More

    ಕೆರಿಬಿಯನ್​ ಪ್ರೀಮಿಯರ್​ ಲೀಗ್​ಗೆ ಭಾರತದ ಮತ್ತೋರ್ವ ಆಟಗಾರ

    ಬೆಂಗಳೂರು: 2012ರ 19 ವಯೋಮಿತಿ ವಿಶ್ವಕಪ್​ ವಿಜೇತ ಭಾರತ ತಂಡದ ಸದಸ್ಯ ಸ್ಮಿತ್​ ಪಟೇಲ್​ ಇದೀಗ ಬಿಸಿಸಿಐನಿಂದ ಸಂಬಂಧ ಕಡಿತಗೊಂಡಿದ್ದು, ಅಮೆರಿಕದಲ್ಲಿ ತಮ್ಮ ವೃತ್ತೀಜಿವನ ಮುಂದುವರಿಸಲು ತೀರ್ಮಾನಿಸಿದ್ದಾರೆ. ಇದರ ಮೊದಲ ಭಾಗದ ಅಂಗವಾಗಿ ಮುಂಬರುವ ಕೆರಿಬಿಯನ್​ ಪ್ರಿಮಿಯರ್​ ಲೀಗ್​ನಲ್ಲಿ ಬಾರ್ಬೊಡಾಸ್​ ಟ್ರಿಡೆಂಟ್ಸ್​ ಪರ ಆಡಲಿದ್ದಾರೆ. ನನ್ನ ಜೀವನದ ಮತ್ತೊಂದು ಇನಿಂಗ್ಸ್​ ಮುಂದುವರಿಯಲಿದೆ ಎಂದು ಕ್ರಿಕೆಟ್​ ವೆಬ್​ಸೈಟ್​ವೊಂದಕ್ಕೆ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಫ್ರೆಂಚ್ ಓಪನ್​ನಿಂದ ಹೊರಬಿದ್ದ ನವೊಮಿ ಒಸಾಕ ಬಗ್ಗೆ ಮಿಥಾಲಿ ರಾಜ್​ ಹೇಳಿದ್ದೇನು?

    ಮೊದಲ ಬಾರಿಗೆ ವಿದೇಶಿ ಲೀಗ್​ಗಳಲ್ಲಿ ಆಡುತ್ತಿರುವೆ. ಈಗಾಗಲೇ ವಾರಾಂತ್ಯದಲ್ಲಿ ಹಲವು ಕ್ಲಬ್​ಗಳ ಪರ ಆಡಿರುವೆ ಎಂದು ಸ್ಮಿತ್​ ಪಟೇಲ್​ ತಿಳಿಸಿದ್ದಾರೆ. ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಗಿರುವ ಮೂಲತಃ ಗುಜರಾತ್​ ರಾಜ್ಯದ ಆಟಗಾರ ದೇಶೀಯ ಕ್ರಿಕೆಟ್​ನಲ್ಲಿ ನೆಲೆಕಂಡುಕೊಳ್ಳಲು ನಾಲ್ಕೂ ತಂಡ ಬದಲಾಯಿಸಿದರಂತೆ. ಗುಜರಾತ್​, ತ್ರಿಪುರ, ಗೋವಾ ಹಾಗೂ ಬರೋಡ ತಂಡಗಳ ಪರ ಆಡಿದ್ದಾರೆ. ಉನ್ಮುಕ್ತ್​ ಚಂದ್​ ಸಾರಥ್ಯದ ಭಾರತ 19 ವಯೋಮಿತಿ ತಂಡದ ಸದಸ್ಯರಾಗಿದ್ದರು. ಇದೀಗ ಸಿಪಿಎಲ್​ನಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಮುಂಬೈ ಮೂಲದ ಪ್ರವೀಣ್​ ತಂಬೆ ಸಿಪಿಎಲ್​ನಲ್ಲಿ ಆಡಿದ್ದರು.

    ಇದನ್ನೂ ಓದಿ: VIDEO: ತಂದೆ ಬರ್ತ್​ಡೇ ಪಾಟಿರ್ಯಲ್ಲಿ ಎಬಿ ಡಿವಿಲಿಯರ್ಸ್​ ಹಾಡಿದ ಹಾಡುಗಳಿಗೆ ಅಭಿಮಾನಿಗಳು ಫಿದಾ

    12 ವರ್ಷಗಳ ಕಾಲ ದೇಶೀಯ ಕ್ರಿಕೆಟ್​ ಟೂನಿರ್ಗಳಲ್ಲಿ ಆಡಿದ ಸ್ಮಿತ್​, 55 ಪ್ರಥಮ ದರ್ಜೆ ಪಂದ್ಯಗಳಿಂದ 3278 ರನ್​ ಸಿಡಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 14 ಅರ್ಧಶತಕ ಒಳಗೊಂಡಿವೆ.

    ಸ್ಟೀವನ್​ ಸ್ಮಿತ್​ ಕೊಠಡಿ ಕೆಳಗೆ ಮಲಗಿದರೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಎಂದು ವಾರ್ನರ್​ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts