ಏರ್​ಪೋರ್ಟಲ್ಲಿ ಗಾರ್ಡ್​ ಆಫ್​ ಆನರ್ ಬೇಡ ಎಂದ ಸಿಎಂ ಬೊಮ್ಮಾಯಿ

bommai
Published on

ಮಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಳತೆಗೆ ಒತ್ತು ನೀಡುತ್ತಿದ್ದಾರೆ. ಮೊನ್ನೆಯಷ್ಟೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ ತುರಾಯಿಗಳ ಮೇಲೆ ಅನಗತ್ಯ ಖರ್ಚು ಬೇಡ ಎಂದು ಆದೇಶ ಹೊರಡಿಸಿದ್ದರು. ಇದೀಗ ಕಾರ್ಯಕ್ರಮಗಳಿಗೆ ಮತ್ತು ಹೋಗುವಾಗ ಬರುವಾಗ ವಿಮಾನ ನಿಲ್ದಾಣದಲ್ಲಿ ತಮಗೆ ಗಾರ್ಡ್ ಆಫ್ ಆನರ್ ಕೊಡಬೇಡಿ ಅಂತ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಗಡಿಜಿಲ್ಲೆಗಳ ಭೇಟಿ ಪ್ರಯುಕ್ತ ಇಂದು ಮಂಗಳೂರಿಗೆ ಬಂದಿಳಿದ ಸಿಎಂ ಬೊಮ್ಮಾಯಿ, ಏರ್ಪೋರ್ಟ್​ನಲ್ಲಿ ಗಾರ್ಡ್ ಆಫ್ ಆನರ್ ಬೇಡ ಎಂದರು. ಸರ್ಕಾರಿ ಕಚೇರಿಗೆ ಭೇಟಿ ಕೊಟ್ಟಾಗ ಮಾತ್ರ ಗಾರ್ಡ್ ಆಫ್ ಆನರ್ ನೀಡಿ. ಕಾರ್ಯಕ್ರಮಗಳಿಗೆ ಹಾಗೂ ಹೋಗುವಾಗ ಬರುವಾಗ ಕೊಡಬೇಡಿ ಅಂತ ಐಜಿಪಿಗೆ ಹೇಳಿದರು.

ಈ ಬಗ್ಗೆ ಒಂದು ನೋಟಿಫಿಕೇಷನ್ ಹೊರಡಿಸುವಂತೆ ಸಹ ಆದೇಶಿಸಿದ ಸಿಎಂ, ವಿಮಾನ ನಿಲ್ದಾಣ, ರೈಲ್ವೇ ಸ್ಟೇಷನ್, ಬಸ್ ಸ್ಟ್ಯಾಂಡ್​ಗಳಲ್ಲಿ ಗಾರ್ಡ್​ ಆಫ್​ ಆನರ್​ ಕೊಟ್ಟರೆ ಸಾರ್ವಜನಿಕರಿಗೆ ತೊಂದರೆಯಾಗುತ್ತೆ ಎಂದರು. ನಂತರ ಇಂದು ಅರೇಂಜ್ ಮಾಡಿಕೊಂಡು ಕಾಯುತ್ತಿದ್ದುದ್ದರಿಂದ ಗಾರ್ಡ್ ಆಫ್ ಆನರ್ ಸ್ವೀಕರಿಸಿದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net