More

    ನಿಮಗೆ 50, ಒಂಟಿ, ಯಾರನ್ನಾದರೂ ಹುಡುಕಿಕೊಳ್ಳಿ.. ರಾಹುಲ್​ ಗಾಂಧಿ ವಿರುದ್ಧ ನಾಲಿಗೆ ಹರಿಬಿಟ್ಟ ಓವೈಸಿ

    “ರಾಹುಲ್ ಗಾಂಧಿ ನೀವು ಮಾತನಾಡುವ ಮುನ್ನ ಯೋಚಿಸಿ, ನಿಮಗೆ 50 ವರ್ಷ ದಾಟಿದೆ, ಒಂಟಿತನ ನಿಮ್ಮನ್ನು ಕಾಡುತ್ತಿರಬೇಕು, ಅದು ನಿಮ್ಮ ನಿರ್ಧಾರ, ನಾವು ಯಾರ ಜೀವನದಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ, ನಾವು ಯಾರಿಗೂ ತೊಂದರೆ ನೀಡುವುದಿಲ್ಲ, ಆದರೆ, ಯಾರಾದರೂ ನಮ್ಮನ್ನು ಚುಡಾಯಿಸಿದರೆ ನಾವು ಅವರನ್ನು ಬಿಡುವುದಿಲ್ಲ…”

    ಹೀಗೆ ರಾಹುಲ್​ ಗಾಂಧಿ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ.

    ಎಐಎಂಐಎಂ ಮುಖ್ಯಸ್ಥ ರಾಹುಲ್ ಗಾಂಧಿ ಅವರ ‘ಇಬ್ಬರು ಗೆಳೆಯರು’ ಹೇಳಿಕೆಗೆ ಹೇಳಿದ್ದಾರೆ.

    ಅಸಾದುದ್ದೀನ್ ಓವೈಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಾಜಿ ಸ್ನೇಹಿತ ಎಂದು ರಾಹುಲ್ ಗಾಂಧಿ ಮಾಡಿದ ಪ್ರತಿಕ್ರಿಯೆಯಾಗಿ ಈ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

    ನವೆಂಬರ್ 25 ರಂದು ತೆಲಂಗಾಣದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸರ್ಕಾರವನ್ನು ಭ್ರಷ್ಟ ಎಂದು ಜರೆದಿದ್ದರು.

    “ಮೋದಿಜಿ ಕೆ ಹೈ ದೋ ಯಾರ್, ಓವೈಸಿ ಔರ್ ಕೆಸಿಆರ್ (ಪ್ರಧಾನಿ ಮೋದಿಗೆ ಇಬ್ಬರು ಸ್ನೇಹಿತರಿದ್ದಾರೆ. ಓವೈಸಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್)” ಎಂದು ತೆಲಂಗಾಣದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದದ್ದ ರಾಹುಲ್ ಗಾಂಧಿ ಹೇಳಿದ್ದರು. ಮೋದಿ ಪ್ರಧಾನಿಯಾಗಬೇಕೆಂದು ಕೆಸಿಆರ್ ಬಯಸಿದ್ದಾರೆ; ಕೆಸಿಆರ್ ಮುಖ್ಯಮಂತ್ರಿಯಾಗಬೇಕೆಂದು ಮೋದಿ ಬಯಸಿದ್ದಾರೆ ಎಂದೂ ಅವರು ಹೇಳಿದ್ದರು.

    ತೆಲಂಗಾಣದಲ್ಲಿ 119 ಸದಸ್ಯರ ರಾಜ್ಯ ವಿಧಾನಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನವೆಂಬರ್ 30 ರಂದು ಮತದಾನ ನಡೆಯಲಿದೆ. ಛತ್ತೀಸ್‌ಗಢ, ಮಿಜೋರಾಂ, ಮಧ್ಯಪ್ರದೇಶ ಮತ್ತು ರಾಜಸ್ಥಾನದೊಂದಿಗೆ ಡಿಸೆಂಬರ್ 3 ರಂದು ಈ ರಾಜ್ಯದ ಫಲಿತಾಂಶ ಪ್ರಕಟವಾಗಲಿದೆ.

    ಕೇರಳ ಬಾಲಕಿ ಕಿಡ್ನ್ಯಾಪ್​ ಪ್ರಕರಣ ಸುಖಾಂತ್ಯ; 20 ಗಂಟೆಗಳ ಹುಡುಕಾಟದ ನಂತರ ಪತ್ತೆ

    ಸಂಜೆಯ ಹೊತ್ತಿಗೆ ಬರಬಹುದು ಸಿಹಿ ಸುದ್ದಿ; ಸುರಂಗ ಕೊರೆತ ಬಹುತೇಕ ಪೂರ್ಣ, ಆಗರ್ ಯಂತ್ರದೊಂದಿಗೆ ಪೈಪ್‌ ಅಳವಡಿಕೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts