More

    ಎರಡು ದಿನಗಳ ಹಿನ್ನಡೆ ನಂತರ ಸ್ವಲ್ಪ ಚೇತರಿಕೆ; ಬಿಎಸ್​ಇ ಸೂಚ್ಯಂಕ 204 ಅಂಕ ಏರಿಕೆ

    ಮುಂಬೈ: ಹೊಸ ವಿದೇಶಿ ನಿಧಿಯ ಒಳಹರಿವಿನ ನೆರವಿನ ಮೂಲಕ ಆಟೋ, ವಿದ್ಯುತ್ ಮತ್ತು ಲೋಹದ ಷೇರುಗಳಲ್ಲಿನ ಕೊನೆಯ ಕ್ಷಣದ ಖರೀದಿಯಿಂದಾಗಿ ಬಿಎಸ್​ಇ ಹಾಗೂ ಮತ್ತು ನಿಫ್ಟಿ ಸೂಚ್ಯಂಕಗಳು ಮಂಗಳವಾರ ಏರಿಕೆ ಕಂಡಿತು.

    ಹಿಂದಿನ ವಹಿವಾಟುಗಳ ಎರಡು ದಿನಗಳ ನಷ್ಟ ಅನುಭವಿಸಿದ್ದ ಮಾರುಕಟ್ಟೆ ಮಂಗಳವಾರ ಒಂದಿಷ್ಟು ಚೇತರಿಕೆ ಕಂಡಿತು. ಗುರು ನಾನಕ ಜಯಂತಿ ನಿಮಿತ್ತ ಸೋಮವಾರ ರಜೆ ಇದ್ದ ಕಾರಣ ಸತತ ಮೂರು ದಿನಗಳ ಕಾಲ ವಹಿವಾಟು ನಡೆದಿರಲಿಲ್ಲ.

    ಮಂಗಳವಾರ ಬಿಎಸ್‌ಇ ಸೂಚ್ಯಂಕ 204.16 ಅಂಕ ಅಥವಾ ಶೇಕಡಾ 0.31 ರಷ್ಟು ಏರಿಕೆಯಾಗಿ 66,174.20ಕ್ಕೆ ಸ್ಥಿರವಾಯಿತು. ದಿನದ ಸಮಯದಲ್ಲಿ, ಇದು ಗರಿಷ್ಠ 66,256.20 ಮತ್ತು ಕನಿಷ್ಠ 65,906.65 ಅಂಕಗಳಿಗೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 95 ಅಂಕ ಅಥವಾ 0.48 ರಷ್ಟು ಏರಿಕೆ ಕಂಡು 19,889.70ಕ್ಕೆ ಸ್ಥಿರವಾಯಿತು.

    ಟಾಟಾ ಮೋಟಾರ್ಸ್, ಬಜಾಜ್ ಫಿನ್‌ಸರ್ವ್, ಅಲ್ಟ್ರಾಟೆಕ್ ಸಿಮೆಂಟ್, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಎನ್‌ಟಿಪಿಸಿ, ಟೈಟಾನ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಐಸಿಐಸಿಐ ಬ್ಯಾಂಕ್ ಮತ್ತು ಪವರ್ ಗ್ರಿಡ್ ಷೇರುಗಳು ಹಿನ್ನಡೆ ಅನುಭವಿಸಿದವು.

    ಏಷ್ಯನ್ ಮಾರುಕಟ್ಟೆಗಳ ಪೈಕಿ ಸಿಯೋಲ್ ಮತ್ತು ಶಾಂಘೈ ಲಾಭ ಕಂಡರೆ, ಟೋಕಿಯೊ ಮತ್ತು ಹಾಂಗ್ ಕಾಂಗ್ ಕುಸಿತದೊಂದಿಗೆ ಕೊನೆಗೊಂಡವು. ಐರೋಪ್ಯ ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸಿದವು. ಸೋಮವಾರ ಅಮೆರಿಕದ ಮಾರುಕಟ್ಟೆಗಳು ಸ್ವಲ್ಪಮಟ್ಟಿಗೆ ಕುಸಿತ ಕಂಡವು.

    ಬಿಎಸ್‌ಇ ಸೂಚ್ಯಂಕ ಶುಕ್ರವಾರ 47.77 ಅಂಕ ರಷ್ಟು ಕುಸಿದು 65,970.04 ಹಾಗೂ ನಿಫ್ಟಿ 7.30 ಅಂಕ ರಷ್ಟು ಕುಸಿದು 19,794.70 ಕ್ಕೆ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಶುಕ್ರವಾರ 2,625.21 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

    ಸಂಶೋಧನಾ ಪ್ರಬಂಧವನ್ನೂ ಮೀರಿಸಿದ ವಿವಾಹ ಆಮಂತ್ರಣ ಪತ್ರಿಕೆ!

    ನಿಮಗೆ 50, ಒಂಟಿ, ಯಾರನ್ನಾದರೂ ಹುಡುಕಿಕೊಳ್ಳಿ.. ರಾಹುಲ್​ ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ಓವೈಸಿ

    ಕೇರಳ ಬಾಲಕಿ ಕಿಡ್ನ್ಯಾಪ್​ ಪ್ರಕರಣ ಸುಖಾಂತ್ಯ; 20 ಗಂಟೆಗಳ ಹುಡುಕಾಟದ ನಂತರ ಪತ್ತೆ

    dE

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts