More

    ಆಧುನಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಅವಶ್ಯ: ಶಿಕ್ಷಣ ತಜ್ಞ ಸಂಜಯ್​ ಎಸ್​. ಗೌಡ

    ಶಿಕ್ಷಣ ಸರ್ವರಿಗೂ ಮಾರ್ಗದರ್ಶಿ. ಶೈಣಿಕ ಕ್ಷೇತ್ರದಲ್ಲಿ ಪ್ರತಿನಿತ್ಯ ಕಲಿಕೆಯ ವಿಚಾರಗಳು ಬದಲಾಗುತ್ತಾ ಹೋಗುತ್ತಿವೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ನಾವೂ ಬದಲಾಗಬೇಕಿದೆ. ಹೊಸ ಶಿಕ್ಷಣ ನೀತಿಗೆ ಒಗ್ಗಿಕೊಳ್ಳಲು ಸಜ್ಜುಗೊಳ್ಳಬೇಕಿದೆ. ಶಿಕ್ಷಕರಲ್ಲೂ ಕಲಿಕೆ ಮಾನದಂಡ ಬದಲಾಗಬೇಕಿದೆ. ಶೈಣಿಕ ಜ್ಞಾನವನ್ನು ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಪರಿಚಯಿಸಬೇಕಿದೆ.

    | ಸಂಜಯ್​ ಎಸ್​. ಗೌಡ ಶಿಕ್ಷಣ ತಜ್ಞ
    ಗುರುಕುಲ ಪದ್ಧತಿಯಿಂದ ಉನ್ನತಿಗೊಂಡು ಬ್ರೀಟಿಷ್​ ಆಳ್ವಿಕೆಯಲ್ಲಿ ಬದಲಾದ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಅನೇಕ ಮಹತ್ವದ ಮೈಲಿಗಲ್ಲುಗಳನ್ನು ನಾವು ಸಾಧಿಸಿದ್ದೇವೆ. ಭಾರತದಾದ್ಯಂತ 1056 ವಿಶ್ವವಿದ್ಯಾಲಯಗಳು, 23 ಐಐಟಿಗಳು ಹಾಗೂ 20 ಐಐಎಂಗಳಲ್ಲಿ ಪ್ರಸ್ತುತ ನಮ್ಮ ಶಿಣ ವ್ಯವಸ್ಥೆ ಹಬ್ಬಿದೆ. ಪ್ರಾಥಮಿಕ ಹಂತದಲ್ಲಿ ಪದವಿ ಗಳಿಕೆಯಷ್ಟೇ ಸಾಧನೆ ಅಂದುಕೊಂಡಿದ್ದ ನಮ್ಮ ಯುವಬಳಗ ಈಗ ಲಭ್ಯವಿರುವ ಎಲ್ಲ ವೈದ್ಯಕೀಯ ತಂತ್ರಜ್ಞಾನ ಆಧಾರಿತ ಶಿಕ್ಷಣದ ಕಡೆ ದಾಪುಗಾಲಿಡುತ್ತಿದೆ. ಈ ಅಮೂಲಾಗ್ರ ಬದಲಾವಣೆಯಿಂದ ದೇಶದ ಯುವಕರು ಹೊರ ದೇಶಗಳಲ್ಲಿ ವ್ಯಾಸಂಗ ಮಾಡಿ ಪ್ರತಿಭಾ ಪಲಾಯನ ಮಾಡುವುದು ತಗ್ಗಿದೆ.

    ಆಧುನಿಕ ಶಿಕ್ಷಣ ಪದ್ಧತಿಯ ಸವಾಲು: ಆಧುನಿಕ ಶಿಕ್ಷಣಕ್ಕೆ ದುಬಾರಿ ವೆಚ್ಚವಾಗುತ್ತಿರುವುದು ಮೊದಲನೇ ಸವಾಲಾಗಿದೆ. ಪ್ರಾಥಮಿಕ ಹಂತದ ಶಿಕ್ಷಣದಿಂದ ಸ್ನಾತಕೋತ್ತರ ಪದವಿವರೆಗೂ ಶಿಕ್ಷಣಕ್ಕೆ ತಗುಲುತ್ತಿರುವ ವೆಚ್ಚ ಬಹಳಷ್ಟು ದುಬಾರಿಯಾಗಿದೆ. ಎಲ್ಲೋ ಒಂದು ಕಡೆ ಮಧ್ಯಮವರ್ಗದ ಜನರಿಗೆ ಉನ್ನತ ಶಿಕ್ಷಣ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಅದರಲ್ಲೂ ವೈದ್ಯಕೀಯ ಶಿಕ್ಷಣ ಹಾಗೂ ಸ್ನಾತಕೋತ್ತರ ಶಿಕ್ಷಣ ವ್ಯವಹಾರಿಕ ಶಿಕ್ಷಣವಾಗಿ ಸಂಘ-ಸಂಸ್ಥೆಗಳಿಗೆ ಸುಲಿಗೆಯ ದಾರಿಯಾಗಿದೆ. ಪ್ರತಿಭಾನ್ವಿತರೂ ಅವಕಾಶ ಪಡೆಯದಂತಾಗಿ ವಾಮಮಾರ್ಗದಿಂದ ಪದವಿ ಪಡೆದು ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಮುಖ ಸವಾಲಾಗಿದೆ.

    ಕರ್ನಾಟಕದ ಶಿಕ್ಷಣ ವ್ಯವಸ್ಥೆ: ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆ ಇದೀಗ ಬದಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ನೀಡುತ್ತಿದ್ದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯನ್ನು ಒಗ್ಗಿಸುವುದು ಬಹಳಷ್ಟು ಸವಾಲಾಗಿ ಪರಿಣಮಿಸಿದೆ. ಕಲಿಕೆಯ ಮಾನದಂಡ ಬದಲಾಗುತ್ತಿರುವಾಗ ಶಿಕ್ಷಕರನ್ನೂ ಹೊಸ ಶಿಕ್ಷಣ ನೀತಿಗೆ ತರಬೇತಿಗೊಳಿಸುವುದು ಬಹುದೊಡ್ಡ ಸವಾಲು. ಶಿಕ್ಷಕರೇ ಹೊಸ ಪದ್ಧತಿಯನ್ನು ಕಲಿತು ಮಕ್ಕಳಿಗೆ ಹೇಳಿಕೊಡಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ “ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಯ್ತು” ಎನ್ನುವ ಪರಿಸ್ಥಿತಿ ಉಂಟಾಗಬಹುದು. ಮಕ್ಕಳ ಸಾಮರ್ಥ್ಯ ಹೆಚ್ಚಿಸುವ ಬಹುದೊಡ್ಡ ಗುರಿಯನ್ನಿಟ್ಟುಕೊಂಡಿರುವ ಎನ್​ಇಪಿಗೆ ಅರ್ಹ ಶಿಕ್ಷಕರ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ.

    ಶಿಕ್ಷಣದ ಬಗ್ಗೆ ಪಾಲಕರ ಮನಸ್ಥಿತಿ: ಪದವಿ ಪಡೆದರೆ ಸಾಕು, ಮಕ್ಕಳಿಗೆ ಕೆಲಸ ಸಿಗುತ್ತದೆ ಎನ್ನುವ ಪಾಲಕರ ಮನಸ್ಥಿತಿ ಸದ್ಯ ಬದಲಾಗಿದೆ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಶಿಣದ ಬೇರೆ ಬೇರೆ ಮಜಲುಗಳನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಸುಶಿಕ್ಷಿತ ಪಾಲಕರು ಕರ್ನಾಟಕದ ದೊಡ್ಡ ಆಸ್ತಿ. ಪುಸ್ತಕ ಓದುವುದಷ್ಟೇ ಶಿಕ್ಷಣವಲ್ಲ ಎನ್ನುವುದು ಪಾಲಕರಿಗೆ ಅರಿವಾಗಿದೆ. ಶಿಕ್ಷಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಪಾಲಕರು ಮಕ್ಕಳ ಗುರಿ ಸಾಧನೆ ಕಡೆ ಸಾಕಷ್ಟು ಗಮನ ಕೊಡುತ್ತಿದ್ದಾರೆ.

    ಆಗಬೇಕಿರುವ ಬದಲಾವಣೆ: ಶಿಕ್ಷಣದಲ್ಲಿ ಬಹಳ ಕ್ಷಿಪ್ರ ಬದಲಾವಣೆ ಆಗಬೇಕಿದೆ. ಆಧುನಿಕ ಶಿಕ್ಷಣ ಎಲ್ಲರಿಗೂ ತಲುಪಬೇಕಿದೆ. ಒಂದು ಸರ್ಕಾರಿ ಶಾಲೆಯ ಮೂಲಭೂತ ಸೌಕರ್ಯಗಳಿಂದ ಪ್ರತಿಭಾನ್ವಿತರಿಗೆ ಸ್ನಾತಕೋತ್ತರ ಪದವಿ ಸಿಗುವವರೆಗೂ ಸರಿಯಾದ ಮಾರ್ಗವನ್ನು ಸರ್ಕಾರ ಕಲ್ಪಿಸಬೇಕಿದೆ. ಶಿಕ್ಷಕರಲ್ಲೂ ಕಲಿಕೆ ಮಾನದಂಡ ಬದಲಾಗಬೇಕಿದೆ. ಜತೆಗೆ ಬದಲಾದ ಪ್ರಾಪಂಚಿಕ ಶೈಕ್ಷಣಿಕ ಜ್ಞಾನವನ್ನು ಅರ್ಥೈಸಿಕೊಂಡು ಅದನ್ನು ನಮ್ಮ ಮಕ್ಕಳಿಗೆ ಕಲಿಸುವಂಥ ಹೊಸ ಹೊಸ ಶಿಕ್ಷಣ ಪದ್ಧತಿಗಳನ್ನು ಕಾಲಕ್ಕೆ ತಕ್ಕಂತೆ ಪರಿಚಯಿಸಬೇಕಿದೆ.

    ಶಿಕ್ಷಣ ತಜ್ಞ ಸಂಜಯ್​ ಎಸ್​. ಗೌಡರ ಬಗ್ಗೆ…
    ಸಂಜಯ್​ ಎಸ್​. ಗೌಡ(Educationist Sanjay S Gowda) ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನವರು. ಬಾಲ್ಯದಿಂದಲೇ ಶಿಕ್ಷಣದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡು ಎಂಬಿಎ ಪಧವೀಧರರಾಗಿ ಶಿರಾ ತಾಲೂಕಿನಲ್ಲಿ ತಮ್ಮದೇ ಆದ ಕೌಶಲಾಧಾರಿತ ಶಿಕ್ಷಣ ಪದ್ಧತಿ ಅಳವಡಿಕೆಯುಳ್ಳ ವರ್ಧಮಾನ್​ ಪಬ್ಲಿಕ್​ ಶಾಲೆ ಪ್ರಾರಂಭಿಸಿದ್ದಾರೆ. ಜತೆಗೆ ಕಳೆದ 11 ವರ್ಷಗಳಿಂದ ಶಿಕ್ಷಣ ಪ್ರೇಮಿಯಾಗಿ ರಾಜ್ಯಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಹಾಗೂ ಪಾಲಕರಿಗೆ ಉಚಿತ ತರಬೇತಿ ಶಿಬಿರಗಳ ಮೂಲಕ ಅರಿವು ಮೂಡಿಸಿದ್ದಾರೆ. ತಮ್ಮದೇ ಆದ ದ್ವೈ ಮಾಸಿಕ ಪತ್ರಿಕೆ (ದಿ ಬೆಸ್ಟ್​ ಪೇರೆಂಟ್ಸ್​)ನ ಸಂಪಾದಕರಾಗಿ ರಾಜ್ಯಾದ್ಯಂತ ಶಿಕ್ಷಣದ ಜಾಗೃತಿ ಮೂಡಿಸುತ್ತಿದ್ದಾರೆ. ಇಂಗ್ಲಿಷ್​ ಮತ್ತು ಹಿಂದಿ ಭಾಷೆಯಲ್ಲೂ ಪತ್ರಿಕೆಯನ್ನು ದೇಶಾದ್ಯಂತ ತಲುಪಿಸುವ ಯೋಜನೆ ಹೊಂದಿದ್ದಾರೆ. ಅಲ್ಲದೆ, ಜಿಲ್ಲೆಯ ಹಾಗೂ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ದಿ ಬೆಸ್ಟ್​ ಪೇರೆಂಟ್ಸ್​ ಟಾಕ್ಸ್(TheBestParentsTalks)​ ಮೂಲಕ ಹೆಸರುವಾಸಿಯಾಗಿದ್ದಾರೆ.

    Bed Wetting – ಬೆಳೆದ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡುವ ಸಮಸ್ಯೆಗೆ ಇಲ್ಲಿದೆ ಪರಿಹಾರೋಪಾಯ…

    ಸೀಬೆ ಬೆಳೆದ ಇಂಜಿನಿಯರ್!

    ಡ್ರ್ಯಾಗನ್​ ಬೇಸಾಯಕ್ಕೆ ನರೇಗಾ ನೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts