More

    ಹೊಸವರ್ಷಕ್ಕೆ ‘ಒಲವೇ’ ಆಲ್ಬಂ ಸಾಂಗ್ ರಿಲೀಸ್

    ಬೆಂಗಳೂರು: ಸುಕೃಷಿ ಕ್ರಿಯೇಷನ್ಸ್ ಸಂಸ್ಥೆ ವಿನೂತನ ಆಲ್ಬಮ್ ಸಾಂಗ್ ಒಂದನ್ನು ಹೊರತಂದಿದೆ. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡ ನಟಿ ಕೃತಿಕಾ ರವೀಂದ್ರ ಈ ಹಾಡಿನಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ವರುಣ್ ಹೆಗಡೆ ನಾಯಕನಾಗಿದ್ದಾರೆ.

    ಇದನ್ನೂ ಓದಿ: ಕನ್ನಡದಲ್ಲಿ ವೆಬ್​ಸೀರೀಸ್​ಗಳಿಲ್ಲ ಎನ್ನುವವರಿಗೆ ‘ಸೂಪರ್​ ಕಪಲ್​’

    ಈ ಹಾಡಿಗೆ ಯುವ ನಿರ್ದೇಶಕಿ ಎಂ.ಎಸ್​. ಶಿವಾನಿ ನಿರ್ದೇಶನ ಮಾಡಿದ್ದು, ಅವರ ಪರಿಕಲ್ಪನೆಗೆ ತಕ್ಕಂತೆ ಗಾಯನ, ಸಾಹಿತ್ಯ ಹಾಗೂ ಸಂಗೀತ ಒದಗಿಸಿದ್ದಾರೆ ಗಾಯಕ ಡಾ. ಸುಚೇತನ್ ರಂಗಸ್ವಾಮಿ. ಒಂದು ಭಾವಪೂರ್ಣ ಕಥೆಯ ನಿರೂಪಣೆ ಹೊಂದಿರುವ ಈ ಗೀತೆಯ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ.

    ಇದನ್ನೂ ಓದಿ: ಮದ್ವೆಗೆ ಹುಡ್ಗಿನೇ ಸಿಗ್ತಿಲ್ಲ, ನಾನಿನ್ನೂ ‘ಮಿ.ಬ್ಯಾಚುಲರ್’​ ಅಂತಿದಾರೆ ಡಾರ್ಲಿಂಗ್​ ಕೃಷ್ಣ!

    ಹಾಡಿಗೆ ಕಾರ್ತಿಕ್ ಹಾಗೂ ನವೀನ್ ಛಾಯಾಗ್ರಹಣ ಮಾಡಿದ್ದಾರೆ. K.G.F ಖ್ಯಾತಿಯ ಸಂಕಲನಕಾರರಾದ ಶ್ರೀಕಾಂತ್ ಈ ಹಾಡಿನ ವೀಡಿಯೋವನ್ನು ಎಡಿಟ್ ಮಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಇಂದು ಹಾಡು ಬಿಡುಗಡೆ ಆಗಿದೆ.

    ತಮಿಳುನಾಡಿನ ಶನೈಶ್ವರ ದೇವಸ್ಥಾನಕ್ಕೆ ನಟ ಯಶ್​ ಮತ್ತು ಡಿಸಿಎಂ ಅಶ್ವತ್ಥ್ ನಾರಾಯಣ್ ಭೇಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts