More

    ಅರಬ್ಬರು ತಿರುಗಿ ನೋಡುವಂತೆ ತೈಲ ಸಾಮ್ರಾಜ್ಯ ಕಟ್ಟಿದ ಭಾರತೀಯ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ವಯನಾಡ್: ಕೇರಳದ ಸಾಮಾನ್ಯ ರೈತನ ಮಗ ಯಾರೂ ನಿರೀಕ್ಷಿಸಲಾಗದ ಎತ್ತರಕ್ಕೇರಿದ್ದ. ಇದ್ದೂರಲ್ಲೇ ಸಣ್ಣಪುಟ್ಟ ವಹಿವಾಟು ನಡೆಸುತ್ತ ಕೈಸುಟ್ಟುಕೊಂಡಿದ್ದ ವ್ಯಕ್ತಿ. ಬೇರೆಯದೇ ದಾರಿ ಕಂಡುಕೊಳ್ಳಲು ಗಲ್ಫ್ ರಾಷ್ಟ್ರಕ್ಕೆ ಹಾರಿದ.
    ಆರಂಭದಲ್ಲಿ ಸಣ್ಣ ಕಂಪನಿಯೊಂದರಲ್ಲಿ ಅಕೌಟೆಂಟ್ ಆಗಿದ್ದ. ಬಳಿಕ ಅರಬ್ಬರು ಕೂಡ ತಿರುಗಿ ನೋಡುವಂತೆ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ.

    ಮೈಸೂರಿನಿಂದ ಕೇವಲ 110 ಕಿ.ಮೀ ದೂರದಲ್ಲಿರುವ ಕೇರಳದ ಮಾನಂದವಾಡಿಯ ಜಾಯ್ ಅರಕ್ಕಳ್ ಈ ಯಶಸ್ಸಿನ ಸಾಧಕ. ದುಬೈನಲ್ಲಿ ಮುಖ್ಯ ಕಚೇರಿ ಹೊಂದಿರುವ ಇನ್ನೋವಾ ರಿಫೈನರೀಸ್ ಹಾಗೂ ಟ್ರೇಡಿಂಗ್ ಕಂಪನಿ ಸಂಸ್ಥಾಪಕ. ಇದರ ವಾರ್ಷಿಕ ವಹಿವಾಟೇ ಎರಡು ಲಕ್ಷ ಕೋಟಿ ರೂ.ಗೂ ಅಧಿಕ. ಸಾರ್ವಜನಿಕರಿಂದ ಬಂಡವಾಳ ಸಂಗ್ರಹಿಸಲು ಕೆಲ ದಿನಗಳಲ್ಲೇ ಈ ಕಂಪನಿ ಷೇರುಪೇಟೆಯನ್ನು ಪ್ರವೇಶಿಸಲು ಸಿದ್ಧತೆ ನಡೆಸಿತ್ತು.

    ಇದನ್ನೂ ಓದಿ; ನೇಪಾಳದಲ್ಲಿ ಸಂಭವಿಸಿದ ಭೂಕಂಪಕ್ಕೆ ಕುಸಿಯಿತಾ ಮೌಂಟ್ ಎವರೆಸ್ಟ್​?

    ದುಬೈ, ಯುಎಇ, ಶಾರ್ಜಾ ಸೇರಿ ಮಧ್ಯಪ್ರಾಚ್ಯದ ಎಲ್ಲ ರಾಷ್ಟ್ರಗಳಲ್ಲಿ ಜಾಯ್ ಕಂಪನಿ ಹೊಂದಿದ್ದರು. ಶಾರ್ಜಾದ ಹಮ್ರಿಯಾದಲ್ಲಿ ಇನ್ನೊಂದು ತಿಂಗಳಲ್ಲಿ ಮತ್ತೊಂದು ರಿಫೈನರಿಯನ್ನು ಜಾಯ್ ಆರಂಭಿಸಬೇಕಿತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ಆಯಿಲ್ ಟ್ಯಾಂಕರ್​ಗಳನ್ನು ಸ್ವಚ್ಛಗೊಳಿಸುವ ಅತಿ ದೊಡ್ಡ ಘಟಕ ಸ್ಥಾಪಿಸಿದ್ದರು. ಇದು ಏಕಕಾಲಕ್ಕೆ 2,500 ಟ್ಯಾಂಕರ್​ಗಳನ್ನು ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿತ್ತು. ಆಫ್ರಿಕಾ ರಾಷ್ಟ್ರಗಳಲ್ಲೂ ಇವರ ತೈಲೋತ್ಪನ್ನಗಳ ವಹಿವಾಟು ಇತ್ತು. ಭಾರತದಲ್ಲೂ ಹಲವು ಕಂಪನಿಗಳಲ್ಲಿ ಪಾಲು ಹೊಂದಿದ್ದರು.
    ಲಾಜಿಸ್ಟಿಕ್ ಹಾಗೂ ಟೆಲಿಕಾಮ್ ಕ್ಷೇತ್ರಕ್ಕೂ ಜಾಯ್ ಕಾಲಿರಿಸಿದ್ದರು. ಅರಕ್ಕಳ್‍ಗೆ ಯುಎಇ ಸರ್ಕಾರ ಶ್ರೇಷ್ಠ ಉದ್ಯಮಿ ಪ್ರಶಸ್ತಿ ನೀಡಿತ್ತು. ಕಳೆದ ವರ್ಷವಷ್ಟೇ ಗೋಲ್ಡ್ ಕಾರ್ಡ್ ವೀಸಾ ನೀಡಿತ್ತು. ಸಾಮಾನ್ಯವಾಗಿ ಉದ್ಯಮಿಗಳಿಗೆ 10 ವರ್ಷಗಳ ಅವಧಿಗೆ ಈ ವೀಸಾ ನೀಡಲಾಗುತ್ತದೆ.
    ವೈಯಕ್ತಿಕವಾಗಿಯೇ ಸಾವಿರಾರು ಕೋಟಿ ರೂ.ಗಳ ಸಂಪತ್ತಿನ ಒಡೆಯನಾಗಿದ್ದರು ಜಾಯ್. ಹೀಗಿದ್ದರೂ ಕಳೆದ ಏಪ್ರಿಲ್ 23ರಂದು ದುಬೈನ ಬಿಜಿನೆಸ್ ಬೇ ಪ್ರದೇಶದಲ್ಲಿರುವ ಕಟ್ಟಡದ 14ನೇ ಅಂತಸ್ತಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

    ಇದನ್ನೂ ಓದಿ; ಹಬ್ಬಕ್ಕೆ ಎನ್ನುವಂತೆ ಪ್ರತಿವರ್ಷವೂ ಬರುತ್ತಂತೆ ಕರೊನಾ; ಚೀನಾದಿಂದಲೇ ಬಂದಿದೆ ವಾರ್ನಿಂಗ್​

    ವಿಶ್ವವನ್ನೇ ಕಂಗೆಡಿಸಿರುವ ಕರೊನಾದಿಂದಾಗಿ ಕಂಪನಿಯ ವಿವಿಧ ಯೋಜನೆಗಳಲ್ಲಿ ಉಂಟಾಗುತ್ತಿರುವ ವಿಳಂಬ ಅವರನ್ನು ಕಂಗೆಡಿಸಿತ್ತು. ಜತೆಗೆ, ತೈಲ ಬೆಲೆಯಲ್ಲಿ ಭಾರಿ ಕುಸಿತದಿಂದಾಗಿ ಕಂಪನಿ ಸಾಕಷ್ಟು ನಷ್ಟದಲ್ಲಿತ್ತು. ಆದರೆ, ಮುಂದಿನ ಮೂರು ತಿಂಗಳಲ್ಲಿ ಅವುಗಳನ್ನು ಸರಿದೂಗಿಸಿಕೊಳ್ಳುವ ವಿಶ್ವಾಸ ಅವರಿಗಿತ್ತು ಎನ್ನುತ್ತವೆ ಆಪ್ತ ವಲಯದ ಮೂಲಗಳು.
    ಯುಎಇಯಲ್ಲಿ ಉದ್ಯಮಿಯೊಬ್ಬನ ಯುಎಇ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಅದಕ್ಕೂ ಜಾಯ್‍ಗೂ ಯಾವುದೇ ಸಂಬಂಧವಿರಲಿಲ್ಲ ಎನ್ನಲಾಗಿದೆ. ಆದರೆ, ಆರ್ಥಿಕ ಸಂಕಷ್ಟವೇ ಜಾಯ್ ಆತ್ಮಹತ್ಯೆಗೆ ಕಾರಣ ಎನ್ನುತ್ತವೆ. ಕುಟುಂಬದ ಮೂಲಗಳು.
    ದುಬೈ ಪೊಲೀಸರು ಪ್ರಕರಣದ ಪ್ರಾಥಮಿಕ ತನಿಖೆ ಕೈಗೊಂಡು ಇದೊಂದು ಆತ್ಮಹತ್ಯೆ ಎಂದೇ ಹೇಳಿದ್ದಾರೆ. ಕೇಸ್‍ನ ಇತರ ಆಯಾಮಗಳ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.

    ಇದನ್ನೂ ಓದಿ; ನಿಷ್ಪ್ರಯೋಜಕವೆಂದು ಗುಜರಿ ಸೇರಿದ್ದ ಔಷಧ ಕರೊನಾಗೆ ರಾಮಬಾಣ? ಬಳಸಿ ಎಂದು ಭಾರತೀಯ ತಜ್ಞರು ಹೇಳುತ್ತಿರೋದೇಕೆ?

    ಜಾಯ್​ ಸಾವಿನಿಂದ ಆತನ ಕುಟುಂಬಕ್ಕಷ್ಟೇ ಆಘಾತವಾಗಿಲ್ಲ. ಇವರ ಕಂಪನಿಯಲ್ಲಿದ್ದ ಸಾವಿರಾರು ಭಾರತೀಯ ಕುಟುಂಬಗಳು ಕೂಡ ಕಂಗಾಲಾಗಿವೆ, ಉದ್ಯೋಗ ಕಳೆದುಕೊಲ್ಲಲಿವೆ. ಲಾಕ್​ಡೌನ್​ ಬಳಿಕ ಭಾರತಕ್ಕೆ ಮರಳಲು ಕೊಲ್ಲಿ ರಾಷ್ಟ್ರದಲ್ಲಿರುವ 5 ಲಕ್ಷಕ್ಕೂ ಅಧಿಕ ಕೇರಳಿಗರೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಟ್ಟಾರೆ ಭಾರತೀಯರ ಸಂಖ್ಯೆಯನ್ನು ಗಮನಿಸುವುದಾದರೆ, 10ಲಕ್ಷಕ್ಕೂ ಅಧಿಕ ಜನರು ಭಾರತಕ್ಕೆ ಮರಳಲಿದ್ದಾರೆ. ಅಂದರೆ, ಬಹುತೇಕರು ನಿರುದ್ಯೋಗಿಗಳಾಗಲಿದ್ದಾರೆ.

    ಇದೆಂಥ ದೌರ್ಭಾಗ್ಯ.. ಕೇರಳದ ಅತಿದೊಡ್ಡ ಅರಮನೆಯಲ್ಲಿ ಅದರ ಮಾಲೀಕ ವಾಸವಿದ್ದದ್ದು ಕೇವಲ ಒಂದು ತಿಂಗಳಷ್ಟೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts