More

    ರಸ್ತೆಯಲ್ಲಿ 500 ರೂ. ನೋಟು ಪತ್ತೆ

    ಮುರಗೋಡ: ಗ್ರಾಮದ ಹಳೇ ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಶುಕ್ರವಾರ 500 ರೂ.ಮುಖಬೆಲೆಯ ಮೂರು ನೋಟುಗಳು ಪತ್ತೆಯಾಗಿದ್ದು, ಅದನ್ನು ಕರೊನಾ ಸೋಂಕಿತ ಕಿಡಿಗೇಡಿಗಳು ಉಗುಳು ಹಚ್ಚಿ ಎಸೆದಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು. ಕೂಡಲೇ ಜನರು ಸ್ಥಳೀಯ ಪೊಲೀಸ್ ಠಾಣೆ ಹಾಗೂ ಪಿಡಿಒಗೆ ಸುದ್ದಿ ಮುಟ್ಟಿಸಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.

    ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹ್ಯಾಂಡ್‌ಗ್ಲೋಸ್ ಧರಿಸಿ ರಸ್ತೆಯ ಮೇಲೆ ಬಿದ್ದ ನೋಟುಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಅವನ್ನು ವಶಕ್ಕೆ ಪಡೆದರು. ಈ ದೃಶ್ಯ ವಾಟ್ಸ್ ಆ್ಯಪ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿದಾಡತೊಡಗಿತು. ಆದರೆ, ಸ್ಥಳೀಯ ವೃದ್ಧನೋರ್ವ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಬರುವಾಗ ಜೇಬಿನಿಂದ ಬಿದ್ದಿವೆ ಎಂದು ತಿಳಿದ ಬಳಿಕ, ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು. ಹಣ ಕಳೆದುಕೊಂಡಿದ್ದ ವೃದ್ಧನಿಗೆ ಮರಳಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts