ಸಿನಿಮಾ

ಮಾರುಕಟ್ಟೆಗೆ ಕಾಲಿಟ್ಟ 100 ವ್ಯಾಟ್ ಚಾರ್ಜಿಂಗ್​ ಸ್ಮಾರ್ಟ್​ಫೋನ್​​..!

ದೆಹಲಿ: ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಒಪ್ಪೋ ಕಂಪನಿಯು ತನ್ನ ನೂತನ ರೇನೋ 10 5ಜಿ ಮೊಬೈಲ್ ಸರಣಿಯನ್ನು ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸರಣಿಯು 10, 10ಪ್ರೋ ಹಾಗೂ 10ಪ್ರೋ ಪ್ಲಸ್ ಎಂಬ ಮೂರು ಫೋನ್‌ಗಳನ್ನು ಒಳಗೊಂಡಿದೆ.

ಈ ಫೋನ್‌ಗಳು 6.7 ಇಂಚಿನ ಡಿಸ್‌ಪ್ಲೇ ಜತೆಗೆ ಮೂರು ಹಿಂಬದಿಯ ಕ್ಯಾಮರಾಗಳನ್ನು ಹೊಂದಿವೆ. ರೇನೋ 10 ಫೋನ್​ ಸ್ನಾಪ್ ಡ್ರಾಗನ್ 778G soc ಪ್ರೋಸೆಸರ್​, ರೇನೋ 10ಪ್ರೋ ಮೆಡಿಯಾ ಟೆಕ್ ಡೈಮೆನ್ಸಿಟಿ 8200 Soc ಪ್ರೋಸೆಸರ್​ ಹಾಗೂ 10ಪ್ರೊ ಪ್ಲಸ್ ಸ್ನಾಪ್‌ಡ್ರಾಗನ್ 8+ soc ಪ್ರೋಸೆಸರ್​ನಿಂದ ಬೆಂಬಲಿತವಾಗಿದೆ. 100ವ್ಯಾಟ್ ವೇಗದ ಚಾರ್ಜಿಂಗ್‌ ಹಾಗೂ ಟೈಪ್ ಸಿ ಚಾರ್ಜರ್‌ನ್ನು ಇದು ಬೆಂಬಲಿಸುತ್ತದೆ.

ಇದನ್ನೂ ಓದಿ: ಹಿಂದು ಯುವಕ-ಮುಸ್ಲಿಂ ಯುವತಿ ಸುತ್ತಾಟ; ಹಲ್ಲೆಗೆ ಮುಂದಾದ ಮುಸ್ಲಿಂ ಯುವಕರು!

ಒಪ್ಪೋ ರೇನೋ 10ನ 8GB+ 128GB ಆವೃತ್ತಿಗೆ ಸುಮಾರು 29,000 ರೂ. 12GB+256GB ಆವೃತ್ತಿಗೆ 32000 ರೂ. ಹಾಗೂ 12GB+512GB ಆವೃತ್ತಿಯ ಫೋನ್​ಗೆ ಸುಮಾರು 35,000 ರೂ. ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ. ರೆನೋ 10 ಫೋನ್​ ಗೋಲ್ಡ್, ಬ್ಲೂ ಹಾಗೂ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.

ಒಪ್ಪೋ ರೇನೋ 10 10 ಪ್ರೋ 5G ಫೋನ್​ 16GB RAM + 128GB ಆವೃತ್ತಿಗೆ ಸುಮಾರು 41,000ರೂ. ನಿಗದಿಪಡಿಸಲಾಗಿದೆ. 16GB RAM + 512GB ಆವೃತ್ತಿಗೆ ಸುಮಾರು ರೂ. 45,200 ರೂ. ಬೆಲೆ ಅಂದಾಜಿಸಲಾಗಿದೆ.
ಮತ್ತೊಂದೆಡೆ, 10ಪ್ರೋ ಪ್ಲಸ್ 16+256ಜಿಬಿ ಆವೃತ್ತಿಗೆ 45,000ರೂ. 16+512ಜಿಬಿ ಆವೃತ್ತಿಗೆ 50,000 ರೂ.ಬೆಲೆ ಅಂದಾಜಿಸಲಾಗಿದ್ದು, ಇದು ಗೋಲ್ಡ್, ಪರ್ಪಲ್ ಹಾಗೂ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್