More

    100ನೇ ಟೆಸ್ಟ್ ಆಡಲು ಸಜ್ಜಾದ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮ

    ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯ ಭಾರತ ತಂಡದ ‘ಲಂಬೂ’ ವೇಗಿ ಇಶಾಂತ್ ಶರ್ಮ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಅವರು ಈ ಸಾಧನೆ ಮಾಡಿದ ಭಾರತದ 2ನೇ ವೇಗದ ಬೌಲರ್ ಎನಿಸಲಿದ್ದಾರೆ. ದಿಗ್ಗಜ ಕಪಿಲ್ ದೇವ್ ಈ ಸಾಧನೆ ಮಾಡಿರುವ ಭಾರತೀಯ ವೇಗಿಯಾಗಿದ್ದಾರೆ.

    ಭಾರತ ಕಂಡ ಪ್ರಮುಖ ವೇಗದ ಬೌಲರ್‌ಗಳಾದ ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಮೊಹಮದ್ ಶಮಿ ಅವರಷ್ಟು ಮಾರಕ ಬೌಲರ್ ಆಗಿರದೆ ಇದ್ದರೂ, 32 ವರ್ಷದ ಇಶಾಂತ್ ಶರ್ಮ ತಮ್ಮ ದೀರ್ಘಕಾಲಿಕ ಟೆಸ್ಟ್ ವೃತ್ತಿಜೀವನದಿಂದ ಗಮನಸೆಳೆದಿದ್ದಾರೆ.

    ಇದನ್ನೂ ಓದಿ: 9ನೇ ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದ ಜೋಕೊವಿಕ್, 18ನೇ ಗ್ರಾಂಡ್ ಸ್ಲಾಂ ಕಿರೀಟ

    ಇದುವರೆಗೆ ಆಡಿರುವ 99 ಟೆಸ್ಟ್‌ಗಳಲ್ಲಿ ಇಶಾಂತ್ 302 ವಿಕೆಟ್ ಕಬಳಿಸಿದ್ದಾರೆ. ಈ ಪೈಕಿ 11 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. 1 ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಕಬಳಿಸಿದ್ದಾರೆ. 74 ರನ್‌ಗೆ 7 ವಿಕೆಟ್ ಕಬಳಿಸಿರುವುದು ಟೆಸ್ಟ್ ಇನಿಂಗ್ಸ್‌ನಲ್ಲಿ ಅವರ ಅತ್ಯುತ್ತಮ ನಿರ್ವಹಣೆಯಾಗಿದೆ.

    ಆಡಿದ ಮೊದಲ 79 ಟೆಸ್ಟ್‌ಗಳಲ್ಲಿ 226 ವಿಕೆಟ್‌ಗಳನ್ನಷ್ಟೇ ಕಬಳಿಸಿದ್ದ ಇಶಾಂತ್ ಬಳಿಕ 20 ಟೆಸ್ಟ್‌ಗಳಲ್ಲಿ 76 ಕಬಳಿಸಿದ್ದಾರೆ. ಈ ಮೂಲಕ ಅನುಭವ ಹೆಚ್ಚಿದಂತೆ ಅವರ ದಾಳಿಯೂ ಹರಿತಗೊಂಡಿದೆ. ಹಾಲಿ ಭಾರತ ತಂಡದ ಅತ್ಯಂತ ಅನುಭವಿ ಆಟಗಾರರೆನಿಸಿರುವ ಇಶಾಂತ್, 2007ರಲ್ಲಿ ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು.

    ಈಡೇರಿತು ಆಲ್​ರೌಂಡರ್​ ಮ್ಯಾಕ್ಸಿ ಆಸೆ: ಹರಾಜಿನಲ್ಲಿ ಆರ್​ಸಿಬಿ ಪಾಲಾದ ಆಸಿಸ್​ ದಾಂಡಿಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts