More

    ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಒಲಿಂಪಿಕ್ಸ್​ ಪದಕ ವಿಜೇತರು; ಬೆಳಿಗ್ಗೆ 7.30 ಕ್ಕೆ ಪ್ರಧಾನಿ ಭಾಷಣ

    ನವದೆಹಲಿ : ಭಾರತದ ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ಸಂದರ್ಭಕ್ಕೆ ನಾಳೆ (ಆಗಸ್ಟ್​ 15) ಬೆಳಿಗ್ಗೆ 7 ಗಂಟೆಗೆ ದೆಹಲಿಯ ಕೆಂಪುಕೋಟೆಯ ಆವರಣದಲ್ಲಿ ಪಾರಂಪರಿಕ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲಿದ್ದಾರೆ.

    ಬೆಳಿಗ್ಗೆ 7.30ಕ್ಕೆ ಪ್ರಧಾನಿ ಮೋದಿ ದೇಶವನ್ನು ಕುರಿತು ಮಾತನಾಡಲಿದ್ದಾರೆ. ಮೊದಲ ಬಾರಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದಿರುವ 32 ಕ್ರೀಡಾಪಟುಗಳು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಜಾವಲಿನ್​ ಎಸೆತದಲ್ಲಿ ಸ್ವರ್ಣ ಪದಕ ಗೆದ್ದ ಸುಬೇದಾರ್​ ನೀರಜ್​ ಚೋಪ್ರ, ಪುರುಷರ ಹಾಕಿ ತಂಡದ ಸದಸ್ಯರು ಸೇರಿದಂತೆ ಪದಕ ಗೆದ್ದ ಇತರ ಕ್ರೀಡಾಪಟುಗಳು ಪಾಲ್ಗೊಳ್ಳುವರು.

    ಇದನ್ನೂ ಓದಿ: ಆಗಸ್ಟ್ 15: ಭಾರತದ ಜೊತೆ ಈ ದೇಶಗಳಿಗೂ ‘ರಾಷ್ಟ್ರೀಯ ದಿನ’

    ಕರೊನಾ ಸಂಬಂಧಿತ ಕಟ್ಟುಪಾಡುಗಳ ನಡುವೆಯೂ “ಆಜಾದಿ ಕಾ ಅಮೃತ್​ ಮಹೋತ್ಸವ್”ನ ಆಚರಣೆಗೆ ಹಲವು ಸಿದ್ಧತೆಗಳು ನಡೆದಿವೆ. ಈ ವಿಶೇಷ ಸಂದರ್ಭದ ದೃಶ್ಯಾವಳಿಗಳನ್ನು ಡಿಡಿ ನ್ಯೂಸ್​ ಮತ್ತು ಸರ್ಕಾರದ ಯೂಟ್ಯೂಬ್​ ಚ್ಯಾನೆಲ್​ನಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. (ಏಜೆನ್ಸೀಸ್)

    ಒಲಿಂಪಿಕ್​​ ಕ್ರೀಡಾಪಟುಗಳ ಸಾಧನೆ ಐತಿಹಾಸಿಕ! 75ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್​

    ಏರ್​ಪೋರ್ಟಲ್ಲಿ ಗಾರ್ಡ್​ ಆಫ್​ ಆನರ್ ಬೇಡ ಎಂದ ಸಿಎಂ ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts