More

    ದೇಶದ ಪ್ರಪ್ರಥಮ ಎಲೆಕ್ಟ್ರಿಕ್ ಟಿಪ್ಪರ್ ‘ಒಲೆಕ್ಟ್ರಾ’ ರಸ್ತೆಗಿಳಿಯಲು ಸಿದ್ಧ; ವಿವಿಧ ಪರೀಕ್ಷೆಗಳಲ್ಲಿ ಯಶಸ್ಸು

    ಬೆಂಗಳೂರು: ಮೇಘಾ ಎಂಜಿನಿಯರಿಂಗ್ ಮತ್ತು ಇನ್​ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಸಮೂಹ ಕಂಪನಿಯಾದ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ (ಒಜಿಎಲ್) ದೇಶೀಯ ಆಟೋಮೋಬೈಲ್ ನಿಯಂತ್ರಣ ಸಂಸ್ಥೆ (ಆಟೋಮೊಬೈಲ್ ರೆಗ್ಯುಲೇಟರಿ ಆರ್ಗನೈಸೇಷನ್ ಆಫ್ ಇಂಡಿಯಾ) ತನ್ನ 6×4 ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್​ಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ. ಟಿಪ್ಪರ್​ಗೆ ಹೋಮೊಲೊಗೇಷನ್ ಪ್ರಮಾಣಪತ್ರ ಪಡೆದುಕೊಂಡಿದ್ದು, ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮಗಳಿಗೆ ಅನುಸಾರವಾಗಿ, ಒಲೆಕ್ಟ್ರಾ ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ರಸ್ತೆಗಿಳಿಯಲು ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ಪಡೆದಿದೆ.

    ಒಲೆಕ್ಟ್ರಾ ತಯಾರಿಸಿದ ದೇಶದ ಮೊದಲ ಇ-ಟಿಪ್ಪರ್ ಪರ್ವತ ಪ್ರದೇಶ, ಬೆಟ್ಟ-ಗುಡ್ಡ, ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ. ಅದರ ನಂತರ, ದೇಶದ ಆಟೋಮೋಬೈಲ್ ನಿಯಂತ್ರಣ ಸಂಸ್ಥೆ ಒಲೆಕ್ಟ್ರಾ ಭಾರತೀಯ ರಸ್ತೆಗಳಿಗೆ ಅನುಗುಣವಾಗಿದೆ ಎಂದು ದೃಢಪಡಿಸಿ ಹೋಮೊಲೈಸೇಷನ್ ಪ್ರಮಾಣಪತ್ರ ನೀಡಿದೆ. ಈ ಪ್ರಮಾಣಪತ್ರ ನೆದರ್ಲೆಂಡ್, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳಿಂದ ಪುರಸ್ಕೃತವಾಗಿದೆ.

    ಭಾರತದ ಎಲೆಕ್ಟ್ರಿಕ್ ಹೆವಿ ವೆಹಿಕಲ್ ಕ್ಷೇತ್ರದಲ್ಲಿ ಒಲೆಕ್ಟ್ರಾ ಪ್ರಮುಖ ಪಾತ್ರ ವಹಿಸುತ್ತಿದೆ ಮತ್ತು ಒಲೆಕ್ಟ್ರಾದ ಅತ್ಯಾಧುನಿಕ ಇ-ಟಿಪ್ಪರ್ ದೇಶದ ಮೊದಲ ಪ್ರಮಾಣೀಕೃತ ಹೆವಿ ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ಆಗಿದೆ ಎಂದು ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ವಿ.ಪ್ರದೀಪ್ ಹರ್ಷ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಒಲೆಕ್ಟ್ರಾ ಭಾರತದಲ್ಲಿ ಎಲೆಕ್ಟ್ರಿಕ್ ಹೆವಿ ವೆಹಿಕಲ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲು ಉತ್ಸುಕವಾಗಿದೆ. ಒಲೆಕ್ಟ್ರಾ ಇ-ಟಿಪ್ಪರ್ ಭಾರತದ ಮೊದಲ ಪ್ರಮಾಣೀಕೃತ ಹೆವಿ-ಡ್ಯೂಟಿ ಎಲೆಕ್ಟ್ರಿಕ್ ಟಿಪ್ಪರ್ ಆಗಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನಗಳಲ್ಲಿ ಇ-ಟಿಪ್ಪರ್​​ನ ಮೂಲ ಮಾದರಿ ಪ್ರದರ್ಶಿಸಿದ್ದೇವೆ, ಇದು ಹೆಚ್ಚಿನ ಕುತೂಹಲ ಮತ್ತು ಉತ್ಸಾಹ ಸೃಷ್ಟಿಸಿತು. 20 ಇ-ಟಿಪ್ಪರ್​ಗಳ ಮೊದಲ ಆರ್ಡರ್ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲೇ ಇ-ಟಿಪ್ಪರ್ ಮತ್ತು ಎಲೆಕ್ಟ್ರಿಕ್ ಟ್ರಕ್​​ನ ರೂಪಾಂತರಗಳನ್ನು ಬಿಡುಗಡೆ ಮಾಡಲಿದ್ದೇವೆ. ಇದು ನಮ್ಮ ಪ್ರಯಾಣದ ಆರಂಭವಷ್ಟೇ ಎಂದು ಪ್ರದೀಪ್ ಸಂತಸ ಹಂಚಿಕೊಂಡಿದ್ದಾರೆ.

    Olectra Tipper

    ಇದನ್ನೂ ಓದಿ: ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್​ನೊಂದಿಗೆ ನಾವು ನಿರ್ಮಾಣ, ಮೂಲಸೌಕರ್ಯ, ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ತರುತ್ತಿದ್ದೇವೆ. ಕೆಲಸದ ಸ್ಥಳಗಳಿಗೆ ಸಾಗಿಸಬೇಕಾದ ವಸ್ತುಗಳ ಪ್ರಮಾಣದಿಂದಾಗಿ ಈ ಕ್ಷೇತ್ರಗಳು ಹೆಚ್ಚು ಬೇಡಿಕೆ ಹೊಂದಿವೆ. ಒಲೆಕ್ಟ್ರಾ ಎಲೆಕ್ಟ್ರಿಕ್ ಟಿಪ್ಪರ್ ಟೋಟಲ್ ಕಾಸ್ಟ್ ಆಫ್ ಓನರ್​ಷಿಪ್ (ಟಿಸಿಒ) ವಿಷಯದಲ್ಲಿ ವೆಚ್ಚ- ಪರಿಣಾಮಕಾರಿ ಆಗಿದ್ದು, ಮಾಲೀಕರು ತಮ್ಮ ಕಾರ್ಯಾಚರಣೆಯ ಲಾಭ ಸುಧಾರಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಕೆಲಸದ ಸ್ಥಳಗಳಲ್ಲಿ ಹಗಲು-ರಾತ್ರಿ ಒಲೆಕ್ಟ್ರಾದ ಇ-ಟಿಪ್ಪರ್​ಬಳಸಬಹುದು, ಏಕೆಂದರೆ ಅದು ಶಬ್ದಮಾಲಿನ್ಯವಿಲ್ಲದೆ ಚಲಿಸಲಿದೆ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆ ಹೊಂದಿದೆ. 2000ರಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್ (ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿ)- ಎಂಇಐಎಲ್ ಸಮೂಹದ ಭಾಗವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಬಸ್​ಗಳನ್ನು ತಯಾರಿಸುವಲ್ಲಿ ಪ್ರವರ್ತಕವಾಗಿದೆ. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಭಾರತದ ಅತಿದೊಡ್ಡ ಸಿಲಿಕಾನ್ ರಬ್ಬರ್/ ಕಾಂಪೋಸಿಟ್ ಇನ್ಸುಲೇಟರ್ ತಯಾರಕ ಕಂಪನಿಯಾಗಿದೆ.

    16 ಸಲ ಚುಚ್ಚಿಕೊಂದ ಹುಚ್ಚುಪ್ರೇಮಿ; ಪ್ರೇಯಸಿಯ ಕೊಲ್ಲಲೆಂದೇ 2 ಚಾಕುಗಳನ್ನು ಖರೀದಿಸಿದ್ದ: ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?

    ರಾಜ್ಯದ ಜನತೆಗೆ ರೈಲ್ವೇಯಿಂದ ಸಿಹಿಸುದ್ದಿ: ಇಲ್ಲೆಲ್ಲ ನಿಲ್ಲಲಿವೆ ಈ ರೈಲುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts