಮಧ್ಯಪ್ರದೇಶ 74.70, ಪಶ್ಚಿಮ ಬಂಗಾಳ ಶೇ.73.25, ರಾಜಸ್ಥಾನ ಶೇ.72.84, ತೆಲಂಗಾಣ ಶೇ.72.72, ಒಡಿಶಾದಲ್ಲಿ ಶೇ.71.98 ರೋಗಿಗಳು ಗುಣವಾಗಿದ್ದಾರೆ. ಆಸ್ಪತ್ರೆಯಲ್ಲಿದ್ದವರು ಹಾಗೂ ಹೋಮ್​ ಕ್ವಾರಂಟೈನ್​ನಲ್ಲಿ ಇದ್ದವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿರುವುದರಿಂದ ದೇಶದಲ್ಲಿ ಈವರೆಗೆ 18,08,936 ಜನರು ಕೋವಿಡ್​ನಿಂದ ದೂರಾಗಿದ್ದಾರೆ.

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts