More

    ರೆಡ್​ ಹ್ಯಾಂಡೆಡ್ ಆಗಿ ಸಿಕ್ಕಿಹಾಕಿಕೊಂಡ ವಸಂತಕುಮಾರಿ; ಮುಂಗಡ ಪಡೆದು ಬಲೆಗೆ ಬಿದ್ದ ವಿಶೇಷ ಭೂಸ್ವಾಧೀನಾಧಿಕಾರಿ..

    ಬೆಂಗಳೂರು: ಜಮೀನು ಭೂ ಸ್ವಾಧೀನಕ್ಕೆ ಒಳಗಾಗಿದೆಯೇ ಇಲ್ಲವೇ ಎಂದು ಮಾಹಿತಿ ಮತ್ತು ಹಿಂಬರಹ ನೀಡಲು ಲಂಚ ಸ್ವೀಕರಿಸುತ್ತಿದ್ದ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿ ವ್ಯವಸ್ಥಾಪಕಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾರೆ.

    ವಿ.ವಿ. ಟವರ್ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯ ವ್ಯವಸ್ಥಾಪಕಿ ವಸಂತಕುಮಾರಿ ಬಂಧಿತರು. ರಾಜರಾಜೇಶ್ವರಿನಗರದ ನಿವಾಸಿಯೊಬ್ಬರು ಆನೇಕಲ್ ತಾಲ್ಲೂಕು ಕಸಬಾ ಹೋಬಳಿ ಬಗ್ಗನದೊಡ್ಡಿ ಗ್ರಾಮದಲ್ಲಿನ 5 ಎಕರೆ ಜಮೀನು ಗೃಹ ಮಂಡಳಿಯ ಭೂ ಸ್ವಾಧೀನಕ್ಕೆ ಒಳಪಟ್ಟಿದೆಯೇ ಇಲ್ಲವೇ ಎಂಬ ಮಾಹಿತಿಯನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ಹೊಸ ವೈದ್ಯಕೀಯ ಕಾಯ್ದೆ ವಿರೋಧಿಸಿ 56 ಹಿರಿಯ ವೈದ್ಯರ ರಾಜೀನಾಮೆ!; ಪ್ರತಿಷ್ಠಿತ ಆಸ್ಪತ್ರೆಗಳ ಉನ್ನತ ಸ್ಥಾನಕ್ಕೆ ವಿದಾಯ..

    ಅರ್ಜಿ ಸ್ವೀಕರಿಸಿದ ವಸಂತಕುಮಾರಿ, ಮಾಹಿತಿ ಮತ್ತು ಹಿಂಬರಹ ನೀಡುವ ಸಲುವಾಗಿ 30 ಸಾವಿರ ರೂ. ಲಂಚಕ್ಕೆ ಬೇಡಿಕೆವೊಡ್ಡಿ 5 ಸಾವಿರ ರೂ. ಮುಂಗಡವಾಗಿ ಪಡೆದಿದ್ದರು. ಉಳಿದ ಹಣ ನೀಡುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ಒಪ್ಪದ ಅರ್ಜಿದಾರ, ಎಸಿಬಿಗೆ ದೂರು ನೀಡಿದ್ದರು.

    ಇದನ್ನೂ ಓದಿ: ಸಾಯಲಿಕ್ಕೂ ಮರಳಿ ಯತ್ನವ ಮಾಡಿದ; ಒಮ್ಮೆ ಸೋತರೂ ಬಿಡದೇ ಸತ್ತ..

    ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು, ಗುರುವಾರ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿದಾರರಿಂದ 25 ಸಾವಿರ ರೂ. ಲಂಚ ಸ್ವೀಕರಿಸುವಾಗ ವಸಂತಕುಮಾರಿಯನ್ನು ರೆಡ್‌ಹ್ಯಾಂಡೆಡ್​ ಆಗಿ ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಾಳೆ ಇಲ್ಲ ಕರ್ನಾಟಕ ಬಂದ್; ಸಿಎಂ ಮನವೊಲಿಕೆಗೆ ಕನ್ನಡಪರ ಹೋರಾಟಗಾರರ ಒಪ್ಪಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts