More

    ವಿಧಾನಸೌಧಕ್ಕೆ ದಿಢೀರ್​ ಆಗಮನ ಕ್ರೇನ್​-ಅಗ್ನಿಶಾಮಕ ವಾಹನ; ಅದನ್ನು ಕಂಡು ಕೆಲಕಾಲ ವಿಚಲಿತಗೊಂಡ ಸಿಬ್ಬಂದಿ!

    ಬೆಂಗಳೂರು: ವಿಧಾನಸೌಧಕ್ಕೆ ಇಂದು ದಿಢೀರ್ ಆಗಿ ಕರೆಸಿಕೊಳ್ಳಲಾಗಿದ್ದ ದೊಡ್ಡ ಕ್ರೇನ್​ ಹಾಗೂ ಅಗ್ನಿಶಾಮಕ ವಾಹನದಿಂದಾಗಿ ಅಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರು ಕೆಲಕಾಲ ವಿಚಲಿತಗೊಂಡ ಪರಿಸ್ಥಿತಿ ಉಂಟಾಗಿತ್ತು.

    ಅಗ್ನಿಶಾಮಕ ವಾಹನ ಹಾಗೂ ಕ್ರೇನ್​ ಸಮ್ಮುಖದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಕಂಡ ಹಲವರಿಗೆ ಅಲ್ಲಿ ಏನಾಗುತ್ತಿದೆ ಎಂಬುದು ಅರಿವಿಗೆ ಬರಲು ಒಂದಷ್ಟು ಸಮಯವೇ ಬೇಕಾಯಿತು. ಅಗ್ನಿಶಾಮಕ ವಾಹನದಲ್ಲಿ ಬಂದ ಸಿಬ್ಬಂದಿ ನೋಡನೋಡುತ್ತಿದ್ದಂತೆ ಅದರಲ್ಲಿನ ಏಣಿ ಏರಿ ಕಾರ್ಯಾಚರಣೆಗೆ ತೊಡಗಿದ್ದು ಅಚ್ಚರಿಗೀಡು ಮಾಡಿತ್ತು.

    ಇದನ್ನೂ ಓದಿ: ಬಿತ್ತನೆ ಬೀಜ ಪಡೆಯಲು ಬಂದಿದ್ದ ರೈತ ಮಹಿಳೆಯನ್ನು ತಳ್ಳಿ ಬೀಳಿಸಿದ ಲೇಡಿ ಎಸ್​ಐ; ಪೊಲೀಸ್ ದರ್ಪದ ವಿರುದ್ಧ ಸಾರ್ವಜನಿಕರ ಬೇಸರ

    ಹೀಗೆ ಅಚ್ಚರಿದಾಯಕ ರೀತಿಯಲ್ಲಿ ಕೆಲಕಾಲ ನಡೆದ ಈ ಕಾರ್ಯಾಚರಣೆ ಯಾಕೆಂಬುದನ್ನು ತಿಳಿದ ಅಲ್ಲಿದ್ದವರಿಗೆ ಅಳುವುದೋ ನಗುವುದೋ ಎಂಬಂಥ ಪರಿಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಅದು ಆಪರೇಷನ್​ ಕ್ಯಾಟ್​. ಅರ್ಥಾತ್, ಅಲ್ಲಿ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿದ್ದ ಬೆಕ್ಕೊಂದನ್ನು ರಕ್ಷಿಸುವ ಕಾರ್ಯಾಚರಣೆ ಅದಾಗಿತ್ತು.

    ಇದನ್ನೂ ಓದಿ: ಕುಡುಕರ ಸೋಗಲ್ಲಿ ಹೋಗಿ ಆರೋಪಿಯನ್ನು ಬಂಧಿಸಿದ ಪೊಲೀಸ್; ಕೊನೆಗೂ 9 ವರ್ಷಗಳ ಬಳಿಕ ಸಿಕ್ಕಿಬಿದ್ದ..

    ವಿಧಾನಸೌಧದ ಎರಡನೇ ಮಹಡಿಯ ಆರ್ಚ್ ಮೇಲೆ ಸಿಕ್ಕಿ ಹಾಕಿಕೊಂಡ ಬೆಕ್ಕು ಕೆಳಗಿಳಿಯಲಾಗದೆ ಒದ್ದಾಡಿ ಕೂಗುತ್ತಿದ್ದರಿಂದ ವಿಧಾನಸೌಧದಿಂದ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಲಾಗಿತ್ತು. ಆರ್ಚ್​ ಮೇಲಿದ್ದ ಬೆಕ್ಕನ್ನು ಹಿಡಿದು ರಕ್ಷಿಸಲು ಎರಡನೇ ಮಹಡಿಗೆ ಏಣಿ ಇಟ್ಟು ಏರಿದಾಗ ಆ ವ್ಯಕ್ತಿಯ ಕೈಗೆ ಪರಚಿ ಒದ್ದಾಡಿ ಆರ್ಚ್​ನಿಂದ ಬಿದ್ದ ಬೆಕ್ಕು ನೇರವಾಗಿ ನೆಲಕ್ಕೆ ಬಿದ್ದಿತ್ತು. ಅಲ್ಲಿದ್ದ ಹುಲ್ಲಿನ ಹಸಿರು ಹೊದಿಕೆ ಮೇಲೆ ಅದು ಬಿದ್ದಿದ್ದರಿಂದ ಅಂಥ ಅಪಾಯಕ್ಕೇನೂ ಈಡಾಗದ ಬೆಕ್ಕು ಯಾರ ಕೈಗೂ ಸಿಗದೆ ಪರಾರಿಯಾಗಿತ್ತು. ಒಟ್ಟಿನಲ್ಲಿ ಈ ಕಾರ್ಯಾಚರಣೆ ಕೆಲಕಾಲ ಕುತೂಹಲ ಹಾಗೂ ಮನರಂಜನೆ ವಿಷಯವಾಗಿ ಪರಿಣಮಿಸಿತ್ತು.

    ‘ಹುಕ್ಕಾ ಬಾರ್​ ಅಂದ್ರೆ ಏನು, ಅದು ಹೇಗಿರುತ್ತೆ?’ ಎಂದು ಕೇಳಿ ಅಚ್ಚರಿ ಮೂಡಿಸಿದ ಗೃಹ ಸಚಿವ!

    ಸಮನ್ಸ್ ನೀಡಲು ಬಂದಿದ್ದ ಪೊಲೀಸ್​, ಅತ್ಯಾಚಾರ ಮಾಡಿದ, ಗರ್ಭಪಾತವನ್ನೂ ಮಾಡಿಸಿದ; ವಿಡಿಯೋ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts