More

    ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ

    ಬಾಳೆಹೊನ್ನೂರು: ರಂಭಾಪುರಿ ಪೀಠದಲ್ಲಿ ಶುಕ್ರವಾರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.

    ಮಹಾರಥೋತ್ಸವಕ್ಕೂ ಮುನ್ನ ಪೀಠದಲ್ಲಿ ಹೋಮ, ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ವೀರಭದ್ರಸ್ವಾಮಿ ಅಲಂಕೃತ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತು ತಂದು ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಂಭಾಪುರಿ ಪೀಠದ ಶಾಖಾ ಮಠಗಳ ಸ್ವಾಮೀಜಿಗಳು, ಭಕ್ತರು ಇದ್ದರು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಸ್ಥಳೀಯ ಭಕ್ತರು ಅಕ್ಕಿ, ಕಾಫಿ, ಅಡಕೆ, ಏಲಕ್ಕಿ ಮತ್ತಿತರರ ದವಸ, ಧಾನ್ಯಗಳನ್ನು ಎರಚಿ ಭಕ್ತಿ ಸಮರ್ಪಿಸಿದರು. ಎಡೆಯೂರು ಹಾಗೂ ಮಳಲಿ ಶಾಖಾ ಮಠಗಳ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರಥಕಾಣಿಕೆ ಸ್ವೀಕರಿಸಲಾಯಿತು.
    ರಥೋತ್ಸವದಲ್ಲಿ ರಂಭಾಪುರಿ ಮಠ, ಬಾಳೆಹೊನ್ನೂರು, ರೇಣುಕನಗರ, ವಾಟುಕೊಡಿಗೆ, ಕಡ್ಲೇಮಕ್ಕಿ, ಮೆಣಸುಕೊಡಿಗೆ, ಅರಳಿಕೊಪ್ಪ, ಕೋಣೆಮನೆ, ಇಟ್ಟಿಗೆ-ಸೀಗೋಡು, ಅಕ್ಷರನಗರ, ವೀರಭದ್ರೇಶ್ವರ ನಗರ, ಸೋಮೇಶ್ವರ ನಗರ, ಕುಂಬತ್ತಿ, ತಲವಾನೆ, ಸರಗಳಲೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಾಗೂ ರಾಜ್ಯದ ವಿವಿಧ ಭಾಗಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಮಧ್ಯಾಹ್ನ ಸಾಂಕೇತಿಕವಾಗಿ ಪೀಠದ ಆವರಣದಲ್ಲಿ ರಥ ಎಳೆಯಲಾಯಿತು. ರಾತ್ರಿ ವಿವಿಧ ವಾದ್ಯಗಳೊಂದಿಗೆ ಮಹಾರಥವನ್ನು ಪೀಠದ ಆವರಣದಿಂದ ಸಂಪಿಗೆಕಟ್ಟೆಯ ಮೂಲ ಸೋಮೇಶ್ವರ ದೇವಾಲಯದ ಪರಿಸರದವರೆಗೆ ಭಕ್ತರು ಎಳೆದು ಸಂಭ್ರಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts