More

    ಹೊರ ರಾಜ್ಯಗಳಿಂದ ಬಂದ ಕನ್ನಡಿಗರಿಗೆ ಪ್ರವೇಶ ನಿರಾಕರಣೆ

    ನಿಪ್ಪಾಣಿ: ಮಹಾರಾಷ್ಟ್ರ ಹಾಗೂ ಗುಜರಾತ ರಾಜ್ಯದಿಂದ 11 ಬಸ್‌ಗಳ ಮೂಲಕ ಸುಮಾರು 247 ಜನರು ಬೆಳಗ್ಗೆ ನಿಪ್ಪಾಣಿ ತಾಲೂಕಿನ ಕೊಗನೋಳಿ ಚೆಕ್‌ಪೋಸ್ಟ್ ಬಳಿ ಆಗಮಿಸಿದ ಘಟನೆ ಭಾನುವಾರ ನಡೆದಿದೆ. ಆದರೆ, ಕರ್ನಾಟಕ ಸರ್ಕಾರ ರಾಜ್ಯ ಪ್ರವೇಶಿಸಲು ನಿರಾಕರಿಸಿದೆ.

    ಕೂಲಿಗಾಗಿ ವಲಸೆ ಹೋಗಿದ್ದ ಕಾರ್ಮಿಕರು, ನಾವು 14 ದಿನ ಕ್ವಾರಂಟೈನ್‌ನಲ್ಲಿ ಇರಲು ಸಿದ್ಧರಿದ್ದೇವೆ. ನಮ್ಮನ್ನು ಕರ್ನಾಟಕ ಪ್ರವೇಶಕ್ಕೆ ಅನುಮತಿ ನೀಡಿ ಎಂದು ವಿನಂತಿಸಿದರು. ಆದರೆ, ಕರ್ನಾಟಕದ ಪೊಲೀಸರು ಪ್ರವೇಶ ನಿರಾಕರಿಸಿದ ಬಳಿಕ ಮಹಾರಾಷ್ಟ್ರ ಪೊಲೀಸರು ಅಲ್ಲಿನ ವೈಟ್ ಆರ್ಮಿ ಗಮನಕ್ಕೆ ತಂದು ಕೂಲಿಕಾರ್ಮಿಕರಿಗೆ ಊಟ, ಉಪಚಾರ ಮಾಡಿ ವಾಪಸ್ ಮುಂಬೈಗೆ ಕಳುಹಿಸಿಕೊಟ್ಟಿದ್ದಾರೆ.

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ 4ನೇ ಹಂತದಲ್ಲಿ ಮೇ 19ರಿಂದ 31ರ ವರೆಗೆ ಹೊರರಾಜ್ಯದಿಂದ ಬಂದವರನ್ನು ರಾಜ್ಯದಲ್ಲಿ ಪ್ರವೇಶಿಸಲು ಇಲ್ಲಿನ ಸರ್ಕಾರ ಅನುಮತಿ ನಿರಾಕರಿಸಿದೆ. ಮಹಾರಾಷ್ಟ್ರದಿಂದ ಅದರಲ್ಲೂ ವಿಶೇಷವಾಗಿ ಮುಂಬೈನಿಂದ ಮರಳುತ್ತಿರುವ ಜನರಲ್ಲಿ ಸೋಂಕು ಪತ್ತೆಯಾಗುತ್ತಿದೆ.

    ಇದಕ್ಕೆ ಪ್ರತಿಕ್ರಿಯಿಸಿದ ಚಿಕ್ಕೋಡಿ ಡಿವೈಎಸ್‌ಪಿ ಮನೋಜಕುಮಾರ ನಾಯಿಕ, ಕೊಗನೋಳಿ ಚೆಕ್‌ಪೋಸ್ಟ್‌ಗೆ ಬಂದವರ ಬಳಿ ಇ-ಪಾಸ್ ಇರಲಿಲ್ಲ. ಅದಕ್ಕೆ ಅವರನ್ನು ರಾಜ್ಯ ಪ್ರವೇಶಿಸಲು ನಿರಾಕರಿಸಿ ಮರಳಿ ಕಳುಹಿಸಲಾಗಿದೆ. ಆದರೆ, ನಮ್ಮ ರಾಜ್ಯದವರ ವ್ಯಥೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts