More

    ಪ್ಲಾಸ್ಟಿಕ್​​​ ಕಪ್​​​ ಅಲ್ಲ, ಪೇಪರ್​​ ಕಪ್​​ನಲ್ಲಿ ಟೀ ಕುಡಿದರೂ ಅಪಾಯ!

    ನವದೆಹಲಿ: ಪ್ಲಾಸ್ಟಿಕ್​​ ಕಪ್​​ನಲ್ಲಿ ಚಹಾ ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಕೇಳಿದ್ದೇವೆ… ಆದರೆ ಪೇಪರ್​​​ ಕಪ್​​ನಲ್ಲಿ ಟೀ-ಕಾಫಿ ಕುಡಿದರೂ ಅಪಾಯ ಎಂದು ಖರಗ್​​​ಪುರ ಐಐಟಿ ಸಂಶೋಧನೆ ತಿಳಿಸುತ್ತದೆ.

    ಖರಗ್​​​ಪುರ ಐಐಟಿ ನಡೆಸಿದ ಸಂಶೋಧನೆಯ ಪ್ರಕಾರ, ಪ್ರತಿನಿತ್ಯ ಪೇಪರ್ ಕಪ್​​​ಗಳಲ್ಲಿ ಚಹಾ ಅಥವಾ ಕಾಫಿ ಸೇವಿಸುವುದರಿಂದ 75,000 ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹಕ್ಕೆ ಸೇರುತ್ತವೆ. ಇದಕ್ಕೆ ಕಾರಣ, ಸಾಮಾನ್ಯವಾಗಿ ಪೇಪರ್ ಕಪ್​​​ಗಳು ತೆಳುವಾದ ಪ್ಲಾಸ್ಟಿಕ್ ಪದರವನ್ನು ಹೊಂದಿರುತ್ತವೆ. ಹೀಗಾಗಿ ಅವು ಕೇವಲ 15 ನಿಮಿಷದಲ್ಲಿ ಬಿಸಿ ನೀರಿನಲ್ಲಿ ಕರಗುತ್ತವೆ. ಹೀಗಾಗಿ, ಪೇಪರ್ ಕಪ್​​​ಗಳಲ್ಲಿ ಬಿಸಿ ದ್ರಾವಣವನ್ನು ಹಾಕಿದಾಗ ಸಮ್ಮಿಶ್ರಣಗೊಂಡಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಹಾಗೂ ವಿಷಕಾರಿ ಅಂಶಗಳು ಮನುಷ್ಯನ ದೇಹ ಹೊಕ್ಕುತ್ತವೆ.

    ‘ನಾವು ನಡೆಸಿದ ಸಂಶೋಧನೆಯಿಂದ 100 ಎಂಎಲ್‌ ಬಿಸಿ ನೀರನ್ನು ಪೇಪರ್‌ ಕಪ್‌ಗಳಲ್ಲಿ 15 ನಿಮಿಷಗಳ ಕಾಲ ಇಟ್ಟಾಗ, 25,000 ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ಬಿಡುಗಡೆ ಆಗಿರುವುದು ಕಂಡುಬಂದಿದೆ. ಈ ಪ್ರಕಾರ, ವ್ಯಕ್ತಿಯೊಬ್ಬ ಒಂದು ದಿನಕ್ಕೆ 3 ಕಪ್‌ ಟೀ ಅಥವಾ ಕಾಫಿಯನ್ನು ಪೇಪರ್‌ ಕಪ್‌ನಲ್ಲಿ ಸೇವಿಸಿದರೆ, 75,000 ಸೂಕ್ಷ್ಮ ಪ್ಲಾಸ್ಟಿಕ್‌ ಕಣಗಳು ದೇಹಕ್ಕೆ ಸೇರುತ್ತವೆ. ಅವು ಬರಿಗಣ್ಣಿಗೆ ಕಾಣಿಸುವುದಿಲ್ಲ..’ ಎಂದು ಐಐಟಿ ಸಂಶೋಧಕಿ ತಿಳಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts