More

    ಆನ್‌ಲೈನ್ ಗೆಳತಿ ಜತೆ ಸುತ್ತಾಡಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ಡಾಕ್ಟರ್!

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಯುವತಿಯ ಸ್ನೇಹ ಬೆಳೆಸಿ, ಆಕೆಯ ಜತೆ ಸುತ್ತಾಡಿದ ವೈದ್ಯರೊಬ್ಬರು ‘ಹನಿಟ್ರ್ಯಾಪ್’ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ ನೈಜ ಘಟನೆ ಇದು. ಗುಪ್ತದಳ ಪೊಲೀಸರು ಎಂದು ಹೇಳಿಕೊಂಡು ಬಂದ ಯುವತಿಯ ಸ್ನೇಹಿತರಿಬ್ಬರು 10 ಲಕ್ಷ ರೂ. ಕೊಡದಿದ್ದರೆ ಖಾಸಗಿ ದೃಶ್ಯಗಳನ್ನು ಇಂಟರ್ನೆಟ್‌ನಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಯಲಹಂಕ ಸಮೀಪದ ಪ್ರಕೃತಿನಗರ ನಿವಾಸಿ 40 ವರ್ಷದ ವೈದ್ಯ ಹನಿಟ್ರ್ಯಾಪ್‌ನಲ್ಲಿ ಸಿಲುಕಿರುವವರು. ಇವರು ಕೊಟ್ಟ ದೂರಿನ ಮೇರೆಗೆ ಚಾಂದಿನಿ (22) ಹಾಗೂ ಪ್ರಜ್ವಲ್ (26) ಮತ್ತು ಅನಿರುದ್ಧ (23) ಎಂಬುವರ ವಿರುದ್ಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವ ಕೆಲಸ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ

    ವೈದ್ಯರಿಗೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಚಾಂದಿನಿ ಪರಿಚಯವಾಗಿದ್ದಳು. ಪ್ರತಿನಿತ್ಯ ಚಾಟಿಂಗ್ ಮುಂದುವರಿಸಿದ್ದರು. ಇಬ್ಬರ ನಡುವಿನ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಬಳಿಕ ೆನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಜೂ.13ರಂದು ಬೆಳಗ್ಗೆ ಡಾಕ್ಟರ್‌ಗೆ ಕರೆ ಮಾಡಿದ್ದ ಚಾಂದಿನಿ, ‘ನನಗೆ ಬೇಸರವಾಗುತ್ತಿದೆ. ಹೊರಗಡೆ ಹೋಗೋಣ’ ಎಂದು ಪುಸಲಾಯಿಸಿದ್ದಳು. ಆಕೆಯ ಮಾತನ್ನು ನಂಬಿದ ವೈದ್ಯ, ಅದೇ ದಿನ ಸಂಜೆ ಏರ್‌ಪೋರ್ಟ್ ರಸ್ತೆಯಲ್ಲಿರುವ ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದರು. ಅಲ್ಲೇ ಇಬ್ಬರೂ ಊಟ ಮಾಡಿದ್ದರು.

    ಅಂದೇ ರಾತ್ರಿ 11 ಗಂಟೆಯ ಸುಮಾರಿಗೆ ಯುವತಿಯನ್ನು ಯಲಹಂಕದ ಪ್ರಕೃತಿ ನಗರದ 9ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಗೆ ಕರೆದೊಯ್ದಿದ್ದರು. ತಡರಾತ್ರಿ ಮನೆಗೆ ನುಗ್ಗಿದ ಇಬ್ಬರು ಯುವಕರು, ತಾವು ಇಂಟಲಿಜೆನ್ಸ್ ಪೊಲೀಸರು ಎಂದು ಪರಿಚಯಿಸಿಕೊಂಡರು. ಚಾಂದಿನಿ ಜತೆ ಸುತ್ತಾಡಿರುವ ೆಟೋ ಹಾಗೂ ಏಕಾಂತದಲ್ಲಿರುವ ಖಾಸಗಿ ದೃಶ್ಯಗಳನ್ನು ನಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದೇವೆ. 10 ಲಕ್ಷ ರೂ. ಕೊಡಬೇಕು. ಇಲ್ಲವಾದರೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಮಾನ ಕಳೆಯುತ್ತೇವೆ ಎಂದು ಹೆದರಿಸಿದರು.

    ಇದನ್ನೂ ಓದಿ ಆರ್​ಎಸ್​ಎಸ್​, ಸ್ವದೇಶಿ ಜಾಗರಣ್​ ಮಂಚ್​ ವಿರುದ್ಧ ಚೀನಾ ಕೆಂಗಣ್ಣು…!

    ಇದಕ್ಕೆ ಡಾಕ್ಟರ್ ಜಗ್ಗದಿದ್ದಾಗ ಸ್ವತಃ ಯುವತಿಯೇ ಹೆದರಿಸಲು ಮುಂದಾದಳು. ‘‘ಪೊಲೀಸರು ಎಂದು ಹೇಳಿಕೊಂಡು ಬಂದ ಯುವಕರು ನನ್ನ ಕಡೆಯವರೇ. ಹಣ ಕೊಡದಿದ್ದರೆ ಜೀವ ಸಹಿತ ಬಿಡುವುದಿಲ್ಲ’’ ಎಂದು ಬೆದರಿಸಿದಳು. ತನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಡಾಕ್ಟರ್ ಹೇಳಿದಾಗ ಜೇಬಿನಲ್ಲಿದ್ದ 5000 ರೂ. ತೆಗೆದುಕೊಂಡರು. ‘‘ಮತ್ತೆ ನಿನಗೆ ಫೋನ್ ಮಾಡುತ್ತೇವೆ. ನಾವು ಸೂಚಿಸಿದ ಸ್ಥಳಕ್ಕೆ ಬಾಕಿ ಹಣವನ್ನು ತಂದು ಕೊಡಬೇಕು. ಇದರಲ್ಲಿ ಏನಾದ್ರೂ ಹೆಚ್ಚು ಕಮ್ಮಿಯಾದರೆ ಪೊಲೀಸರಿಗೆ ದೂರು ಕೊಡುತ್ತೇವೆ’’ ಎಂದು ಎಚ್ಚರಿಕೆ ನೀಡಿ ಹೊರಟು ಹೋದರು.

    ಇದೀಗ ಪೊಲೀಸರು ಮೊರೆ ಹೋಗಿರುವ ಡಾಕ್ಟರ್, ‘‘ಆ ಮೂವರೂ ಸೇರಿ ಸಂಚು ರೂಪಿಸಿ ಟ್ರ್ಯಾಪ್ ಮಾಡಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’’ ಎಂದು ದೂರು ಕೊಟ್ಟಿದ್ದಾರೆ.

    2 ಕಿ.ಮೀ. ದೂರದ ಪರೀಕ್ಷಾ ಕೇಂದ್ರ ಕೇಳಿದರೆ 30 ಕಿ.ಮೀ. ದೂರದ್ದು ಸಿಕ್ಕಿತು: ವಿದ್ಯಾರ್ಥಿನಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts