More

    2 ಕಿ.ಮೀ. ದೂರದ ಪರೀಕ್ಷಾ ಕೇಂದ್ರ ಕೇಳಿದರೆ 30 ಕಿ.ಮೀ. ದೂರದ್ದು ಸಿಕ್ಕಿತು: ವಿದ್ಯಾರ್ಥಿನಿಗೆ ಸಂಕಷ್ಟ

    ಕೊಪ್ಪಳ: ತನ್ನೂರಿನಿಂದ 2 ಕಿ.ಮೀ. ದೂರದ ಪರೀಕ್ಷಾ ಕೇಂದ್ರ ಕೋರಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ 30 ಕಿ.ಮೀ. ದೂರದ ಕೇಂದ್ರ ಮಂಜೂರಾಗಿದ್ದರಿಂದ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆ ಬರೆಯುವುದೇ ದುಸ್ತರವಾಗಿ ಪರಿಣಮಿಸಿದೆ.

    ಕೊಪ್ಪಳ ತಾಲೂಕಿನ ಯಲಮಗೇರಿ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಳ್ಳಾರಿಯ ಬೆಸ್ಟ್ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದು, ಕರೊನಾ ಕಾರಣ ತಮ್ಮೂರಲ್ಲೇ ಇದ್ದಾಳೆ. ವಿದ್ಯಾರ್ಥಿಗಳ ಊರಿನಲ್ಲೇ ಅಥವಾ ಸಮೀಪದ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ಕೊಟ್ಟಿದೆ. ಇದರ ಸದುಪಯೋಗ ಪಡೆಯಲು ಈ ವಿದ್ಯಾರ್ಥಿನಿ ತನ್ನೂರಿನಿಂದ 2 ಕಿ.ಮೀ. ದೂರದ ಇರಕಲ್‌ಗಡ ಕೇಂದ್ರ ಕೋರಿ ಅರ್ಜಿ ಸಲ್ಲಿಸಿದ್ದಳು.

    ಆದರೆ, ಹಾಲ್ ಟಿಕೆಟ್‌ನಲ್ಲಿ 30 ಕಿ.ಮೀ.ದೂರದ ಹಿರೇಸಿಂದೋಗಿ ಪರೀಕ್ಷಾ ಕೇಂದ್ರ ಎಂದು ನಮೂದಾಗಿದೆ. ಶಾಲೆಯಿಂದ ಪರೀಕ್ಷಾ ಮಂಡಳಿಗೆ ವಿವರ ಕಳಿಸುವಾಗ ಯಡವಟ್ಟಾಗಿದೆ. ಸರಿಪಡಿಸಲು ವಿದ್ಯಾರ್ಥಿನಿಯ ಪಾಲಕರು ಶಾಲಾ ಮಂಡಳಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ. ಹೀಗಾಗಿ ಆಕೆ ಪ್ರತಿ ಬಾರಿಯೂ ಅಷ್ಟು ದೂರ ಹೋಗಿ ಪರೀಕ್ಷೆ ಬರೆಯುವುದು ಸಾಧ್ಯವಿಲ್ಲದಂತಾಗಿದೆ.

    ಇದನ್ನೂ ಓದಿ ಆರ್​ಎಸ್​ಎಸ್​, ಸ್ವದೇಶಿ ಜಾಗರಣ್​ ಮಂಚ್​ ವಿರುದ್ಧ ಚೀನಾ ಕೆಂಗಣ್ಣು…!

    ಈ ಕುರಿತು ಮಾತನಾಡಿದ ವಿದ್ಯಾರ್ಥಿನಿಯ ದೊಡ್ಡಪ್ಪ ಸಂಗನಗೌಡ ಪಾಟೀಲ್, ‘‘ಯಲಮಗೇರಿಗೆ ಹತ್ತಿರ ಇರುವ ಇರಕಲ್‌ಗಡ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಶಾಲೆಯವರು ತಪ್ಪು ಮಾಹಿತಿ ಕಳಿಸಿದ್ದರಿಂದ ಹಿರೇ ಸಿಂದೋಗಿ ಕೇಂದ್ರದ ಹೆಸರು ಹಾಲ್‌ಟಿಕೆಟ್‌ನಲ್ಲಿ ಬಂದಿದೆ. ಹೀಗಾಗಿ ಮಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ. ಕೊಪ್ಪಳ ಬಿಇಒ ಅವರನ್ನು ಸಂಪರ್ಕಿಸಿದರೆ, ಸಂಬಂಧಿಸಿದ ಶಾಲೆಯವರು ಪರೀಕ್ಷಾ ಮಂಡಳಿಗೆ ತೆರಳಿ ತಿದ್ದುಪಡಿ ಮಾಡಿಸಿಕೊಂಡು ಬರಲು ತಿಳಿಸಿದ್ದಾರೆ. ಶಾಲೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ’’ ಎಂದು ಅಳಲು ತೋಡಿಕೊಂಡಿದ್ದಾರೆ.

    ಬಳ್ಳಾರಿ ಡಿಡಿಪಿಐ ಸಿ.ರಾಮಪ್ಪ ಪ್ರತಿಕ್ರಿಯಿಸಿ, ‘‘ಯಾವುದೇ ವಿದ್ಯಾರ್ಥಿಗೆ ಅನ್ಯಾಯವಾಗಲು ಇಲಾಖೆ ಬಿಡುವುದಿಲ್ಲ. ವಿದ್ಯಾರ್ಥಿನಿ ತನ್ನ ಜಿಲ್ಲೆಯ ಬಿಇಒ ಅಥವಾ ಡಿಡಿಪಿಐರನ್ನು ಸಂಪರ್ಕಿಸಿ ಸಮಸ್ಯೆ ಬಗ್ಗೆ ಗಮನಕ್ಕೆ ತಂದಲ್ಲಿ, ಆಕೆ ಇಚ್ಛಿಸಿದ ಕೇಂದ್ರದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು’’ ಎಂದು ಹೇಳಿದ್ದಾರೆ.

    ಗಡಿ ಸಂಘರ್ಷದಲ್ಲಿ ಮೃತಪಟ್ಟ ಚೀನಾ ಯೋಧರೆಷ್ಟು? ಪತ್ತೆ ಹಚ್ಚಿದೆ ಅಮೆರಿಕ ಗುಪ್ತಚರ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts