More

    ಕಾಂಗ್ರೆಸ್​ ಟಿಕೆಟ್​ಗೆ ಪದವೀಧರರು, ವೈದ್ಯರು, ವಕೀಲರಿಂದಲೂ ಅರ್ಜಿ!

    | ವಿಶೇಷ ವರದಿ ತುಮಕೂರು
    ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲೂ ಟಿಕೆಟ್​ಗೆ ಪೈಪೋಟಿಯಿದೆ.

    ಪಿಎಚ್​ಡಿ ಪದವೀಧರರು, ವೈದ್ಯರು, ವಕೀಲರು ಹಾಗೂ ಸ್ನಾತಕೋತ್ತರ ಪದವೀಧರರ ಹೊಸಮುಖಗಳೂ ಟಿಕೆಟ್​ಗೆ ಅರ್ಜಿ ಸಲ್ಲಿಸಿರುವುದು ಕಾಂಗ್ರೆಸ್​ ಮಟ್ಟಿಗೆ ಹೊಸ ಬೆಳವಣಿಗೆ ಎನಿಸಿದೆ. ಇರುವ ಹನ್ನೊಂದು ಸ್ಥಾನಗಳಿಗೆ ಈವರೆಗೆ 29 ಜನ ಅರ್ಜಿ ಸಲ್ಲಿಸಿದ್ದಾರೆ.

    ಡಾ.ಜಿ.ಪರಮೇಶ್ವರ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಅವರ ಜತೆಗೆ ಮಾಜಿ ಶಾಸಕ ಡಾ.ರಫೀಕ್​ಅಹ್ಮದ್​ ತುಮಕೂರು ನಗರ ಹಾಗೂ ಮತ್ತೊಂದು ಹೊಸ ಮುಖ, ಪಿಎಚ್​ಡಿ ಪದವೀಧರರಾದ ಡಾ.ಸಾಸಲು ಸತೀಶ್​ ಶಿರಾ ಕ್ಷೇತ್ರದಿಂದ ಟಿಕೆಟ್​ ಬಯಸಿದ್ದಾರೆ.

    ವೈದ್ಯರಾದ ಡಾ.ಎಸ್​.ಜಿ.ಪರಮೇಶ್ವರಪ್ಪ, ಡಾ.ವಿಜಯರಾಘವೇಂದ್ರ ಚಿಕ್ಕನಾಯಕನಹಳ್ಳಿಯಿಂದ, ಡಾ.ಎಚ್​.ಡಿ. ರಂಗನಾಥ್​ ಕುಣಿಗಲ್​ನಿಂದ, ತುಮಕೂರು ನಗರದಿಂದ ಡಾ.ಫರಾನಬೇಗಂ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ್ದು, ನಾಲ್ವರು ವೈದ್ಯರು ಕಾಂಗ್ರೆಸ್​ ಟಿಕೆಟ್​ ಬಯಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

    ಅರ್ಜಿ ಸಲ್ಲಿಸಿರುವವರ ಪೈಕಿ ವಕೀಲರ ಸಂಖ್ಯೆಯೂ ಹೆಚ್ಚಾಗಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ಶಿರಾದಿಂದ, ಮಧುಗಿರಿಯಿಂದ ಕೆ.ಎನ್​.ರಾಜಣ್ಣ, ಮಾಜಿ ಶಾಸಕ ಬಿ.ಲಕ್ಕಪ್ಪ, ಕೆಪಿಸಿಸಿ ಕಾನೂನು ಘಟಕದ ಸಿ.ಎಂ.ಧನಂಜಯ ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರದಿಂದ ಎಚ್​.ನಿಂಗಪ್ಪ ಹಾಗೂ ಗುಬ್ಬಿಯಿಂದ ಪ್ರಸನ್ನಕುಮಾರ್​ ಟಿಕೆಟ್​ ಬಯಸಿರುವ ವಕೀಲರಾಗಿದ್ದಾರೆ.

    ತಿಪಟೂರು ಕ್ಷೇತ್ರದಿಂದ ಮಾಜಿ ಶಾಸಕ ಕೆ.ಷಡಕ್ಷರಿ, ಟೂಡಾ ಶಶಿಧರ್​, ಲೋಕೇಶ್ವರ್​, ಕೆ.ಟಿ.ಶಾಂತಕುಮಾರ್​, ತುಮಕೂರು ನಗರದಿಂದ ಯುವ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆಮಠ್​, ಇಕ್ಬಾಲ್​ ಅಹ್ಮದ್​, ಅತೀಕ್​ ಅಹ್ಮದ್​, ಟಿಕೆಟ್​ ಬಯಸಿದ್ದಾರೆ.

    ತುರುವೇಕೆರೆಯಿಂದ ಬಿಎಂಎಲ್​ ಕಾಂತರಾಜು, ಸುಬ್ರಹ್ಮಣ್ಯ ಶ್ರೀಕಂಠಯ್ಯ, ಗುಬ್ಬಿಯಿಂದ ಹೊನ್ನಗಿರಿಗೌಡ, ಪಾವಗಡದಿಂದ ವೆಂಕಟೇಶ್​, ಸೋಮ್ಲಾನಾಯಕ್​, ಕೆಂಚಮಾರಯ್ಯ ಅಜಿರ್ ಸಲ್ಲಿಸಿದ್ದು ಹಾಲಿ ಶಾಸಕ ವೆಂಕಟರಮಣಪ್ಪ ನಿರೀಕ್ಷೆಯಂತೆಯೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

    ಕೆಪಿಸಿಸಿ ಡಿ.ಕೆ.ಶಿವಕುಮಾರ್​ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಕೀಲ ಸೂರ್ಯಮುಕುಂದರಾಜ್​ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಟಿಕೆಟ್​ ಬಯಸಿ ಅರ್ಜಿ ಸಲ್ಲಿಸಿರುವುದು ಹೊಸ ಬೆಳವಣಿಗೆ ಎನಿಸಿದೆ. ಶ್ರೀನಿವಾಸ್​ ಎಂಬುವವರೂ ಇದೇ ಕ್ಷೇತ್ರ ಬಯಸಿದ್ದಾರೆ.

    ವಕೀಲರು, ವೈದ್ಯರ ಜತೆಗೆ ಚಿಕ್ಕನಾಯಕನಹಳ್ಳಿಯಿಂದ ಜಿಪಂ ಮಾಜಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಜಗದೀಶ್​ ಹಾಗೂ ತುಮಕೂರು ಗ್ರಾಮಾಂತರದಿಂದ ಶ್ರೀನಿವಾಸ್​, ಮಧುಗಿರಿಯಿಂದ ಕೊಂಡವಾಡಿ ಚಂದ್ರಶೇಖರ್​ ಕೂಡ ಅರ್ಜಿ ಸಲ್ಲಿಸಿದ್ದಾರೆ. ನ.21ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಇನ್ನೂ ಅರ್ಜಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

    ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಅವಶ್ಯ: ಶಿಕ್ಷಣ ತಜ್ಞ ಸಂಜಯ್​ ಎಸ್​. ಗೌಡ

    ಬಿಎಂಟಿಸಿ ಬಸ್ ಡಿಕ್ಕಿ: ಗಂಭೀರ ಗಾಯಗೊಂಡಿದ್ದ ಯೋಧ ಚೇತನ್ ಸಾವು, ಮುಗಿಲು ಮುಟ್ಟಿದೆ ಪಾಲಕರ ಆಕ್ರಂದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts