More

    ಸಂಶೋಧನಾ ಪ್ರಬಂಧವನ್ನೂ ಮೀರಿಸಿದ ವಿವಾಹ ಆಮಂತ್ರಣ ಪತ್ರಿಕೆ!

    ವಿವಾಹ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಗೆ ವಿಶೇಷವಾದ ಸ್ಥಾನವಿರುತ್ತದೆ. ತಮಗಿಷ್ಟವಾದ ಹಾಗೂ ತಮ್ಮ ಬಜೆಟ್​ ಒಳಗೆ ಇರುವ ವೆಡ್ಡಿಂಗ್ ಕಾರ್ಡ್​ ಆಯ್ದುಕೊಳ್ಳಲು ಸಾಕಷ್ಟು ಪರದಾಟ ಕೂಡ ನಡೆಯುತ್ತದೆ. ಹೀಗಾಗಿ, ಮದುವೆ ಆಮಂತ್ರಣಗಳು ಸದಾ ಚರ್ಚೆಯ ವಿಷಯಗಳೇ ಆಗಿರುತ್ತವೆ. ಕೆಲವು ಆಹ್ವಾನ ಪತ್ರಿಕೆಗಳು ಐಷಾರಾಮಿ ಚಾಕೊಲೇಟ್‌ಗಳು ಮತ್ತು ಕುಕೀಗಳನ್ನು ಒಳಗೊಂಡಿರುತ್ತವೆ. ಕೆಲವು ಪುಸ್ತಕದಂತೆ ಗೋಚರಿಸುವಷ್ಟು ದೊಡ್ಡದಾಗಿರುತ್ತವೆ.

    ಆದರೆ, ಯಾವುದೇ ಸಂಶೋಧನಾ ಪ್ರಬಂಧಕ್ಕೆ (ರಿಸರ್ಚ್​ ಪೇಪರ್) ಕಡಿಮೆ ಇಲ್ಲದಂತೆ ಕಾಣುವ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಇದು ಮದುವೆಯ ಆಮಂತ್ರಣ ಕಾರ್ಡ್ ಎಂಬುನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಬಾಂಗ್ಲಾದೇಶದ ಜೋಡಿಯ ಮದುವೆಯ ಆಮಂತ್ರಣದ ಚಿತ್ರವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ.

    ಸಂಶೋಧನಾ ಪ್ರಬಂಧದಂತೆ ಕಾಣುವ ಈ ವಿಶಿಷ್ಟ ಕಾರ್ಡ್ ಸಂಜನಾ ತಬಸ್ಸುಮ್ ಸ್ನೇಹಾ ಮತ್ತು ಮಹ್ಜಿಬ್ ಹೊಸೈನ್ ಇಮೋನ್ ಅವರದ್ದು. ಕಾರ್ಡ್‌ನ ಶೀರ್ಷಿಕೆಯು ವಿವಾಹದ ಸ್ಥಳದೊಂದಿಗೆ ದಂಪತಿಗಳ ಹೆಸರನ್ನು ಒಳಗೊಂಡಿದೆ. ಇದು ಮದುವೆಯ ಪ್ರಾಮುಖ್ಯತೆಯನ್ನು ವಿವರಿಸುವ ಮಾಹಿತಿಯನ್ನೂ ಒಳಗೊಂಡಿದೆ.

    ದಂಪತಿಗಳು ಮೊದಲು ಭೇಟಿಯಾದ ಸ್ಥಳದೊಂದಿಗೆ ಸಂಯೋಜಿಸಲಾದ ಕುರಾನ್ ಪದ್ಯಗಳೊಂದಿಗೆ ಪರಿಚಯವನ್ನು ಕಾರ್ಡ್ ಹೊಂದಿದೆ, ವಿವಾಹ ಪ್ರಕ್ರಿಯೆಗಳ ವಿವರಗಳನ್ನು ಕೂಡ ಹೇಳಲಾಗಿದೆ. ಇದರಲ್ಲಿ ಕುರಾನ್ ಪದ್ಯಗಳನ್ನು ತೆಗೆದುಕೊಂಡ ಸೂರಾಗಳನ್ನು ಸಹ ಉಲ್ಲೇಖಿಸುತ್ತದೆ.

    “ಹೊಸ ಕನಸುಗಳು, ಹೊಸ ದಿಗಂತಗಳನ್ನು ಸಾಧಿಸುವ ಹೊಸ ಭರವಸೆಗಳು ಮತ್ತು ಮ್ಯಾಜಿಕ್ ಕಾರ್ಪೆಟ್ ಸವಾರಿ ಇಲ್ಲದೆ ಯಾರನ್ನಾದರೂ ನಂಬಿ, ನಾವು ದಾಂಪತ್ಯ ಜೀವನದ ಹೊಸ ಆರಂಭಕ್ಕೆ ಕಾಲಿಡುತ್ತಿದ್ದೇವೆ. ನಿಮ್ಮ ಪ್ರೋತ್ಸಾಹ, ಬೆಂಬಲ, ಪ್ರೀತಿ ಮತ್ತು ದುವಾಕ್ಕೆ ಧನ್ಯವಾದಗಳು. ಸಮಾರಂಭಕ್ಕೆ ನಿಮ್ಮ ಉಪಸ್ಥಿತಿ ಇರುವುದನ್ನು ಪ್ರಶಂಸಿಸಲಾಗಿದೆ” ಎಂಬ ಆಕರ್ಷಕ ಬರಹವನ್ನೂ ಕಾರ್ಡ್​ ಒಳಗೊಂಡಿದೆ.

    ಮದುವೆಯ ಆಮಂತ್ರಣದ ಚಿತ್ರವನ್ನು ಕೆಲವು ದಿನಗಳ ಹಿಂದೆ X ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ 33 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 69,000ಕ್ಕೂ ಹೆಚ್ಚು ಲೈಕ್​ಗಳು ಮತ್ತು ಹಲವಾರು ಕಾಮೆಂಟ್‌ಗಳು ವ್ಯಕ್ತವಾಗಿವೆ.

    “ಹಾಗಾದರೆ ಇದು ಸಂಶೋಧನಾ ಪ್ರಬಂಧವಲ್ಲ ಎಂದು ನೀವು ನನಗೆ ಹೇಳುತ್ತಿದ್ದೀರಾ?” ಒಬ್ಬ ಬಳಕೆದಾರ ಬರೆದಿದ್ದಾರೆ. “2 ಸಂಶೋಧಕರು ಮದುವೆಯಾಗುತ್ತಿದ್ದಾರೆ. ಅರ್ಥವಾಯಿತು,” ಎಂದೂ ಕಾಮೆಂಟ್ ಮಾಡಿದ್ದಾರೆ. “ಆ ನಕ್ಷೆಯು ನಿಷ್ಪ್ರಯೋಜಕವಾಗಿದೆ. ಬದಲಿಗೆ, ಅವರು Google ನಕ್ಷೆಗಳನ್ನು ತೆರೆಯುವ QR ಕೋಡ್ ಅನ್ನು ಬಳಸಬಹುದಿತ್ತು” ಎಂದು ಮತ್ತೊಬ್ಬರು ಹೇಳಿದ್ದಾರೆ. “ಪ್ರಬಂಧದಂತೆ ಕಾಣುತ್ತಿದೆ” ಎಂದು ಮಗದೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts