More

    Optical Illusion: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ಚಿರತೆಯನ್ನು ಪತ್ತೆಹಚ್ಚಬಲ್ಲರು!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ನೀವು ಬಂಡೆಗಳಿಂದ ತುಂಬಿರುವ ಪ್ರದೇಶವನ್ನು ನೋಡಬಹುದು. ಆದರೆ, ಆ ಫೋಟೋದ ಒಂದು ಭಾಗದಲ್ಲಿ ಚಿರತೆಯೊಂದು ಕುಳಿದಿದೆ. ಆದರೆ, ಅದನ್ನು ಪತ್ತೆಹಚ್ಚುವುದು ಸುಲಭದ ಮಾತಲ್ಲ. ಏಕೆಂದರೆ, ಬಂಡೆಗಳ ಬಣ್ಣ ಮತ್ತು ಚಿರತೆಯ ಬಣ್ಣಕ್ಕೆ ಕೊಂಚ ಸಾಮ್ಯತೆ ಇದೆ. ಒಂದನ್ನೊಂದು ಬೆರೆತು ಹೋಗಿವೆ. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಆ ಚಿರತೆಯನ್ನು ಪತ್ತೆ ಹಚ್ಚಬೇಕು. ನಿಮ್ಮ ಸಮಯ ಈಗ ಶುರು.

    Optical Illusion: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ಚಿರತೆಯನ್ನು ಪತ್ತೆಹಚ್ಚಬಲ್ಲರು!

    10 ಸೆಕೆಂಡ್​ ಸಮಯದಲ್ಲಿ ನೀವು ಚಿರತೆಯನ್ನು ಫೋಟೋದಲ್ಲಿ ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಚಿರತೆಯನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ.

    Optical Illusion: ತೀಕ್ಷ್ಣ ದೃಷ್ಟಿಯುಳ್ಳವರು ಮಾತ್ರ ಈ ಫೋಟೋದಲ್ಲಿರುವ ಚಿರತೆಯನ್ನು ಪತ್ತೆಹಚ್ಚಬಲ್ಲರು!

    ಅಂದಹಾಗೆ ಈ ಚಿತ್ರವನ್ನು ಸುಧೀರ್​ ಶಿವರಾಮ್​ ಎಂಬ ಛಾಯಚಿತ್ರಗಾರ ರಾಜಸ್ಥಾನದ ಬೇರಾ ಪ್ರದೇಶದಿಂದ ಪ್ರಯಾಣ ಮಾಡುವಾಗ ಮಾರ್ಗ ಮಧ್ಯೆ ಸೆರೆಹಿಡಿದಿದ್ದಾರೆ. (ಏಜೆನ್ಸೀಸ್​)

    ಮತದಾರರ ಮಾಹಿತಿ ಕಳವು: ಕಾಂಗ್ರೆಸ್​ ಆರೋಪಕ್ಕೆ ಸಿಎಂ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ್ ಸ್ಪಷ್ಟನೆ ಹೀಗಿದೆ…

    ಕಾಂಗ್ರೆಸ್​ ಟಿಕೆಟ್​ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!

    ಬಿಎಂಟಿಸಿ ಬಸ್ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯೋಧ ಚೇತನ್ ಸಾವು, ಮುಗಿಲು ಮುಟ್ಟಿದೆ ಪಾಲಕರ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts