More

    ನಿಮ್ಮ ಕಣ್ಣಿಗೊಂದು ಸವಾಲು: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಕಾಡುಬೆಕ್ಕನ್ನು ಗುರುತಿಸಿ!

    ನವದೆಹಲಿ: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ-ಪಕ್ಷಿಗಳಾಗಿರಬಹುದು ಅಥವಾ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವುದಂತೂ ನಿಜ. ಅಂಥದ್ದೇ ಮತ್ತೊಂದು ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೆಟ್ಟಿಗರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ತಮ್ಮನ್ನು ಮನರಂಜಿಸುವ ಮೋಜಿನ ಮಾರ್ಗವಾಗಿದೆ ಮತ್ತು ಸ್ನೇಹಿತರೊಂದಿಗೆ ತಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವ ಮಾರ್ಗವಾಗಿದೆ ಎಂದು ಭಾವಿಸುತ್ತಾರೆ. ಇದರ ಹೊರತಾಗಿ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿಯಾಗಿದೆ.

    ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ….

    ನಿಮ್ಮ ಕಣ್ಣಿಗೊಂದು ಸವಾಲು: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಕಾಡುಬೆಕ್ಕನ್ನು ಗುರುತಿಸಿ!

    ಸದ್ಯ ವೈರಲ್​ ಆಗಿರುವ ಫೋಟೋದಲ್ಲಿ ನೀವು ಹೊರಾಂಗಣ ದೃಶ್ಯವನ್ನು ನೋಡಬಹುದು. ಅದರಲ್ಲಿ ಹುಲ್ಲು, ಎಲೆಗಳನ್ನು ಹೊಂದಿರುವ ಮರ ಮತ್ತು ಪ್ರದೇಶದಾದ್ಯಂತ ಹರಡಿರುವ ಕಲ್ಲುಗಳನ್ನು ಕಾಣಬಹುದು. ಅವುಗಳ ನಡುವೆ ಒಂದು ಕಾಡುಬೆಕ್ಕು ಅವಿತು ಕುಳಿತಿದೆ. ಅದನ್ನು ನೀವು ಪತ್ತೆಹಚ್ಚಬೇಕು. ಆದರೆ, ಅದು ಅಷ್ಟು ಸುಲಭವಲ್ಲ. ಏಕೆಂದರೆ, ಕಣ್ಣಿಗೆ ಸವಾಲು ಎಸೆಯುವಂತಹ ಅಡೆತಡೆಗಳಿವೆ. ತೀಕ್ಷ್ಣ ದೃಷ್ಟಿಯುಳ್ಳವರು ಹಾಗೂ ಬುದ್ಧಿವಂತರು ಮಾತ್ರ ಬೆಕ್ಕು ಎಲ್ಲಿದೆ ಎಂದು ಹುಡುಕಬಲ್ಲರು. ನಿಮಗೆ 10 ಸೆಕೆಂಡ್​ ಸಮಯ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಕಾಡು ಬೆಕ್ಕು ಫೋಟೋದ ಯಾವ ಭಾಗದಲ್ಲಿದೆ ಎಂಬುದನ್ನು ಪತ್ತೆ ಹಚ್ಚಬೇಕು. ನಿಮ್ಮ ಕಣ್ಣಿನ ಸಾಮರ್ಥ್ಯವನ್ನು ಪರೀಕ್ಷಿಸುವ ಸಮಯ ಈಗ ಶುರು.

    10 ಸೆಕೆಂಡ್​ ಸಮಯದಲ್ಲಿ ನೀವು ಫೋಟೋದಲ್ಲಿ ಕಾಡುಬೆಕ್ಕನ್ನು ಗುರುತಿಸಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟುಬಿಡಿ. ಒಂದು ವೇಳೆ ಕಾಡುಬೆಕ್ಕನ್ನು ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತಾ ಹುಡುಕಾಡಿ ಸುಸ್ತಾಗಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ಸಿಗಲಿದೆ. (ಏಜೆನ್ಸೀಸ್​)

    ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!

    ನಟ ಅನಿರುದ್ಧ್​ಗೆ ಮತ್ತೊಮ್ಮೆ ಶಾಕ್​! ಎಸ್​.ನಾರಾಯಣ್​ರ ಮುಂದಿನ ನಡೆ ಏನು? ಇಂದು ಮಧ್ಯಾಹ್ನವೇ ನಿರ್ಧಾರ ಆಗುತ್ತಾ ಭವಿಷ್ಯ?

    ಮದ್ವೆ ಹಿಂದಿನ ದಿನ ಸೆಲ್ಫಿ ತೆಗೆಯಲು ಹೋಗಿ ಕಲ್ಲು ಕ್ವಾರಿಗೆ ಬಿದ್ದ ವಧು-ವರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts