More

    ವರ್ಷಾಂತ್ಯದ ರಾತ್ರಿ ಇಲ್ಲೆಲ್ಲ ಹೋಗಲೇಬೇಡಿ; ಹೋದರೆ ಅಷ್ಟೇ..

    ಬೆಂಗಳೂರು: ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಮೈಮರೆತು ವರ್ಷಾಂತ್ಯದ ರಾತ್ರಿ ಎಲ್ಲೆಲ್ಲೋ ಓಡಾಡುವಂತಿಲ್ಲ. ಅದರಲ್ಲೂ ಇಲ್ಲೆಲ್ಲ ಹೋಗುವ ಹಾಗೇ ಇಲ್ಲ. ಒಂದು ವೇಳೆ ಹೋದಿರೆಂದರೆ, ಹೋಗಿ ಪೊಲೀಸರ ಕೈಗೆ ಸಿಕ್ಕರೆ ಅಷ್ಟೇ.. ಕೇಸ್ ಫಿಕ್ಸ್​.

    ವರ್ಷಾಚರಣೆ ವೇಳೆ ಅಹಿತಕರ ಘಟನೆ, ರಸ್ತೆ ಅಪಘಾತ ನಡೆಯದಂತೆ ಸುಗಮ ಸಂಚಾರಕ್ಕಾಗಿ ಮೇಲ್ಸೆತುವೆಗಳಲ್ಲಿ ಸಂಚಾರ ಬಂದ್ ಮಾಡಿ ಕೆಲ ಮಾರ್ಗಗಳನ್ನು ಮಾರ್ಪಾಡು ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ. ಡಿ.31ರ ರಾತ್ರಿ ಪ್ರತಿವರ್ಷದಂತೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ಗಳಲ್ಲಿ ಜನರು ಗುಂಪು ಸೇರುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ವಿಧಿಸಿ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.

    ಡಿ.31ರ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 2 ಗಂಟೆ ವರೆಗೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ಪಾರ್ಕ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಪೊಲೀಸ್ ವಾಹನ, ತುರ್ತು ಸೇವಾ ವಾಹನ ಹೊರತು ಪಡಿಸಿ ಉಳಿದ ಎಲ್ಲ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

    ಇದನ್ನೂ ಓದಿ: ಬಿಎಂಟಿಸಿ ಬಸ್​ ಪ್ರಯಾಣ ದರದಲ್ಲಿ ಇಳಿಕೆ; ಜನವರಿ 1ರಿಂದಲೇ ಜಾರಿ… 

    ಡಿ.31ರ ರಾತ್ರಿ 10 ಗಂಟೆಯಿಂದ ಜ.1ರ ಬೆಳಗ್ಗೆ 6 ಗಂಟೆ ವರೆಗೆ ನಗರದಲ್ಲಿ ಇರುವ 44 ಮೇಲ್ಸೆತುವೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ. ಕೆಲವರು ವರ್ಷಾಚರಣೆ ನೆಪದಲ್ಲಿ ಫ್ಲೈ ಓವರ್‌ಗಳ ಮೇಲೆ ವ್ಹೀಲಿಂಗ್, ಡ್ರ್ಯಾಗ್‌ರೇಸ್, ಅತಿವೇಗದ ಚಾಲನೆ ಮಾಡುತ್ತಾರೆ. ಇದನ್ನು ತಡೆಯಲು ಮೇಲ್ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಡಿ.31ರ ಸಂಜೆ 4 ಗಂಟೆಯಿಂದ ತಡರಾತ್ರಿ 2 ಗಂಟೆ ವರೆಗೆ ಎಂ.ಜಿ. ರಸ್ತೆ, ಕಬ್ಬನ್ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರ ಹಳೇ ಪೊಲೀಸ್ ಠಾಣೆ ಜಂಕ್ಷನ್, ಚರ್ಚ್ ಸ್ಟ್ರೀಟ್, ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮಗರತ್ ರಸ್ತೆ, ಕಮಿಷನರೇಟ್ ರಸ್ತೆ, ಮಾರ್ಕನ್ ರಸ್ತೆ, ಮೈನ್ ಗಾರ್ಡ್ ಕ್ರಾಸ್ ರಸ್ತೆ, ಡಿಸ್ಪೆನ್ಸರಿ ರಸ್ತೆ, ಇಂದಿರಾನಗರ 100 ಅಡಿ ರಸ್ತೆಯಲ್ಲಿ ಪಾರ್ಕಿಂಗ್ ನಿಬಂಧಿಸಲಾಗಿದೆ. ಈ ಆದೇಶ ಉಲ್ಲಂಘನೆ ಮಾಡುವರ ವಿರುದ್ಧ ಸಂಚಾರ ನಿಯಮದಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

    ಇದನ್ನೂ ಓದಿ: ‘ಸೆಕ್ಸ್​ಪರ್ಟ್’​ ಇನ್ನಿಲ್ಲ: ಇವರಿದ್ದಾಗ ಸಿಕ್ಕಿತ್ತು ಅದೆಷ್ಟೋ ಮಂದಿಗೆ ಸಾಂತ್ವನ-ಸಮಾಧಾನ… 

    ಮೋದಿ ಉದ್ಘಾಟಿಸಿದ ಈ ಸುರಂಗ ಮಾರ್ಗದಲ್ಲಿ ಭಾನುವಾರ ಏನಾಯ್ತು ಗೊತ್ತಾ?!

    ಮದ್ವೆಯಾದ ಎರಡೇ ವಾರಕ್ಕೆ ಯುವತಿ ಆತ್ಮಹತ್ಯೆಗೆ ಶರಣು: ಕಣ್ಣೀರು ತರಿಸುವಂತಿದೆ ತಾಯಿಗೆ ಬರೆದ ಡೆತ್​ನೋಟ್​!

    ರೈತರು ಪ್ರತಿಭಟಿಸುತ್ತಿರುವ ಸ್ಥಳದಲ್ಲೇ ‘ಹಾಟ್​ ಸ್ಪಾಟ್​’!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts