More

    ಮಾಸಿಕ ಪಿಂಚಣಿ 7,500 ರೂ.ಗೆ ಹೆಚ್ಚಿಸಿ

    ಕೆ.ಆರ್.ಪೇಟೆ: ಸಹಕಾರ ಇಲಾಖೆ, ಕಾರ್ಖಾನೆಗಳು ಮತ್ತಿತರ ಕಡೆ ದುಡಿದು ನಿವೃತ್ತ ಹೊಂದಿರುವ ನೌಕರರ ಮಾಸಿಕ ಪಿಂಚಣಿಯನ್ನು ಕನಿಷ್ಠ 7,500 ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿ ಇಪಿಎಸ್ 95 ಭಾರತೀಯ ಸಂಘರ್ಷ ಸಮಿತಿ ಸದಸ್ಯರು ಕೇಂದ್ರ ಸಚಿವ ಕೃಷನ್ ಪಾಲ್ ಗುರ್ಜರ್ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.

    ಸಮಿತಿ ಮುಖಂಡ ಹುಚ್ಚಪ್ಪ ನೇತೃತ್ವದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಸದಸ್ಯರು, ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮನವಿ ಮಾಡಿದರು. ಸಹಕಾರ, ಕಾರ್ಖಾನೆ ಮತ್ತಿತರ ಸೇವಾ ಕ್ಷೇತ್ರಗಳಲ್ಲಿ ದುಡಿದು ನಿವೃತ್ತಿ ಹೊಂದಿರುವವರಿಗೆ ಕೇಂದ್ರ ಸರ್ಕರ ಮಾಸಿಕ 400 ರೂ.ರಿಂದ 2.500 ರೂ.ವರೆಗೆ ಪಿಂಚಿಣಿ ನೀಡುತ್ತಿದೆ. ಇದರಿಂದ ಕಾರ್ಮಿಕ ಕುಟುಂಬ ಜೀವನ ನಿರ್ವಹಣೆ ಮಾಡಲು ಆಗುತ್ತಿಲ್ಲ. ದೇಶದ ಅಭಿವೃದ್ಧಿಗೆ ಕಾರ್ಮಿಕ ವಲಯ ಕೊಡುಗೆ ನೀಡಿದ್ದು, ಇದನ್ನು ಪರಿಗಣಿಸಿ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

    ಪಿಂಚಿಣಿ ಯೋಜನೆಗೆ ಒಳಪಟ್ಟಿರುವ 80 ಲಕ್ಷ ಕಾರ್ಮಿಕರು ದೇಶದಲ್ಲಿದ್ದಾರೆ. ಕರ್ನಾಟಕದಲ್ಲಿ 7.50 ಲಕ್ಷ ಪಿಂಚಿಣಿ ಫಲಾನುಭವಿಗಳಿದ್ದಾರೆ. ಹಾಗಾಗಿ ಕೇಂದ್ರ ಕಾರ್ಮಿಕ ಸಚಿವರಾದ ಭೂಪೇಂದ್ರ ಯಾದವ್ ಅವರೊಂದಿಗೆ ಈ ಸಂಬಂಧ ಮತುಕತೆ ನಡೆಸಿ ಮಾನವೀಯತೆ ಆಧಾರದ ಮೇಲೆ 30-35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಮಾಸಿಕ 7,500 ರೂ.ಗೆ ಹೆಚ್ಚಿಸಬೇಕು. ಕಾಲಕಾಲಕ್ಕೆ ನಿಯಮಾನುಸಾರ ನೀಡುವ ಭತ್ಯೆಯನ್ನೂ ನೀಡಬೇಕು. ನಿವೃತ್ತ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸಿಕೊಡಬೇಕು. ಅಲ್ಲದೆ ನಿವೃತ್ತಿಗೂ ಮುನ್ನವೇ ನಿಧನರಾಗುವ ಕಾರ್ಮಿಕ ಕುಟುಂಬದ ಸದಸ್ಯರಿಗೆ ಕನಿಷ್ಠ 5 ಸಾವಿರ ರೂ. ವಿಧವಾ ವೇತನ ನೀಡಬೇಕೆಂದು ಆಗ್ರಹಿಸಿದರು.

    ಟಿ.ಎ.ಪಿ.ಸಿ.ಎಂ.ಎಸ್. ನಿವೃತ್ತ ನೌಕರ ಚಲುವಯ್ಯ, ನೌಕರ ರವಿಕುಮಾರ್ ಸೇರಿದಂತೆ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts