More

    ಸ್ಟೀವನ್​ ಸ್ಮಿತ್​ ಕೊಠಡಿ ಕೆಳಗೆ ಮಲಗಿದರೆ ರಾತ್ರಿ ವೇಳೆ ನಿದ್ದೆ ಬರುವುದಿಲ್ಲ ಎಂದು ವಾರ್ನರ್​ ಹೇಳಿದ್ದೇಕೆ?

    ನವದೆಹಲಿ: ಆಸ್ಟ್ರೆಲಿಯಾ ಬ್ಯಾಟ್ಸ್​ಮನ್​ ಸ್ಟೀವನ್​ ಸ್ಮಿತ್​ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಟೆಸ್ಟ್​ ಕ್ರಿಕೆಟ್​ನಲ್ಲಿ ತಂಡದ ಆಧಾರಸ್ತಂಭ. ಟೆಸ್ಟ್​ ಪಂದ್ಯಕ್ಕೂ ಮುನ್ನ ದಿನ ಅವರು ಸಾಕಷ್ಟು ಸಿದ್ಧಗೊಳ್ಳುತ್ತಾರೆ. ಅದು ಮೈದಾನದಲ್ಲಾದರೂ ಸರಿ, ಹೋಟೇಲ್​ನಲ್ಲಾದರೂ ಸರಿ ಸ್ಮಿತ್​ ತಯಾರಿಯೇ ವಿಶೇಷವಾಗಿರುತ್ತದೆ. ಅದರಲ್ಲೂ ಬ್ಯಾಟ್​ ಆಯ್ಕೆ ಮಾಡುವುದೇ ಅವರ ವಿಶೇಷ. ಅದು ಯಾವ ಪರಿ ಎಂದರೇ ಕೆಳಗೆ ಕೊಠಡಿಯಲ್ಲಿ ಮಲಗಿರುವ ಆಟಗಾರರಿಗೆ ನಿದ್ದೆಗೂ ಎಷ್ಟೋ ಭಾರಿ ಭಂಗ ತಂದಿದೆಯಂತೆ. ಈ ವಿಷಯವನ್ನು ಮತ್ತೋರ್ವ ಸ್ಫೋಟಕ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಜೀವನದ ಎರಡನೇ ಇನಿಂಗ್ಸ್​ ಆರಂಭಿಸಿದ ಪಂಜಾಬ್​ ಕಿಂಗ್ಸ್​ ಬ್ಯಾಟ್ಸ್​ಮನ್​, 

    ಸ್ಮಿತ್​ ಉಳಿದುಕೊಂಡಿದ್ದ ಕೊಠಡಿಯ ಕೆಳಗೆ ನಾವೆನಾದರೂ ಇದ್ದರೆ ಖಂಡಿತವಾಗಿಯೂ ನಿದ್ದೆ ಬರುವುದಿಲ್ಲ. ಬ್ಯಾಟ್​ ಹಿಡಿದು ಕುಟುತ್ತಾ ಇರುತ್ತಾರೆ. ನಾಳೆಯ ಪಂದ್ಯಕ್ಕೆ ರಾತ್ರಿಯೇ ಬ್ಯಾಟ್​ಗಳ ಪರೀಕ್ಷೆಯಲ್ಲಿ ತೊಡಗುತ್ತಾರೆ ಎಂದು ವಾರ್ನರ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಬ್ಯಾಟ್​ಗಳನ್ನು ಪರೀಕ್ಷೆ ಮಾಡುವುದು ಅವರ ವಿಶೇಷ ಎಂದ ವಾರ್ನರ್​ ಹೇಳಿದ್ದಾರೆ.

    ಇದನ್ನೂ ಓದಿ: ಫ್ರೆಂಚ್ ಓಪನ್​ನಿಂದ ಹೊರಬಿದ್ದ ನವೊಮಿ ಒಸಾಕ ಬಗ್ಗೆ ಮಿಥಾಲಿ ರಾಜ್​ ಹೇಳಿದ್ದೇನು?

    ಡೇವಿಡ್​ ವಾರ್ನರ್​ 14ನೇ ಐಪಿಎಲ್​ನಲ್ಲಿ ನಿಸ್ತೇಜ ನಿರ್ವಹಣೆ ನೀಡುತ್ತಿದ್ದ ಕಾರಣ ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕತ್ವ ಕಳೆದುಕೊಂಡಿದ್ದರು. ವಾರ್ನರ್​ ನಾಯಕತ್ವದಲ್ಲಿ ಸನ್​ರೈಸರ್ಸ್​ ತಂಡದ ಆಡಿರುವ 7 ಪಂದ್ಯಗಳಲ್ಲಿ ಏಕೈಕ ಗೆಲುವು ದಾಖಲಿಸಿ 6 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ಸೆಪ್ಟೆಂಬರ್​-ಅಕ್ಟೋಬರ್​ ತಿಂಗಳಲ್ಲಿ ಯುಎಇಯಲ್ಲಿ ಉಳಿದ 31 ಐಪಿಎಲ್​ ಪಂದ್ಯಗಳು ನಡೆಯಲಿವೆ.

    VIDEO: ತಂದೆ ಬರ್ತ್​ಡೇ ಪಾಟಿರ್ಯಲ್ಲಿ ಎಬಿ ಡಿವಿಲಿಯರ್ಸ್​ ಹಾಡಿದ ಹಾಡುಗಳಿಗೆ ಅಭಿಮಾನಿಗಳು ಫಿದಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts