More

    ಒಲಿಂಪಿಕ್​​ ಕ್ರೀಡಾಪಟುಗಳ ಸಾಧನೆ ಐತಿಹಾಸಿಕ! 75ನೇ ಸ್ವಾತಂತ್ರ್ಯೋತ್ಸವಕ್ಕೆ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್​

    ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಇಂದು ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯಾನಂತರದ ಈ 75 ವರ್ಷಗಳಲ್ಲಿ ದೇಶವು ಪ್ರಗತಿ ಪಥದಲ್ಲಿ ನಡೆಯುತ್ತಿದೆ. ವಿಶ್ವ ಸಮುದಾಯ ಭಾರತದ ಸಾಧನೆಗಳನ್ನು ಗೌರವದಿಂದ ನೋಡುತ್ತಿದೆ ಎಂದರು.

    “ಎಲ್ಲ ಭಾರತೀಯರಿಗೂ ದೇಶದ 75ನೇ ಸ್ವಾಧೀನತಾ ದಿನದ ಶುಭಾಶಯಗಳು. ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವಿದ್ದೇವೆ. ಹಲವರ ತ್ಯಾಗ ಬಲಿದಾನಗಳಿಂದಾಗಿ ಇಂದು ನಾವೆಲ್ಲರೂ ಸ್ವತಂತ್ರವಾಗಿ ಉಸಿರಾಡುತ್ತಿದ್ದೇವೆ. ದೇಶದ ಸ್ವಾಧೀನತೆಗಾಗಿ ಶ್ರಮಿಸಿದ ಅಮರ ಸೇನಾನಿಗಳ ಪವಿತ್ರ ನೆನಪಿಗೆ ನಮಿಸುತ್ತೇನೆ” ಎಂದು ರಾಷ್ಟ್ರಪತಿ ಕೋವಿಂದ್​ ಭಾಷಣ ಆರಂಭಿಸಿದರು.

    ಇದನ್ನೂ ಓದಿ: ಆಗಸ್ಟ್ 15: ಭಾರತದ ಜೊತೆ ಈ ದೇಶಗಳಿಗೂ ‘ರಾಷ್ಟ್ರೀಯ ದಿನ’

    “ಇತ್ತೀಚೆಗೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ಮಾಡಿದ್ದಾರೆ. ಭಾರತದ 121 ವರ್ಷಗಳ ಒಲಿಂಪಿಕ್​ ಇತಿಹಾಸದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಹೆಣ್ಣುಮಕ್ಕಳು ಮಹತ್ವದ ಸೆಣೆಸಾಟ ತೋರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಷ್ಟೇ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಇಂತಹ ಸಾಧಕರಿಂದ ಎಲ್ಲಾ ತಂದೆತಾಯಂದಿರು ಪ್ರೇರಣೆ ಪಡೆದು, ತಮ್ಮ ಹೆಣ್ಣುಮಕ್ಕಳಿಗೂ ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕು” ಎಂದರು.

    ಕರೊನಾದಿಂದಾಗಿ ಈ ಬಾರಿಯೂ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿಲ್ಲ. ಆದರೆ ಅದರ ಸಂತೋಷ ನಮ್ಮ ಮನಸ್ಸಿನಲ್ಲಿ ತುಂಬಿದೆ ಎಂದ ರಾಷ್ಟ್ರಪತಿ ಕೋವಿಂದ್​, ಕರೊನಾ ಎರಡನೇ ಅಲೆಯಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡಿರುವುದು, ಸಂಕಷ್ಟಗಳನ್ನು ಎದುರಿಸಿದ್ದು ತೀವ್ರ ದುಃಖದ ಸಂಗತಿಯಾಗಿದೆ. ಅವರ ದುಃಖದಲ್ಲಿ ನಾನೂ ಭಾಗಿ ಎಂದರು.

    ಇದನ್ನೂ ಓದಿ: ಸೋಂಕು ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಆಗಸ್ಟ್​ 23 ರಿಂದ ಶಾಲೆ ಆರಂಭ

    ಕರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಆರೋಗ್ಯ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಬಿತ್ತು. ಈ ಸಂದರ್ಭದಲ್ಲಿ ಅವಿರತ ದುಡಿದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತಿತರರ ಕೆಲಸವನ್ನು ಶ್ಲಾಘನಾರ್ಹ ಎಂದರು. ಕೇಂದ್ರ ಸರ್ಕಾರದೊಂದಿಗೆ, ರಾಜ್ಯಸರ್ಕಾರಗಳು, ಖಾಸಗಿ ವಲಯದ ಸಂಸ್ಥೆಗಳು ಒಟ್ಟಾಗಿ ಈ ಸಂಕಷ್ಟವನ್ನು ಎದುರಿಸಿದ್ದೇವೆ. ಎರಡನೇ ಅಲೆ ತಣ್ಣಗಾಗಿ ಇದೀಗ ನಾವು ನೆಮದ್ದಿಯ ಉಸಿರು ತೆಗೆದುಕೊಳ್ಳುತ್ತಿದ್ದೇವೆ. ಆದರೆ ಹಿಂದಿನ ಅನುಭವದಿಂದ, ನಾವು ಇನ್ನೂ ಜಾಗರೂಕವಾಗಿರಬೇಕು ಎಂಬ ಪಾಠ ಕಲಿಯಬೇಕಿದೆ ಎಂದರು.

    ಅತಿದೊಡ್ಡ ಲಸಿಕಾ ಅಭಿಯಾನದಲ್ಲಿ ದೇಶದ 50 ಕೋಟಿಗೂ ಹೆಚ್ಚು ಜನರಿಗೆ ಕರೊನಾ ಲಸಿಕೆ ನೀಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಎಲ್ಲರೂ ಬೇಗ ಲಸಿಕೆ ಹಾಕಿಸಿಕೊಳ್ಳಿ ಮತ್ತು ಬೇರೆಯವರಿಗೂ ಲಸಿಕೆ ಪಡೆಯಲು ಪ್ರೇರೇಪಿಸಿ ಎಂದು ರಾಷ್ಟ್ರಪತಿ ಕೋವಿಂದ್​ ಕರೆ ನೀಡಿದರು.

    ಯೂಟ್ಯೂಬ್​ ನೋಡಿ ಹೆಲಿಕಾಪ್ಟರ್​ ನಿರ್ಮಿಸಿದ ಯುವಕ! ಪರೀಕ್ಷೆ ನಡೆಸುವಾಗ ವಿಧಿ ಕೈಕೊಟ್ಟಿತು

    ಹೊಟ್ಟೆಯ ಗ್ಯಾಸ್​​ ಸಮಸ್ಯೆ ಪರಿಹರಿಸಲು ‘ಪರಿಪೂರ್ಣ ಪವನಮುಕ್ತಾಸನ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts