More

    ಸಾಮಾಜಿಕ ಜಾಲತಾಣಗಳಿಂದ ದೂರವಿರಿ

    ಸಂಡೂರು: ಭಾರತ ಹಲವು ಭಾಷೆ, ಶಿಕ್ಷಣ, ಆಹಾರ, ವೇಷಭೂಷಣ ಹಾಗೂ ವೈವಿಧ್ಯಮಯ ಸಂಸ್ಕೃತಿಯಿಂದ ಅತ್ಯಂತ ಶ್ರೀಮಂತವಾಗಿದೆ ಎಂದು ಹೃದ್ರೋಗ ತಜ್ಞ ಡಾ.ವಿಠ್ಠಲ್ ಟಿ.ಶಾವಿ ಹೇಳಿದರು.

    ಕೃಷ್ಣಾನಗರದ ಬಿಕೆಜಿ ಸಮೂಹ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಐದನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

    ರಾಮಾಯಣ, ಮಹಾಭಾರತದ ಜತೆಗೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಸಾರವು ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ವರವಾಗಿದೆ. ಶಿಕ್ಷಣವು ಜೀವನವನ್ನೇ ಬದಲಿಸುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

    ಬಿಕೆಜಿ ವಿದ್ಯಾಸಂಸ್ಥೆ ಚೇರ್ಮನ್ ಬಿ.ರುದ್ರಗೌಡ ಮಾತನಾಡಿ, ಶಾಲೆಯ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಜೆಇಇ ಮತ್ತು ನೀಟ್ ಫೌಂಡೇಷನ್ ತರಗತಿಗಳನ್ನು ಆರಂಭಿಸಲಾಗುವುದೆಂದು ತಿಳಿಸಿದರು.

    ಬಿಕೆಜಿ ಪಿಯು ಕಾಲೇಜಿನ ಪ್ರಾಚಾರ್ಯ ಕೆ.ಮೋಹನರಾವ್ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಿಕೆಜಿ ವಿದ್ಯಾಸಂಸ್ಥೆ ಸಂಸ್ಥಾಪಕಿ ಕಮಲಮ್ಮ, ಟ್ರಸ್ಟಿಗಳಾದ ಬಿ.ನಾಗನಗೌಡ, ಬಿ.ಬಸವರಾಜಗೌಡ, ಬಿ.ವೀಣಾ ಪಾಟೀಲ್, ಬಿಕೆಜಿ ಎಚ್.ಆರ್.ವಿಭಾಗದ ರಾಜಶೇಖರ್ ಬೆಲ್ಲದ್, ಗೋಪಾಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts