More

    5 ರಿಂದ 15 ವರ್ಷದ ಹೆಣ್ಣುಮಕ್ಕಳ ಅಶ್ಲೀಲ ಫೋಟೋ, ವಿಡಿಯೋಗಳು ಶೇರಿಂಗ್​: ಟೆಕ್ಕಿಗಳು ಸೇರಿ 12 ಮಂದಿ ಅರೆಸ್ಟ್​

    ತಿರುವನಂತಪುರಂ: “ಆಪರೇಷನ್​ ಪಿ ಹಂಟ್​” ಅಡಿಯಲ್ಲಿ ಐಟಿ ಉದ್ಯೋಗಿಗಳು ಸೇರಿದಂತೆ ಸುಮಾರು 12 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳದಲ್ಲಿ ಈ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ. ಅದಕ್ಕೆ ಕಾರಣ ಬಂಧಿತರೆಲ್ಲ ಅಪ್ರಾಪ್ತ ಮಕ್ಕಳ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.

    ನಿನ್ನೆ (ಫೆ.26) ಕೇರಳ ಪೊಲೀಸರು ರಾಜ್ಯಾದ್ಯಂತ “ಆಪರೇಷನ್​ ಪಿ ಹಂಟ್​” ಅಡಿಯಲ್ಲಿ ಕಾರ್ಯಾಚರಣೆ ನಡೆಸಿತು. ಸುಮಾರು 858 ಕೇಂದ್ರದಲ್ಲಿ 142 ಪ್ರಕರಣಗಳು ದಾಖಲಾಗಿವೆ. ಕಾರ್ಯಾಚರಣೆ ವೇಳೆ ಮೊಬೈಲ್​ ಫೋನ್ಸ್​, ಮೊಡೆಮ್ಸ್​, ಹಾರ್ಡ್​ ಡಿಸ್ಕ್​, ಮೆಮೊರಿ ಕಾರ್ಡ್ಸ್​, ಲ್ಯಾಪ್​ಟಾಪ್ಸ್​ ಮತ್ತು ಕಂಪ್ಯೂಟರ್​ ಸೇರಿದಂತೆ ಸುಮಾರು 270 ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.

    ಇದನ್ನೂ ಓದಿ: ಹೈರಾಣಾದ ಹೈನೋದ್ಯಮ, ಹಾಲು ಉತ್ಪಾದಕರು ಕಂಗಾಲು

    5 ರಿಂದ 15 ವರ್ಷ ವಯೋಮಾನದ ಅಪ್ರಾಪ್ತ ಹೆಣ್ಣು ಮಕ್ಕಳ ಅಶ್ಲೀಲ ಫೋಟೋಗಳನ್ನು ಬಂಧಿತ ಆರೋಪಿಗಳು ಇಟ್ಟುಕೊಂಡಿದ್ದರು ಮತ್ತು ಫೋಟೋಗಳನ್ನು ಹರಿಬಿಡುತ್ತಿದ್ದರು. ಹೀಗಾಗಿ ಮಕ್ಕಳ ಕಳ್ಳಸಾಗಾಣೆಯ ಬಗ್ಗೆ ಗುಮಾನಿ ಎದ್ದಿತ್ತು. ಈ ಬಗ್ಗೆ ಕೇರಳ ಪೊಲೀಸ್‌ ಇಲಾಖೆಯ ಮಕ್ಕಳ ಲೈಂಗಿಕ ಶೋಷಣೆ ನಿಗ್ರಹ ಘಟಕವು ಮಾಹಿತಿಯನ್ನು ಸಂಗ್ರಹಿಸಿತ್ತು. ಇದೀಗ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

    ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು, ಸಂಗ್ರಹಿಸುವುದು ಅಥವಾ ವಿತರಿಸಿದರೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡವನ್ನು ಎದುರಿಸಬೇಕಾಗುತ್ತದೆ.

    ಅಂದಹಾಗೆ 2015ರ ಜುಲೈನಲ್ಲಿ ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದು, ನಾಲ್ಕು ಗೋಡೆಗಳ ಮಧ್ಯೆ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುವುದು ಅಪರಾಧವಲ್ಲ ಎಂದು ಹೇಳಿದೆ. ಆದರೆ, ಅಶ್ಲೀಲ ವಿಡಿಯೋ ತಯಾರಿಸುವುದು, ಉತ್ತೇಜಿಸುವುದು ಮತ್ತು ವಿತರಿಸುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಅದರಲ್ಲೂ ಮಕ್ಕಳ ಅಶ್ಲೀಲ ವಿಡಿಯೋವನ್ನು ನಾಲ್ಕು ಗೋಡೆಗಳ ಮಧ್ಯೆ ನೋಡುವುದು ಕೂಡ ಮಹಾಪರಾಧವಾಗಿದೆ.

    ಇದನ್ನೂ ಓದಿ: ಶ್ರೀಮಂತಿಕೆಯ ಹಪಾಹಪಿಯಿಂದ ಸಮಾಜದ ಸ್ವಾಸ್ಥ್ಯ ಹಾಳು: ನ್ಯಾ. ಸಂತೋಷ ಹೆಗ್ಡೆ

    ಒಂದನ್ನು ಸ್ಪಷ್ಟವಾಗಿ ನಾವಿಲ್ಲಿ ಅರಿತುಕೊಳ್ಳಬೇಕು. ಅದೇನೆಂದರೆ, ಪೋರ್ನ್ ವೆಬ್​​ಸೈಟ್‌ಗಳಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು ನೋಡಿದರೆ ನೀವು ಕಂಬಿ ಎಣಿಸಬೇಕಾಗುತ್ತದೆ. ಮಕ್ಕಳ ಪೋರ್ನ್ ವಿಡಿಯೋ ಡೌನ್‌ಲೋಡ್ ಹಾಗೂ ಶೇರ್ ಮಾಡುವವರ ಮೇಲೆ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೋ (ಎನ್​ಸಿಆರ್​ಬಿ) ಹದ್ದಿನ ಕಣ್ಣಿಟ್ಟಿದೆ. (ಏಜೆನ್ಸೀಸ್​)

    https://www.vijayavani.net/new-act-about-inter-religion-marriage/

    ಜ್ಞಾನವೆಂಬ ಸಾಗರ: ಮನೋಲ್ಲಾಸ

    ಹೈರಾಣಾದ ಹೈನೋದ್ಯಮ, ಹಾಲು ಉತ್ಪಾದಕರು ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts