More

    ಮಹೇಶ್​ ಬಾಬು ಹೊಸ ಚಿತ್ರದ ಓಟಿಟಿ ಹಕ್ಕುಗಳು ಎಷ್ಟಕ್ಕೆ ಮಾರಾಟವಾಗಿದೆಯಂತೆ ಗೊತ್ತಾ?

    ಹೈದರಾಬಾದ್​: ‘ಸರ್ಕಾರಿ ವಾರು ಪಾಟ’ ನಂತರ ಮಹೇಶ್​ ಬಾಬು ಇದೀಗ ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ನಾಯಕಿಯರಾಗ ನಟಿಸುತ್ತಿರುವ ಈ ಚಿತ್ರಕ್ಕೆ ಚಿತ್ರೀಕರಣ ಪ್ರಗತಿಯಲ್ಲಿದೆ.

    ಇದನ್ನೂ ಓದಿ: ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ್ರು ದೀಪಿಕಾ … ಯಾಕೆ ಗೊತ್ತಾ?

    ಈ ಮಧ್ಯೆ, ಆಂಧ್ರದಿಂದ ಚಿತ್ರದ ಕುರಿತಾಗಿ ಒಂದು ಭರ್ಜರಿ ಸುದ್ದಿ ಬಂದಿದೆ. ಅದು ಚಿತ್ರದ ಓಟಿಟಿ ಹಕ್ಕುಗಳಿಗೆ ಸಂಬಂಧಿಸಿದ್ದು. ಚಿತ್ರದ ಡಿಜಿಟಲ್​ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ದೊಡ್ಡ ಮೊತ್ತ ಕೊಟ್ಟು ಕೊಂಡಿದೆಯಂತೆ. ಇದೇ ಮೊದಲ ಬಾರಿಗೆ ಮಹೇಶ್​ ಬಾಬು ಅಭಿನಯದ ಚಿತ್ರವೊಂದಕ್ಕೆ ಈ ಮೊತ್ತ ಸಿಗುತ್ತಿದೆ ಎನ್ನುವುದು ವಿಶೇಷ.

    ಎಲ್ಲ ಸರಿ, ಎಷ್ಟಕ್ಕೆ ಮಾರಾಟವಾಗಿರಬಹುದು ಎಂಬ ಪ್ರಶ್ನೆ ಬರಬಹುದು? ಮೂಲಗಳ ಪ್ರಕಾರ, ಚಿತ್ರದ ಡಿಜಿಟಲ್​ ಹಕ್ಕುಗಳಿಗೆ ನೆಟ್​ಫ್ಲಿಕ್ಸ್​ ಇಂಡಿಯಾ 80 ಕೋಟಿ ರೂ. ಕೊಟ್ಟಿದೆಯಂತೆ. ಅದೂ ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಅವತರಣಿಕೆಗಳಿಗೆ. ಹಿಂದಿ ಚಿತ್ರದ ಹಕ್ಕುಗಳನ್ನು ನಿರ್ಮಾಪಕರು ಅವರೇ ಇಟ್ಟುಕೊಂಡಿದ್ದು, ಮುಂದಿನ ದಿನಗಳಲ್ಲಿ ಕೊಡುವ ಸಾಧ್ಯತೆ ಇದೆ.

    ಇದನ್ನೂ ಓದಿ: ಸತತ ಸೋಲುಗಳಿಂದ ಪರ್ಯಾಯ ವೃತ್ತಿಯ ಬಗ್ಗೆ ಯೋಚಿಸಿದ್ದರಂತೆ ಶಾರುಖ್​!

    ಬರೀ ಓಟಿಟಿಯೊಂದರಿಂದಲೇ ಅಲ್ಲ, ಬೇರೆಬೇರೆ ಮೂಲಗಳಿಂದಲೂ ಚಿತ್ರಕ್ಕೆ ಚೆನ್ನಾಗಿ ದುಡ್ಡು ಹರಿದು ಬರುತ್ತಿದೆ. ನಿಜಾಮ್​ ಪ್ರದೇಶದ ವಿತರಣೆ ಹಕ್ಕುಗಳನ್ನು ದಿಲ್​ ರಾಜು 50 ಕೋಟಿ ರೂ.ಗಳಿಗೆ ಪಡೆದಿದ್ದಾರಂತೆ. ಅಲ್ಲಿಗೆ ಚಿತ್ರದ ಬಜೆಟ್​ ಹಣ ಚಿತ್ರೀಕರಣ ಮುಗಿಯುವುದಕ್ಕೆ ಮೊದಲೇ ನಿರ್ಮಾಪಕರ ಕೈಗೆ ಬಂದಿದೆ ಎಂದು ಹೇಳಲಾಗುತ್ತಿದೆ, ಒಟ್ಟಾರೆ ಚಿತ್ರ ಅದೆಷ್ಟು ಬಿಜಿನೆಸ್​ ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

    ಕೊನೆಗೂ ಮಗಳ ಮುಖ ರಿವೀಲ್​ ಮಾಡಿದ ಪ್ರಿಯಾಂಕಾ ಚೋಪ್ರಾ; ವೈರಲ್​ ಆಯ್ತು ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts