More

    Remedies for Dry Hair | ಒಣ ಕೂದಲಿನ​ ತೊಂದರೆಯೇ? ಇಲ್ಲಿವೆ 5 ಸರಳ ಮನೆಮದ್ದುಗಳ ಐಡಿಯಾ!

    ಬೆಂಗಳೂರು: ಕೂದಲು ಮನುಷ್ಯನ ಸೌಂದರ್ಯಕ್ಕೆ ಭೂಷಣ. ಜನ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ಬ್ಯೂಟಿ ಟಿಪ್ಸ್​ ಫಾಲೋ ಮಾಡುತ್ತಾರೆ. ಉದ್ದ ಮತ್ತು ದಟ್ಟವಾದ ಕೂದಲು ಪ್ರತಿಯೊಬ್ಬ ಹುಡುಗಿಯ ಅಪೇಕ್ಷೆ. ಆದರೆ ಕೆಲವೊಮ್ಮೆ ಹಲವಾರು ಕಾರಣಗಳಿಂದ ಕೂದಲು ಹಾಳಾಗುತ್ತದೆ. ಧೂಳು ಮತ್ತು ವಾಯುಮಾಲಿನ್ಯದಿಂದ ಕೂದಲು ಜೀವವಿಲ್ಲದೆ ಒಣಗಿದಂತಾಗುತ್ತದೆ. ಉದುರಲು ಪ್ರಾರಂಭವಾಗುತ್ತದೆ. ಆದರೆ ಕೆಲವೊಮ್ಮೆ ನೆತ್ತಿಯ ತೊಂದರೆಯಿಂದ ಕೂದಲು ಹಾಳಾಗುತ್ತದೆ. ನೆತ್ತಿ​​ ಒಣಗಿದಾಗ ಕೂದಲು ಪೌಷ್ಟಿಕತೆ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಕೂದಲಿನ ಸುರಕ್ಷತೆಗಾಗಿ ಒಣ ಕೂದಲಿನ ಸಮಸ್ಯೆಯನ್ನು ತಕ್ಷಣದಲ್ಲಿ ನಿವಾರಿಸಿಕೊಳ್ಳುವುದು ಅಗತ್ಯ. ಅದಕ್ಕಾಗಿ ಇಲ್ಲಿವೆ ಕೆಲವು ಮನೆಮದ್ದು.

    ಅಲೋವೆರಾ

    ಚರ್ಮ ಮತ್ತು ಕೂದಲಿಗೆ ಅಲೋವೆರಾ ಬಹಳ ಪ್ರಯೋಜನಕಾರಿ. ಬ್ಯಾಕ್ಟೀರಿಯಾವನ್ನು ಹೊರಹಾಕಲು ಅಲೋವೆರಾ ಸಹಾಯ ಮಾಡುತ್ತದೆ. ಇದರಿಂದ ಚರ್ಮ ಹೈಡ್ರೇಟ್​​ ಆಗಿರುತ್ತದೆ. ಒಣ ಕೂದಲಿ​ಗೆ ಅಲೋವೆರಾ ಹಚ್ಚುವುದರಿಂದ ತೇವಾಂಶ ಹೆಚ್ಚಾಗುತ್ತದೆ. ಅಲೋವೆರಾ ಜೆಲ್​​ ಅನ್ನು ನೀರಿನಲ್ಲಿ ಹಾಕಬೇಕು. ಆ ಮಿಶ್ರಣವನ್ನು ಕೂದಲು ಮತ್ತು ನೆತ್ತಿ​ಗೆ ಹಚ್ಚಿ ಮಸಾಜ್​​ ಮಾಡಬೇಕು. 15-20 ನಿಮಿಷಗಳ ನಂತರ ಕೂದಲನ್ನು ತೊಳೆಯಬೇಕು. ಇದನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಒಣ ಕೂದಲ ದೋಷದಿಂದ ದೂರಾಗಬಹುದು.

    ನಿಂಬೆ ಹಣ್ಣು

    ನಿಂಬೆ ಹಣ್ಣು ವಿಟಮಿನ್​​ ಇ, ಎ ಮತ್ತು ಸಿಯಿಂದ ಕೂಡಿದೆ. ಇದನ್ನು ಹೊರತುಪಡಿಸಿ Fatty acid ಕೂಡ ಹೊಂದಿದೆ. ಈ ಎಲ್ಲಾ ಪೌಷ್ಟಿಕಾಂಶಗಳು ಒಣ ಕೂದಲ ತೊಂದರೆಯಿಂದ ದೂರಾಗಲು ಪ್ರಯೋಜನಕಾರಿ. ಇದರೊಂದಿಗೆ ಕೂದಲು ಬೆಳೆಯಲು ಮತ್ತು ಹೊಟ್ಟಿನ ಸಮಸ್ಯೆಯನ್ನು ದೂರಗೊಳಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ಬೆರಳಿನಿಂದ ನಿಂಬೆ ಹಣ್ಣಿನ ರಸವನ್ನು ಕೂದಲಿಗೆ ಹಚ್ಚಿ 10-15 ನಿಮಿಷದ ನಂತರ ಕೂದಲನ್ನು ತೊಳೆಯಬೇಕು. ಇದನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಒಣ ಕೂದಲ ದೋಷದಿಂದ ದೂರವಾಗಿ ಕೂದಲು ದಟ್ಟವಾಗಿ ಬೆಳೆಯುತ್ತದೆ.

    ಎಣ್ಣೆ ಹಚ್ಚುವುದು

    ಎಣ್ಣೆಯ ಮಸಾಜ್​​ ಒಣ ಕೂದಲಿಗೆ​ ಸರಳ ಮನೆಮದ್ದು. ಕೊಬ್ಬರಿ ಎಣ್ಣೆ, ಜೊಜೊಬಾ ಎಣ್ಣೆ, ಹರಳೆಣ್ಣೆ, ಆಲಿವ್ ಎಣ್ಣೆ ಬಹಳ ಉಪಯೋಗಕಾರಿ. ನೆತ್ತಿಯ ತೇವಾಂಶವನ್ನು ಕಾಪಾಡುವುದರ ಜತೆಗೆ ತಲೆಯಲ್ಲಿ ಕೊಳೆಯ ಶೇಖರಣೆ ಆಗದಂತೆ ತಡೆಯುತ್ತದೆ. ಬೆಚ್ಚಗಿನ ಎಣ್ಣೆಯ ಮಸಾಜ್​​​ ಬಹಳ ಉಪಯುಕ್ತ.

    ಅಡಿಗೆ ಸೋಡಾ ಮತ್ತು ರೋಸ್ ವಾಟರ್

    ಆಂಟಿಫಂಗಲ್ (AntiFungal) ಮತ್ತು ಆಂಟಿಬ್ಯಾಕ್ಟೀರಿಯಲ್ (AntiBacterial) ಏಜೆಂಟ್‌ಗಳನ್ನು ಹೊಂದಿರುವ ಅಡಿಗೆ ಸೋಡಾವನ್ನು ಬಳಸುವುದರಿಂದ ಒಣ ನೆತ್ತಿಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಏಜೆಂಟ್‌ಗಳು ನೆತ್ತಿಯ ಪಿಎಚ್​ (pH) ಮಟ್ಟವನ್ನು ಕಡಿಮೆ ಮಾಡುತ್ತವೆ. ಇದರೊಂದಿಗೆ ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಅಡುಗೆ ಸೋಡಾದಲ್ಲಿ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಬೇಕು. ಪೇಸ್ಟ್​ ಅನ್ನು 3-4 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ತಲೆಯನ್ನು ತೊಳೆಯಬೇಕು.

    ವಿಟಮಿನ್ ಇ ಕ್ಯಾಪ್ಸುಲ್

    ವಿಟಮಿನ್-ಇ (Vitamin-E) ಕ್ಯಾಪ್ಸುಲ್ ಚರ್ಮಕ್ಕೆ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ಒಣ ನೆತ್ತಿಯನ್ನು ತೇವಗೊಳಿಸುವುದರ ಜತೆಗೆ ಕೂದಲಿನ ಬೆಳವಣಿಗೆಗೆ ತುಂಬಾ ಉಪಯುಕ್ತ. ವಿಟಮಿನ್-ಇ ಕ್ಯಾಪ್ಸುಲ್‌ನಲ್ಲಿರುವ ಎಣ್ಣೆಯನ್ನು ಹೊರತೆಗೆದು ನತ್ತಿ​​ಗೆ ಮಸಾಜ್ (Massage)ಮಾಡಬೇಕು. ಒಂದು ಗಂಟೆಯ ನಂತರ ಕೂದಲನ್ನು ತೊಳೆಯಬೇಕು. (ಏಜೆನ್ಸೀಸ್)

    ವಯಸ್ಸಿಗೆ ಮೊದಲೇ ನಿಮಗೆ ಬಿಳಿ ಕೂದಲಾಗಿವೆಯೇ? ಅದನ್ನು ಮತ್ತೆ ಕಪ್ಪು ಮಾಡಲು 4 ಸುಲಭ ಮನೆಮದ್ದು ಇಲ್ಲಿವೆ!

    ತಿರುಪತಿಯಲ್ಲಿ ದಾಖಲೆ ನಿರ್ಮಿಸಿದ ವೈಕುಂಠ ಏಕಾದಶಿಯ ಕಾಣಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts