More

    ಶ್ರೀಮಂತಿಕೆಯ ಹಪಾಹಪಿಯಿಂದ ಸಮಾಜದ ಸ್ವಾಸ್ಥ್ಯ ಹಾಳು: ನ್ಯಾ. ಸಂತೋಷ ಹೆಗ್ಡೆ

    ಉಡುಪಿ : ದಿಡೀರ್ ಶ್ರೀಮಂತಿಕೆಯ ಹಪಾಹಪಿಯಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿದೆ. ಕಾನೂನು ಬದ್ಧವಾಗಿ ಸಂಪಾದನೆ ಮಾಡುವುದರಿಂದ ನೆಮ್ಮದಿಯ ಜೀವನ ರೂಪಿಸಿಕೊಳ್ಳಬಹುದು. ದುರಾಸೆಗಳನ್ನು ಬಿಟ್ಟರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದು ಮಾಜಿ ಲೋಕಾಯುಕ್ತ, ಹಾಗೂ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ಹೇಳಿದರು.

    ಭಾನುವಾರ ಎಂಜಿಎಂ ಕಾಲೇಜು ನೂತನ ರವೀಂದ್ರ ಮಂಟಪದಲ್ಲಿ  ನಿವೃತ್ತ ಪೊಲೀಸ್ ಉಪಾಧೀಕ್ಷಕ ಡಾ. ಪ್ರಭುದೇವ ಬಿ. ಮಾನೆ ಅವರು ಬರೆದ ’ಸೇವಾನುಭವದ ನೆನಪುಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

    ಕರ್ನಾಟಕ ಲೋಕಾಯುಕ್ತವನ್ನು ಎಲ್ಲ ಹಂತಗಳಲ್ಲಿಯೂ ದುರ್ಬಲಗೊಳಿಸುವ ಪ್ರಯತ್ನ ನಡೆಯಿತು. ಆದರೆ ಜನರ ವಿಶ್ವಾಸ ಕಡಿಮೆಯಾಗಿಲ್ಲ. ಹಿಂದೆ ಜೈಲಿಗೆ ಹೋಗಿ ಬಂದವರಿಗೆ ಸಾಮಾಜಿಕ ಬಹಿಷ್ಕಾರವಿತ್ತು, ಆದರೆ ಈಗ  ಸ್ವಾಗತಿಸುವ ವ್ಯವಸ್ಥೆ ಇದೆ. ಈ ಪ್ರವೃತ್ತಿ ಬದಲಿಸದೇ ಹೋದರೆ ಮುಂದಿನ ದಿನಗಳಲ್ಲಿ ಕೆಟ್ಟ ಸಮಾಜ ನಿರ್ಮಾಣವಾಗಲಿದೆ ಎಂದರು.

    ಮಾಹೆ ಸಹ ಕುಲಾಧಿಪತಿ ಡಾ ಎಚ್. ಎಸ್ . ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಾ. ಪ್ರಬುದೇವ ಬಿ. ಮಾನೆ, ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ. ಸುಧಾಕರ್ ಹೆಗಡೆ ಉಪಸ್ಥಿತರಿದ್ದರು. ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ ಎಂ. ಆರ್. ಕೇಶವ ಧರಣಿ ಕೃತಿ ಬಗ್ಗೆ ಮಾತನಾಡಿದರು. ಬಾಲಕೃಷ್ಣ ಮದ್ದೋಡಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts