More

    ಜ್ಞಾನವೆಂಬ ಸಾಗರ: ಮನೋಲ್ಲಾಸ

    | ಗುರುನಾಥ ಸುತಾರ

    ಶಿವಪುರ ಎಂಬ ಪುಟ್ಟ ಗ್ರಾಮ. ಈ ಗ್ರಾಮದ ವಿಶೇಷ ಎಂದರೆ ಎಲ್ಲ ಪಾಲಕರು ತಮ್ಮ ಮಕ್ಕಳ ಶಿಕ್ಷಣವನ್ನು ಬರೀ ಓದು ಬರಹಕ್ಕೆ ಮಾತ್ರ ಸೀಮಿತಗೊಳಿಸದೆ ಮೌಲಿಕ ಬದುಕನ್ನು ರೂಪಿಸಿಕೊಳ್ಳಲು ಬೇಕಾದ ಶಿಕ್ಷಣ ಕೊಡಿಸುವುದಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಗ್ರಾಮದ ಹೊರಗೆ ಗುರುಕುಲ ಮಾದರಿಯಲ್ಲಿ ಶಾಲೆಯೊಂದು ಅನೇಕ ವರ್ಷಗಳಿಂದ ನಡೆದು ಬಂದಿತ್ತು. ಈ ಶಾಲೆಯಲ್ಲಿ ಹತ್ತು ವರ್ಷ ಶಿಕ್ಷಣ ಪಡೆಯಬಹುದಿತ್ತು. ಪರಿಪೂರ್ಣ ಶಿಕ್ಷಣ ಪಡೆದ ನಂತರ ಅಲ್ಲಿಯ ಗುರುಗಳಿಗೆ ತಮ್ಮ ಅನುಭವ ಮನವರಿಕೆ ಮಾಡಿಕೊಟ್ಟು ಆ ಗುರುಕುಲದಿಂದ ನಿರ್ಗಮಿಸುವ ಪರಿಪಾಠವಿತ್ತು. ಹತ್ತು ವರ್ಷ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸುಚೇತನ ಎಂಬ ವಿದ್ಯಾರ್ಥಿ, ‘ಪೂಜ್ಯರೇ ನನ್ನ ಹತ್ತು ವರ್ಷದ ಕಲಿಕೆ ಪೂರ್ಣಗೊಳಿಸಿದ್ದೇನೆ. ಇನ್ನು ಕಲಿಯಬೇಕಾದ್ದು ಬಾಕಿ ಇಲ್ಲ. ದಯವಿಟ್ಟು ನನಗೆ ಆಶೀರ್ವದಿಸಬೇಕು’ ಎಂದು ಕೇಳಿಕೊಂಡಾಗ ಗುರುಗಳು, ‘ಆಯಿತು, ಹತ್ತು ವರ್ಷದ ಶಿಕ್ಷಣವನ್ನೇನೋ ಪೂರ್ಣಗೊಳಿಸಿರುವಿ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಆದರೆ, ಅನುಭವ ತುಂಬಾ ಮುಖ್ಯ. ಇನ್ನು ಕೆಲ ಸಂಗತಿಗಳನ್ನು ತಿಳಿದುಕೊಳ್ಳಬಹುದಲ್ಲ’ ಎಂದರು. ಆಗ ಎಲ್ಲವನ್ನು ತಿಳಿದುಕೊಂಡಿದ್ದೇನೆ ಎಂಬ ಅಹಮ್ಮಿನಲ್ಲಿ ಅತ, ‘ಇಲ್ಲಾ ಗುರುಗಳೇ ಈ ವಿಶ್ವದ ಜ್ಞಾನ ನನಗೆ ಲಭಿಸಿದೆ. ಮತ್ತೆ ಕಲಿಯುವ ಅವಶ್ಯಕತೆ ಇಲ್ಲ’ ಎಂದನು. ‘ಹಾಗಾದರೆ ಇಲ್ಲಿ ಕೆಲ ಪರೀಕ್ಷೆ ಮಾಡಿ ನಿನಗೆ ಇಲ್ಲಿಂದ ನಿರ್ಗಮಿಸಲು ಅವಕಾಶ ಕೊಡುತ್ತೇನೆ’ ಎಂದು ಗುರುಗಳು, ‘ಗುರುಕುಲ ಆವರಣದಲ್ಲಿರುವ ಒಂದು ಮರ ಆಯ್ಕೆ ಮಾಡಿಕೊಂಡು, ಆ ಮರದಲ್ಲಿ ಒಂದು ದಿನಕ್ಕೆ ಕುಳಿತು ಮತ್ತೆ ಹಾರಿ ಹೋಗುವ ಕಾಗೆ ಮತ್ತು ಗಿಳಿಗಳ ಸಂಖ್ಯೆ ತಂದುಕೊಡಬೇಕು’ ಎಂದರು.

    ಇದನ್ನೂ ಓದಿ: ಅಪಾರ್ಟ್​​ಮೆಂಟ್​​ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು!

    ಇದೇನು ಮಹಾ ಪರೀಕ್ಷೆ ಎಂದು ಸುಚೇತನನು ಮರದ ಬಳಿಗೆ ಹೋದ. ಸಾಯಂಕಾಲದವರೆಗೆ ಆ ಗಿಡಕ್ಕೆ ಬಂದು ಹೋಗುವ ಗಿಳಿ, ಕಾಗೆಗಳನ್ನು ಅವಲೋಕಿಸಿದ. ಎಲ್ಲ ಕಾಗೆ, ಗಿಳಿಗಳು ಒಂದೇ ತೆರನಾಗಿರುವುದು ಕಂಡುಬಂದಿತು. ಪ್ರತ್ಯೇಕವಾಗಿ ಸಂಖ್ಯೆ ಗುರುತಿಸುವುದು ಸಾಧ್ಯವಾಗದೆ ಪೆಚ್ಚು ಮೋರೆ ಹಾಕಿಕೊಂಡು ಗುರುಗಳ ಬಳಿ ಬಂದ. ಈತನ ಅಸಹಾಯಕತೆ ಗುರುತಿಸಿದ ಗುರುಗಳು, ‘ಜ್ಞಾನವೆಂಬುದು ಸಾಗರದಷ್ಟು ವಿಶಾಲ. ನಮ್ಮ ಬದುಕಿನುದ್ದಕ್ಕೂ ಅಧ್ಯಯನ ಮಾಡಿದ್ದೇವೆ ಎಂದು ಅಹಮಿಕೆಪಟ್ಟರೂ ಅದು ಸಾಗರದಲ್ಲಿಯ ಬೊಗಸೆ ನೀರು ಪಡೆದಷ್ಟು ಮಾತ್ರ. ಕಲಿಕೆಯು ಬಹುಮುಖ ಹಾಗೂ ವಿಶಾಲವಾದದ್ದು. ಆಯಾ ಕ್ಷೇತ್ರಗಳಲ್ಲಿ ಸ್ವಲ್ಪ ಅನುಭವ ಮಾತ್ರ ನಮಗೆ ಲಭಿಸಬಹುದು. ಅದು ದೊಡ್ಡ ಸಾಧನೆ ಎಂದು ತಿಳಿದರೆ ಅದು ನಮ್ಮ ಮೂರ್ಖತನವಾಗುತ್ತದೆ’ ಎಂದು ಉಪದೇಶಿಸಿದಾಗ ಸುಚೇತನನು ಗುರುಗಳ ಪಾದಕ್ಕೆ ಎರಗುತ್ತಾನೆ.

    ವಿದ್ಯೆಗೆ ವಿನಯ ಭೂಷಣವಾದಂತೆ ಸಿರಿವಂತಿಕೆಗೆ ಅಹಮಿಕೆ ಇಲ್ಲದಿರುವುದೇ ಭೂಷಣ. ಇನ್ನೂ ಕಲಿಯಬೇಕಾದ್ದು, ತಿಳಿಯಬೇಕಾದ್ದು ಈ ಪುಣ್ಯಭೂಮಿಯಲ್ಲಿ ಸಾಕಷ್ಟು ಇದೆ ಎಂದು ಅರಿತು ನಡೆದರೆ ಅದು ಬದುಕಿನ ಮೌಲ್ಯ ಹೆಚ್ಚಿಸಬಹುದು.

    (ಲೇಖಕರು ಹವ್ಯಾಸಿ ಬರಹಗಾರರು)

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts