More

    ಕೊನೆಗೂ ಮಗಳ ಮುಖ ರಿವೀಲ್​ ಮಾಡಿದ ಪ್ರಿಯಾಂಕಾ ಚೋಪ್ರಾ; ವೈರಲ್​ ಆಯ್ತು ಫೋಟೋ

    ಲಾಸ್​ ಆಂಜಲೀಸ್​: ಮಾಲ್ತಿ ಮೇರಿ ಚೋಪ್ರಾ ಎಂಬ ಮುದ್ದಾದ ಹೆಣ್ಣುಮಗುವಿಗೆ ಪ್ರಿಯಾಂಕಾ ಚೋಪ್ರಾ ತಾಯಿಯಾಗಿ ಒಂದು ವರ್ಷವೇ ಆಗಿದೆ. ಕಳೆದ ಜನವರಿಯಲ್ಲಿ ಈ ಮಗು ಜನಿಸಿತ್ತು. ಆದರೆ, ಪ್ರಿಯಾಂಕಾ ಇದುವರೆಗೂ ಆ ಮಗುವಿನ ಮುಖ ತೋರಿಸಿರಲಿಲ್ಲ. ಮುಖವನ್ನು ಮರೆಮಾಚಿ ಆಕೆಯ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು.

    ಇದನ್ನೂ ಓದಿ: ‘ರೇಸರ್​’ಗೆ ಜತೆಯಾದ ಅದ್ವಿತಿ ಶೆಟ್ಟಿ … ಚಿತ್ರೀಕರಣ ಪ್ರಾರಂಭ

    ಕೊನೆಗೂ ಮಗಳ ಮುಖ ರಿವೀಲ್​ ಮಾಡಿದ ಪ್ರಿಯಾಂಕಾ ಚೋಪ್ರಾ; ವೈರಲ್​ ಆಯ್ತು ಫೋಟೋಈಗ ಇದೇ ಮೊದಲ ಬಾರಿಗೆ ಪ್ರಿಯಾಂಕಾ ತಮ್ಮ ಮುದ್ದಾದ ಮಗುವಿನ ಮುಖವನ್ನು ಜಗತ್ತಿಗೆ ಬಹಿರಂಗಪಡಿಸಿದ್ದಾರೆ. ಅಮೆರಿಕದ ಲಾಸ್ ಎಂಜಲೀಸ್​ನಲ್ಲಿ ನಡೆದ ಸಿನಿಮಾ ಸಂಬಂಧಿ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಗಳ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

    ಮಾಲ್ತಿ ಮೇರಿ ಫೋಟೋ ನೋಡಿ ಪ್ರಿಯಾಂಕಾ ಚೋಪ್ರಾ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವಳು ಎಷ್ಟು ಕ್ಯೂಟ್ ಆಗಿದ್ದಾಳೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

    ಇದನ್ನೂ ಓದಿ: ‘ರೂಪಾಯಿ’ ಚಿತ್ರದಿಂದ ಬಂತು ‘ಖಾರಾಬಾತ್​’ ಹಾಡು; ಚಿತ್ರ ಫೆ.10ಕ್ಕೆ ತೆರೆಗೆ

    ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ಮೊರೆ ಹೋದಾಗ ಹಲವರು ಅವರ ಕಾಲೆಳೆದಿದ್ದರು. ಫಿಗರ್​ ಹಾಳಾಗುತ್ತದೆ ಎಂಬ ಭಯದಲ್ಲಿ ಪ್ರಿಯಾಂಕಾ ಹಾಗೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಕೆಲವು ದಿನಗಳ ಹಿಂದಷ್ಟೇ ಮಾತನಾಡಿದ್ದ ಪ್ರಿಯಾಂಕಾ, ‘ನನಗೆ ಸಾಕಷ್ಟು ಆರೋಗ್ಯದ ಸಮಸ್ಯೆಗಳು ಇದ್ದವು. ನಾನು ಬಾಡಿಗೆ ತಾಯ್ತನದ ಮೊರೆ ಹೋಗದಿದ್ದರೆ ಕಷ್ಟವಾಗುತ್ತಿತ್ತು. ಹಾಗಾಗಿ, ಅದು ಅನಿವಾರ್ಯವಾಗಿತ್ತು’ ಎಂದು ಹೇಳಿಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts